ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರ ಅಸಡ್ಡೆಗೆ ಬೇಕು ಮದ್ದು

Last Updated 29 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ರಾಜೀನಾಮೆ ಬೆದರಿಕೆ ನೀಡುವುದು ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯರಿಗೆ ವಾರ್ಷಿಕ ಕಾರ್ಯಕ್ರಮವಾಗಿರುವಂತೆ ಕಾಣುತ್ತಿದೆ. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಅವ್ಯವಸ್ಥೆ ಇಡೀ ರಾಜ್ಯದ ಜನತೆಗೆ ಗೊತ್ತು. ಹಣ ನೀಡದೆ ಯಾವ ಸೌಲಭ್ಯವೂ ಸಿಗುವುದಿಲ್ಲ.
ಇಂದು ಸರ್ಕಾರಿ ಸೇವೆಯಲ್ಲಿ ಹಣ ತೆಗೆದುಕೊಳ್ಳದೇ ಸೇವೆ ನೀಡುವ ವೈದ್ಯರು ಬೆರಳೆಣಿಕೆಯಷ್ಟು ಮಾತ್ರ ಇದ್ದಾರೆ.

ಅಗತ್ಯ ಸೇವೆಯಲ್ಲಿರುವ ವೈದ್ಯರು  ಕಾರ್ಯ­ನಿರ್ವ­ಹಿಸುತ್ತಿರುವ ಕೇಂದ್ರ ಸ್ಥಾನದಲ್ಲಿಯೇ ಇರ­ಬೇಕೆಂಬ ನಿಯಮವಿದ್ದರೂ ಸಂಜೆಯಾದ ಮೇಲೆ ಯಾವ ವೈದ್ಯರೂ ಹಳ್ಳಿಗಳಲ್ಲಿರುವುದಿಲ್ಲ. ಎಲ್ಲರೂ ಹತ್ತಿರದ ತಾಲ್ಲೂಕು, ಜಿಲ್ಲಾ ಕೇಂದ್ರ­ಗಳಿಗೆ ತೆರಳಿ ಖಾಸಗಿಯಾಗಿ ವೃತ್ತಿ ನಡೆಸುತ್ತಾರೆ. ಆಸ್ಪತ್ರೆಯಲ್ಲಿ ರೋಗಿಗಳನ್ನು ಅಸಡ್ಡೆಯಿಂದ ನೋಡುವ ಅನೇಕರು ಅದೇ ರೋಗಿಗಳು ಅವರ ಖಾಸಗಿ ಕ್ಲಿನಿಕ್‌ಗೆ ಹೋದರೆ ಪ್ರೀತಿಯಿಂದ ಕಾಣುತ್ತಾರೆ.ಇಂತಹವುಗಳನ್ನೆಲ್ಲ ಸ್ಥಳೀಯ ಮಟ್ಟದಲ್ಲಿ ಜನಪ್ರತಿನಿಧಿಗಳು ಪ್ರಶ್ನಿಸುತ್ತಾರೆ. ಅದರಿಂದ ತಪ್ಪಿಸಿ­ಕೊಳ್ಳಲು ತಮ್ಮನ್ನು  ಜಿಲ್ಲಾ ಪಂಚಾಯಿತಿ ವ್ಯಾಪ್ತಿ­ಯಿಂದ ಹೊರಗಿಡಬೇಕೆಂದು ವೈದ್ಯರು ಚಳವಳಿ ನಡೆಸುತ್ತಾರೆ.

ಇಂತಹ ಅಕ್ರಮಗಳಿಗೆ ಸೊಪ್ಪು ಹಾಕದ ಶಿವಶೈಲಂರಂತಹ ದಿಟ್ಟ  ಅಧಿಕಾರಿ­ಗಳು ಇವರಿಗೆ ಅಪಥ್ಯವಾಗುತ್ತಾರೆ. ಹಿಂದೆಯೂ ಮದನ್‌­ಗೋಪಾಲ್‌­ರಂತಹ ದಕ್ಷ ಅಧಿಕಾರಿ ವಿರುದ್ಧ ಇವರು ಹೋರಾಟ ನಡೆಸಿದ್ದರು. ಮುಷ್ಕರ ಮಾಡ­ದಂತೆ ಕೋರ್ಟ್ ಸೂಚನೆ ನೀಡಿದ್ದರೂ ಈ ವೈದ್ಯರು ಅದಕ್ಕೂ ಸೊಪ್ಪು ಹಾಕುತ್ತಿಲ್ಲ. ವೈದ್ಯ ಸಂಘದ ಕೆಲವು ನಾಯಕರ ಪ್ರತಿಷ್ಠೆ­ಯಿಂದ ಮತ್ತು ಅವರ ರಾಜಕೀಯ ಆಸೆಗಳಿ­ಗಾಗಿ ಸರ್ಕಾರ ಅವರ ಮುಂದೆ ಕಾಲೂರುವಂತಾ­ಗ­ಬಾರದು.
– ಟಿ.ಎ. ಅಪ್ಪಾಜಿ, ಭದ್ರಾವತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT