ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಅಕಾಡೆಮಿಗಳ ಅಧ್ಯಕ್ಷರ ಕಿರು ಪರಿಚಯ

Last Updated 27 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಬೆಳಗಲ್‌ ವೀರಣ್ಣ
(ಯಕ್ಷಗಾನ ಬಯಲಾಟ ಅಕಾಡೆಮಿ)

ವೃತ್ತಿ ರಂಗ­ಭೂಮಿ ಹಾಗೂ ತೊಗಲುಗೊಂಬೆ ಕಲೆಯಲ್ಲಿ ಕಳೆದ 7 ದಶಕಗಳಿಂದ ತೊಡಗಿಸಿ­ಕೊಂಡಿ­ರುವ ಬೆಳಗಲ್‌ ವೀರಣ್ಣ, ಶಾಲೆಗೆ ತೆರಳಿ ಅಕ್ಷರ ಕಲಿತವರಲ್ಲ. ಬಳ್ಳಾರಿ ತಾಲ್ಲೂ­ಕಿನ ಬೆಳಗಲ್‌ ಗ್ರಾಮದ ಇವರು ಊರಿಂದ ಊರಿಗೆ ಅಲೆದಾಡುತ್ತ ಬಯ­ಲಾಟ ಪ್ರದರ್ಶಿ-­ಸುತ್ತಿದ್ದ ತಂದೆ ದೊಡ್ಡ ಹನುಮಂತಪ್ಪ ಅವರಿಂದ ಬಯ­ಲಾಟ ಕಲೆ  ರೂಢಿಸಿಕೊಂಡರು.  ಜರ್ಮನಿ, ಸ್ವಿಜರ್ಲೆಂಡ್‌ ದೇಶಗಳಲ್ಲೂ  ತಮ್ಮ ಕಲೆ ಪ್ರದರ್ಶಿ­ಸಿದ್ದಾರೆ.

ಬಿ.ಎ. ಮುಹಮ್ಮದ್‌ ಹನೀಫ್‌
(ಬ್ಯಾರಿ ಅಕಾಡೆಮಿ)

ಹನೀಫ್‌ ಅವರು ವೃತ್ತಿ­ಯಿಂದ ವಕೀಲರು. ರಾಜಕಾರ­ಣಿಯೂ ಹೌದು. ಸದ್ಯ ಉಳ್ಳಾಲ­ದಲ್ಲಿ ನೆಲೆಸಿ­ದ್ದಾರೆ. ಸಾಮಾಜಿಕ ಚಳವಳಿಯ ಸಂಗಾತಿ. ಅಹಿಂದ ಚಳವಳಿ­ಯಲ್ಲಿ ಗುರುತಿಸಿ­ಕೊಂಡ­ವರು. ಅಖಿಲ ಭಾರತ ಬ್ಯಾರಿ ಪರಿಷತ್ತಿನ ಅಧ್ಯಕ್ಷರಾಗಿ, ಮುಸ್ಲಿಂ ವಿಕಾಸ ಪರಿಷ­ತ್ತಿನ ಸ್ಥಾಪಕಾ­ಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಬ್ಯಾರಿ ಆಂದೋಲನದ ಹೆಜ್ಜೆಗಳು, ಬ್ಯಾರಿ ಅಧ್ಯಯನ 2008, ನಮ್ಮೂರು, ಜಾತಿ–ಧರ್ಮ ಮತ್ತು ಮೀಸಲಾತಿ ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ.

ಡಾ.ಎಂ.ಎಸ್‌. ಮೂರ್ತಿ (ಲಲಿತಕಲಾ ಅಕಾಡೆಮಿ)
ಡಾ.ಎಂ.ಎಸ್‌. ಮೂರ್ತಿ ಅವರು 18ಕ್ಕೂ ಹೆಚ್ಚು ಬಾರಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಆಯೋಜಿಸಿ­ದ್ದಾರೆ. ಇವರು ಇರಾನಿನ ಚಿತ್ರಕಲಾ ಅಕಾಡೆಮಿಯ ಪ್ರಶಸ್ತಿ, 2010ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪಡೆದು­ಕೊಂಡಿದ್ದಾರೆ.

ಅವರು ಬರೆದ ಪ್ರಬಂಧಗಳ ಸಂಕಲನ ‘ದೇಸಿ ನಗು’ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನ­ವಾಗಿದೆ. ಬುದ್ಧನ ಉಪದೇಶಗಳನ್ನು ಆಧರಿಸಿದ ನಾಟಕ ‘ಯಶೋಧೆ ಮಲಗಿಲ್ಲ’ 2007ರಲ್ಲಿ ಬೆಂಗಳೂರು ಆಕಾಶವಾಣಿ­ಯಿಂದ ಅತ್ಯುತ್ತಮ ಪ್ರಾದೇಶಿಕ ನಾಟಕ ಗೌರವಕ್ಕೆ ಪಾತ್ರವಾಗಿದೆ.

ಜಾನಕಿ ಬ್ರಹ್ಮಾವರ
(ತುಳು ಅಕಾಡೆಮಿ)

ತುಳು ಮತ್ತು ಕನ್ನಡ ಸಾಹಿತ್ಯ ಕ್ಷೇತ್ರ­­ದಲ್ಲಿ ದುಡಿಯುತ್ತಿರುವ ಜಾನಕಿ ಬ್ರಹ್ಮಾ­ವರ ಅವರು ಉಡುಪಿ ಜಿಲ್ಲೆ­ಯ ಮೂಡು­ತೋ­­ನ್ಸೆಯ ಮೂಡು­ಕುದ್ರುವಿನವರು.
ಕುದುರದ ಕೇದಗೆ, ಕಪ್ಪುಗಿಡಿ, ಯುಗಮ­ಗರ್ನಗ, ರುಕ್ಕು ಪ್ರಮುಖ ಕಾದಂಬರಿ­ಗಳು. ಏಕಲವ್ಯ, ರಕ್ತಾಕ್ಷಿ­ಮಾಯದ, ಮುರ್ಗಅಮರ್‌ ಬೈದೆರ್‌ ಅನು­ವಾದಿತ ಕೃತಿಗಳು. ಕರ್ನಾಟಕ ತುಳು ಅಕಾಡೆಮಿ ಪುಸ್ತಕ ಪುರಸ್ಕಾರ, ಮಕ್ಕಳ ಸಾಹಿತ್ಯ ಸಂಗಮ ಪುರಸ್ಕಾರ, ಸಂದೇಶ ಪ್ರಶಸ್ತಿ, ತುಳುಶ್ರೀ ಪ್ರಶಸ್ತಿ, ವೀರ ರಾಣಿ ಅಬ್ಬಕ್ಕ ಪ್ರಶಸ್ತಿ ಅವರಿಗೆ ಲಭಿಸಿವೆ.

ರೊನಾಲ್ಡ್‌ ಕಾಸ್ಟಲಿನೊ
(ಕೊಂಕಣಿ ಸಾಹಿತ್ಯ ಅಕಾಡೆಮಿ)

ಇವರು ರೋಯ್‌ ಕ್ಯಾಸ್ಟ­ಲಿನೊ ಎಂದೇ ಪರಿಚಿತರು. ವೃತ್ತಿ­ಯಲ್ಲಿ ಉದ್ಯಮಿ, ಬಿಲ್ಡರ್‌. ಶಾಲೆ­­ಗ­ಳ­ಲ್ಲಿ ಕೊಂಕಣಿ  ಭಾಷಾ ಕಲಿ­ಕೆಗೆ ಒತ್ತಾಯಿ­ಸುವ ಕೊಂಕಣಿ ಪ್ರಚಾರ ಸಂಚಲನದ ಅಧ್ಯಕ್ಷರು. ಕೊಂಕಣಿ ಉದ್ಯಮಿಗಳ ಸಂಘ ’ರಚನಾ’ದ ಮಾಜಿ ಅಧ್ಯಕ್ಷರು. ಸಂದೇಶ ಪ್ರತಿಷ್ಠಾನದ ಟ್ರಸ್ಟಿ. ಕಲಾಂಗ­ಣದ ನಿರ್ದೇಶಕರು. ಕಲಾಂಗಣದ ಕಾರ್ಯಕಾರಿ ಸಮಿತಿ ಸದಸ್ಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT