ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧವಾ ವಿವಾಹ ನಡೆಯಲಿ

Last Updated 29 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ದೀಪಾವಳಿಯ ಶುಭ ಸಂದರ್ಭದಲ್ಲಿ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ, ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಸಂಪತ್ತಿನ ಅಧಿದೇವತೆ ಲಕ್ಷ್ಮಿಯ ಜನ್ಮದಿನವನ್ನು ಸಾವಿರಾರು ಮಂದಿ ವಿಧವೆ­ಯರು ಲಕ್ಷ್ಮೀ ಪೂಜೆ ಮಾಡುವ ಮೂಲಕ ಸಮಾಜ ಪರಿವರ್ತನಾ ಕಾರ್ಯಕ್ರಮವಾಗಿ ನಿರಂತರವಾಗಿ ಸಾಗುತ್ತಿರುವುದು ಸಂತಸದ ವಿಷಯ. ಇದಕ್ಕಾಗಿ ಪೂಜಾರಿ ಅವರನ್ನು ನಾನು ಅಭಿನಂದಿಸುತ್ತೇನೆ. ಅವರ ಈ ಪ್ರಯತ್ನವು ಇತರರಿಗೆ ಸ್ಫೂರ್ತಿ ನೀಡಲಿ ಎಂಬುದೇ ನನ್ನ ಆಶಯ.

ನಮ್ಮ ಸಮಾಜ ಇಂದು ಇನ್ನೊಂದು ಬಹು­ಮುಖ್ಯ ನಿರ್ಣಯವನ್ನು ತೆಗೆದುಕೊಳ್ಳ­ಬೇಕಾ­ಗಿದೆ. ಅದುವೇ ವಿಧವಾ ವಿವಾಹ. ಮದುವೆ­ಯಾಗಲು ಇಚ್ಛಿಸುವ ವಿಧವೆಯರು ಹಾಗೂ ಯುವಕರ ಸಮಾವೇಶವನ್ನು ಏರ್ಪಡಿಸಿ, ಮದುವೆ­ಯಾಗ ಬಯಸುವವರನ್ನು ಒಂದು­ಗೂಡಿಸಿ, ಅವರ ವಿವಾಹ ಮಹೋತ್ಸವವನ್ನು ಸಾರ್ವಜನಿಕವಾಗಿ ಏರ್ಪಡಿಸುವ ಮೂಲಕ ಧಾರ್ಮಿಕ–ಸಾಮಾಜಿಕ ಕ್ರಾಂತಿಯನ್ನು
ಸಮಾಜ­ದಲ್ಲಿ  ಮಾಡಬೇಕಾಗಿದೆ. ಪುರುಷರು ಮತ್ತು ಮಹಿಳೆಯರು ಒಟ್ಟಾಗಿ ಈ ಸಾಮಾಜಿಕ ಕ್ರಾಂತಿಯಲ್ಲಿ ಪಾಲ್ಗೊಳ್ಳಬೇಕು.
–ದಿವಾಣ ಗೋಪಾಲಕೃಷ್ಣ ಭಟ್, ಉಡುಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT