ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಬ್‌ಸೈಟ್ ಹ್ಯಾಕ್‌ ಆಗಿಲ್ಲ: ಇಸ್ರೊ ಸ್ಪಷ್ಟನೆ

Last Updated 13 ಜುಲೈ 2015, 10:45 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ವಾಣಿಜ್ಯ ಘಟಕ ಅಂತರಿಕ್ಷ ಕಾರ್ಪೊರೇಷನ್‌ ಲಿಮಿಟೆಡ್‌ನ ಅಂತರ್ಜಾಲ ತಾಣವನ್ನು ಯಾರೂ ಹ್ಯಾಕ್‌ ಮಾಡಿಲ್ಲ. ಈ ವೆಬ್‌ಸೈಟ್‌ನ ಮುಖಪುಟವನ್ನು ಇನ್ನೊಂದು ವೆಬ್‌ಸೈಟ್‌ಗೆ ಲಿಂಕ್‌ ಮಾಡುವಾಗ ಈ ಅವಘಡ ಸಂಭವಿಸಿದೆ. ಯಾರೋ ಉದ್ದೇಶಪೂರ್ವಕವಾಗಿಯೇ ಈ ಕೃತ್ಯ ಎಸಗಿದ್ದಾರೆ’ ಎಂದು ಇಸ್ರೊ ಸೋಮವಾರ ತಿಳಿಸಿದೆ.

ಅಂತರಿಕ್ಷ ಘಟಕದ ವೆಬ್‌ ತಾಣವನ್ನು ಹ್ಯಾಕ್‌ ಮಾಡಲಾಗಿದೆ ಎಂಬ ಸುದ್ದಿ ಭಾನುವಾರ ಹರಡಿತ್ತು. ಕೂಡಲೇ ಈ ತಾಣವನ್ನು ಸ್ಥಗಿತಗೊಳಿಸಲಾಗಿತ್ತು. ನಂತರ ಸಮಸ್ಯೆಯ ಮೂಲ ಪತ್ತೆ ಹೆಚ್ಚಿದ ಅಧಿಕಾರಿಗಳು ಸಂಜೆಯ ವೇಳೆಗೆ ಇದನ್ನು ಸರಿಪಡಿಸಿದ್ದರು.

ಸೋಮವಾರ ಬೆಳಿಗ್ಗೆ ಈ ಕುರಿತು ಸ್ಪಷ್ಟನೆ ನೀಡಿರುವ ಇಸ್ರೊದ ಹಿರಿಯ ಅಧಿಕಾರಿಯೊಬ್ಬರು, ವೆಬ್‌ಸೈಟ್‌ ಹ್ಯಾಕ್‌ ಆಗಿಲ್ಲ. ಇದರಿಂದ ದೇಶದ ಭದ್ರತೆಗೆ ಯಾವುದೇ ಹಾನಿ ಇಲ್ಲ, ಯಾವುದೇ ದತ್ತಾಂಶ ಕಳುವಾಗಿಲ್ಲ. ಯಾರೋ ಉದ್ದೇಶಪೂರ್ವಕವಾಗಿಯೇ ಈ ಕೃತ್ಯ ಎಸಗಿದ್ದಾರೆ. ಇದಕ್ಕೆ ಕಾರಣ ಏನು? ಇದನ್ನು ಮಾಡಿದವರು ಸಂಸ್ಥೆಯ ಒಳಗಿನವರೇ ಅಥವಾ ಹೊರಗಿನವರೇ ಎನ್ನುವುದರ ಕುರಿತು ತನಿಖೆ ನಡೆಯುತ್ತಿದೆ. ಸದ್ಯಕ್ಕಂತೂ ಯಾವುದೇ ಅಪಾಯವಿಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT