ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮರ್ಶಕರೆ, ಗುಂಪುಗಾರಿಕೆಯಿಂದ ಹೊರ ಬನ್ನಿ: ಪಾಪು

Last Updated 31 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಮರ್ಶಕರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕೇವಲ ಗುಂಪುಗಾರಿಕೆ ಯಲ್ಲೇ ಕಾಲ ಕಳೆಯುತ್ತಿದ್ದಾರೆ. ಇದರಿಂದಾಗಿ ಎಷ್ಟೋ ಮಂದಿ ಸಾಹಿ ತಿಗಳು ಜನರಿಗೆ ಪರಿಚಯ ವಾಗುತ್ತಿಲ್ಲ ಎಂದು ನಾಡೋಜ ಸಾಹಿತಿ ಪಾಟೀಲ್‌ ಪುಟ್ಟಪ್ಪ ಅಭಿಪ್ರಾಯಪಟ್ಟರು.

ಬೆಳಗಾವಿಯ ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್‌ ನಗರದಲ್ಲಿ ಗುರುವಾರ ಏರ್ಪಡಿಸಿದ್ದ  ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ 2012ನೇ ಸಾಲಿನ ಡಾ.ಬೆಟಗೇರಿ ಕೃಷ್ಣಶರ್ಮ ಕಥಾಪ್ರಶಸ್ತಿ ಯನ್ನು ಡಾ.ರಾಜಶೇಖರ ನೀರಮಾನ್ವಿ ಹಾಗೂ 2013ನೇ ವರ್ಷದ ಡಾ.ಬೆಟಗೇರಿ ಕೃಷ್ಣಶರ್ಮ ಕಾವ್ಯ ಪ್ರಶಸ್ತಿ ಯನ್ನು ಡಾ. ಎನ್‌.ಎಸ್‌. ಲಕ್ಷ್ಮೀನಾರಾ ಯಣ ಭಟ್ಟ  ಅವರಿಗೆ ಪ್ರದಾನ ಮಾಡಿ ಮಾತನಾಡಿದರು.

ಪ್ರಶಸ್ತಿಯು ಫಲಕ, ಪ್ರಶಸ್ತಿ ಪತ್ರ ಹಾಗೂ ತಲಾ ಒಂದು ಲಕ್ಷ ರೂಪಾ ಯಿಯ ಚೆಕ್‌ ಅನ್ನು ಒಳಗೊಂಡಿದೆ.

ಪ್ರಶಸ್ತಿ ನೀಡಿ ಮಾತನಾಡುತ್ತಿದ್ದ ಪಾಪು, ಇನ್ನಾದರೂ ವಿಮರ್ಶಕರು ಗುಂಪುಗಾರಿಕೆಯಿಂದ ಹೊರ ಬಂದು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಹಿಂದೆ ಬರವಣಿಗೆಯಿಂದ ಪ್ರಶಸ್ತಿಗಳು ಸಾಹಿತಿಗಳನ್ನು ಅರಸಿ ಬರುತ್ತಿದ್ದವು. ಆದರೆ ಈಗ ಸಾಹಿತಿಗಳೇ ತಮ್ಮ ಬರವ ಣಿಗೆ ಹಾಗೂ ತಮ್ಮ ಸಾಧನೆ ಬಗ್ಗೆ ಬರೆದು ಅರ್ಜಿ ಸಲ್ಲಿಸುವ ಕಾಲ ಬಂದಿದೆ. ಇದಕ್ಕಿಂತ ಅವಹೇಳನಕಾರಿ ವಿಷಯ ಮತ್ತೊಂದಿಲ್ಲ ಎಂದರು.

ಇಂಗ್ಲಿಷ್‌ ಬಾರದ ಕಾರಣಕ್ಕೆ ಕೃಷ್ಣ ಶರ್ಮರಿಗೆ ಜ್ಞಾನಪೀಠ ದೊರೆಯಲಿಲ್ಲ. ಆದರೆ ಇಂಗ್ಲಿಷ್ ಬರುವ ದೊಡ್ಡ ಲೇಖಕರು ಅನ್ಯ ಭಾಷೆಗಳಿಂದ ಕಳವು ಮಾಡಿ ಹೆಸರುಗಳಿಸುತ್ತಿದ್ದಾರೆ. ಕಾಲ ಕಳೆದಂತೆ ಈ ಕೆಲಸಗಳೆಲ್ಲ ಬಯಲಿಗೆ ಬರುತ್ತದೆ ಎಂದು ಆಕ್ರೋಶ ವ್ಯಕ್ತಪ ಡಿಸಿದರು. 
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕತೆಗಾರ ಡಾ.ರಾಜಶೇಖರ ನೀರಮಾನ್ವಿ, ‘ನಾನು ಬರೆದ ಮೂರನೇ ಕತೆ ಪತ್ರಿಕೆಯಲ್ಲಿ ಪ್ರಕಟವಾದ ಕಾರಣ ಅದು ವಿಮರ್ಶಕರ ಕಣ್ಣಿಗೆ ಬಿದ್ದು, ಕನ್ನಡ ಕತೆಗಳ ಸಾಲಿಗೆ ಸೇರಿತು’ ಎಂದರು.

ಕಾವ್ಯಪ್ರಶಸ್ತಿ ಪಡೆದ ಸಾಹಿತಿ ಡಾ. ಎನ್‌.ಎಸ್‌.ಲಕ್ಷ್ಮೀನಾರಾಯಣ ಭಟ್ಟ ಅವರು, ಅಸಾಧಾರಣ ಲೇಖಕ ಕೃಷ್ಣಶರ್ಮ ಅವರು ಆಗ ಮೈಸೂರಿ ನಿಂದ ದೂರದಲ್ಲಿ ವಾಸಿಸುತ್ತಿದ್ದ ಹಾಗೂ ಇಂಗ್ಲಿಷ್‌ ಬಾರದ ಕಾರಣಕ್ಕಾಗಿ ವಿದ್ಯಾವಂತ ವರ್ಗದಿಂದ ನಿಲರ್ಕ್ಷಕ್ಕೆ ಒಳಗಾಗಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.

ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ, ವಿಮರ್ಶ ಕರಾದ ಡಾ.ಸಿ.ಎನ್‌.­ರಾಮಚಂದ್ರನ್‌, ಡಾ.ಎಂ.ಎಸ್‌.­ಆಶಾದೇವಿ, ಟ್ರಸ್ಟ್‌ನ ಅಧ್ಯಕ್ಷ ಪ್ರೊ.ರಾಘವೇಂದ್ರ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT