ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾಭ್ಯಾಸದೊಂದಿಗೆ ರಂಗಕಲೆಯ ಜ್ಞಾನ ಮುಖ್ಯ

Last Updated 17 ಏಪ್ರಿಲ್ 2014, 9:52 IST
ಅಕ್ಷರ ಗಾತ್ರ

ಬ್ರಹ್ಮಾವರ: ವಿದ್ಯಾಭ್ಯಾಸದೊಂದಿಗೆ ರಂಗ ಕಲೆಯ ಜ್ಞಾನ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಅತೀ ಅಗತ್ಯವಾಗಿ ಬೇಕಾಗಿದೆ ಎಂದು ಚೇರ್ಕಾಡಿ ಶಾರದಾ ಪ್ರೌಢಶಾಲೆಯ ಆಡಳಿತ ಮಂಡಳಿಯ ರಾಜೀವ್‌ ಆಳ್ವ ಹೇಳಿದರು.

ಚೇರ್ಕಾಡಿಯ ಶಾರದಾ ಪ್ರೌಢಶಾಲೆ ಯಲ್ಲಿ ಬುಧವಾರ ಅವರು ಕೋಶಿಕಾ ಸಾಂಸ್ಕೃತಿಕ ಸಂಘಟನೆಯ 17ನೇ ವರ್ಷದ ವಸಂತ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಜೀವನದಲ್ಲಿ ಗುರಿ, ಗುರು ಮತ್ತು ಸಮಯಪ್ರಜ್ಞೆ ಇರಬೇಕು. ಮಾನ ವೀಯ ಮೌಲ್ಯಗಳನ್ನು ವೃದ್ಧಿಸುವ, ಹೃದಯ ವೈಶಾಲ್ಯತೆಯನ್ನು ಬೆಳೆಸುವ ರಂಗಭೂಮಿ ವಿದ್ಯಾರ್ಥಿ ಗಳಲ್ಲಿ  ಶಿಸ್ತು ಸಂಯಮವನ್ನು ಕಲಿಸುತ್ತದೆ ಎಂದರು.

ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಜಾನಕಿ ಎಂ. ಬ್ರಹ್ಮಾವರ ಮಾತನಾಡಿ, ಜೀವನ ವ್ಯವಸ್ಥೆಗೆ ಮಕ್ಕಳನ್ನು ತಯಾರಿ ಮಾಡಲು ರಂಗಕಲೆ ಮುಖ್ಯ. ನಾಟಕ ರಂಗದಲ್ಲಿ ಆಸಕ್ತಿಯಿಂದ ತೊಡಗಿಸಿ ಕೊಂಡಾಗ ಅದು ಬದುಕಿಗೆ ದಾರಿ ಮಾಡಿಕೊಡುತ್ತದೆ. ನಾಟಕ ಕಲೆ ವ್ಯಕ್ತಿಯ ವ್ಯಕ್ತಿತ್ವವನ್ನು ವಿಕಸನ ಮಾಡು ವುದರೊಂದಿಗ ಸಮಾಜವನ್ನು ಸುಧಾರಿ ಸಲು, ಜನರಿಗೆ ಉತ್ತಮ ಸಂದೇಶವನ್ನು ನೀಡುತ್ತದೆ ಎಂದು ಹೇಳಿದರು.

ಶಾರದಾ ಪ್ರೌಢಶಾಲೆಯ ಮುಖ್ಯೋ ಪಾಧ್ಯಾಯ ವಿಷ್ಣುಮೂರ್ತಿ ರಾವ್‌ ಅಧ್ಯಕ್ಷತೆ ವಹಿಸಿದ್ದರು. ಕೋಶಿಕಾದ ಸಂಚಾಲಕಿ ಗೀತಾ ಸಾಮಂತ್, ಲೇಖಕಿ ಹಾಗೂ ಉಡುಪಿ ಎಂ.ಜಿ.ಎಂ ಕಾಲೇಜಿನ ಉಪನ್ಯಾಸಕಿ ಕಾತ್ಯಾಯಿನಿ ಕುಂಜಿಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.
ಶಿಬಿರಾರ್ಥಿಗಳಾದ ಶರತ್‌ ಪಾಟೀಲ್‌ ಸ್ವಾಗತಿಸಿದರು. ಅಪೂರ್ವ ವಂದಿಸಿ ದರು. ಹರ್ಷೇಂದ್ರ ಕಾರ್ಯ ಕ್ರಮ ನಿರೂಪಿಸಿದರು.

ಶಿಬಿರಾರ್ಥಿಗಳು ಮೇ.1, 2, 3ರಂದು ಚೇರ್ಕಾಡಿಯಲ್ಲಿ ನಡೆಯುವ ನಾಟಕೋತ್ಸವದಲ್ಲಿ ಭಗ ವತಿ ಎಂ. ರಚನೆಯ ‘ವಿಚಿತ್ರ ವಿಜಯ’ ನಾಟಕವನ್ನು ಅಪೂರ್ವ ಅನಗಳ್ಳಿ ನಿರ್ದೇಶನದಲ್ಲಿ ಪ್ರದರ್ಶಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT