ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧವೆಯರಿಂದ ಲಕ್ಷ್ಮಿ, ವಿಷ್ಣು ಪೂಜೆ

ಧಾರ್ಮಿಕ ಕ್ರಾಂತಿಗೆ ಸಾಕ್ಷಿಯಾದ ಕುದ್ರೋಳಿ
Last Updated 23 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಮಂಗಳೂರು: ಸಾಮಾಜಿಕ ಕ್ರಾಂತಿಗೆ ಹೆಸರಾಗಿರುವ ಇಲ್ಲಿನ  ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರ ದೀಪಾ ವಳಿಯ ಪರ್ವಕಾಲವಾದ ಗುರುವಾರ ನೂತನ ಧಾರ್ಮಿಕ ಕ್ರಾಂತಿಗೆ ಸಾಕ್ಷಿಯಾಯಿತು.

ಸಾವಿರಕ್ಕೂ ಹೆಚ್ಚು ವಿಧವೆಯರು ಲಕ್ಷ್ಮೀ ಸಹಿತ ಅಲಂಕೃತ ವಿಷ್ಣು ದೇವರಿಗೆ ಆರತಿ ಬೆಳಗಿ ಪೂಜೆ ಸಲ್ಲಿಸಿದರು. ದೇವಳದ ವಿಧವಾ ಅರ್ಚಕಿಯರಾದ ಇಂದಿರಾ, ಲಕ್ಷ್ಮಿ, ಚಂದ್ರಾವತಿ ಅವರ ನೇತೃತ್ವದಲ್ಲಿ ವಿಧವೆಯರ ಜತೆ ಮುತ್ತೈದೆಯರೂ ಸಾಲಾಗಿ ಬಂದು ದೇವರ ಪೂಜೆ ನೆರವೆರಿಸಿದರು.

ದೇವರ ಉತ್ಸವ ಮೂರ್ತಿಯನ್ನು ಬೆಳ್ಳಿ ರಥದಲ್ಲಿ ಇಟ್ಟು ಪೂಜೆ ಸಲ್ಲಿಸಿದ ಬಳಿಕ ರಥೋತ್ಸವ ನಡೆಯಿತು. ರಥವನ್ನೂ ವಿಧವೆಯರೇ ಎಳೆದಿದ್ದು ವಿಶೇಷವಾಗಿತ್ತು. ಪೂಜೆಯಲ್ಲಿ ಭಾಗಿಗಳಾಗಲು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಿಂದ ಬಂದಿದ್ದ ಎಲ್ಲ ವಿಧವೆಯರಿಗೂ ಸೀರೆ, ಮಲ್ಲಿಗೆ ಹೂವು, ಕುಂಕುಮ ಕರಡಿಗೆ ಹಾಗೂ ರೂ 1ನ್ನು ದಕ್ಷಿಣೆಯಾಗಿ ನೀಡಲಾಯಿತು. ಬಳಿಕ ಅನ್ನ ಸಂತರ್ಪಣೆಯೂ ನಡೆಯಿತು.

ಸಮಾಜ ಸುಧಾರಕರಾದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದ ಪಾಲನೆಯನ್ನು ಕ್ಷೇತ್ರದಲ್ಲಿ ಮಾಡ ಲಾಗುತ್ತಿದೆ. ವಿಧವೆಯರ ಮೇಲೆ ಇರುವ ಮೂಢನಂಬಿಕೆಗಳನ್ನು ಹೋಗಲಾಡಿಸಿ ಸಮಾನತೆಯ ಸಂದೇಶ ವನ್ನು ಸಮಾಜಕ್ಕೆ ರವಾನಿಸುವುದೇ ಈ ಕಾರ್ಯಕ್ರಮದ ಉದ್ದೇಶ ಎಂದು ಕ್ಷೇತ್ರದ ಅಭಿವೃದ್ಧಿ ರೂವಾರಿಯಾದ  ಬಿ.ಜನಾರ್ದನ ಪೂಜಾರಿ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT