ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯರ್ಥ ಕಸರತ್ತು: ಅನಗತ್ಯ ಖರ್ಚು

Last Updated 31 ಜುಲೈ 2014, 19:30 IST
ಅಕ್ಷರ ಗಾತ್ರ

ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸ್ವಾಧೀನ­ಪಡಿ­ಸಿ­ಕೊಂಡಿದ್ದ 541 ಎಕರೆ ಜಮೀನನ್ನು ಅಧಿ­ಸೂಚ­ನೆಯಿಂದ ಕೈಬಿಟ್ಟಿರುವ ಪ್ರಕರಣದ ಆರೋಪ, ಪ್ರತ್ಯಾ­ರೋಪ ಹಾಗೂ ಸಮರ್ಥನೆ ಮತ್ತು ಟೀಕೆ­ಗಳನ್ನು ಪತ್ರಿಕೆಗಳಲ್ಲಿ ಓದಿದಾಗ ‘ಅತ್ತ ಹಾವೂ ಸಾಯ­ಬಾರದು. ಇತ್ತ ಕೋಲೂ ಮುರಿಯ­ಬಾರದು’ ಎಂಬ ಗಾದೆ ಜ್ಞಾಪಕಕ್ಕೆ ಬರುತ್ತದೆ.

ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸ­ಲಾಗು­ವುದು ಎಂದು ಮುಖ್ಯಮಂತ್ರಿಗಳು ಹೇಳಿ­ದ್ದಾರೆ.  ಹಿಂದೆಲ್ಲಾ ಇಂತಹ ತನಿಖೆಗಳಿಂದ ಏನೂ ಪ್ರಯೋಜನವಾಗದೆ, ಅನೇಕ  ವರದಿಗಳು ದೂಳು ತಿಂದಿರುವುದು  ಜನರಿಗೆ ಗೊತ್ತಿಲ್ಲದ ವಿಷಯ­ವಲ್ಲ. ತನಿಖೆ ಮುಗಿಯುವಷ್ಟರಲ್ಲಿ ಅಧಿಕಾರ­ದಲ್ಲಿ ಇರು­ವವರು ಅವಧಿ ಪೂರೈಸಿ  ಮನೆ ಸೇರಿರು­ತ್ತಾರೆ.

ಈ ತನಿಖೆಗಳೆಲ್ಲಾ ವೃಥಾ ಹಣ ಖರ್ಚು ಮಾಡಿ ಪ್ರಕರಣವನ್ನು ಮುಚ್ಚಿ ಹಾಕುವ ‘ಬ್ರಹ್ಮಾಸ್ತ್ರ’ಗಳೇ ವಿನಾ ತಪ್ಪಿತಸ್ಥರನ್ನು ದಂಡಿಸುವ ಬೆತ್ತಗಳಲ್ಲ. ಇಂತಹ ತಂತ್ರಗಾರಿಕೆಗಳಲ್ಲಿ ಸಮಯ ವ್ಯರ್ಥ ಮಾಡುವ ಬದಲು ರಾಜ್ಯದಲ್ಲಿ ಮಳೆ, ಬಿತ್ತನೆ, ರಸ್ತೆ, ವಿದ್ಯುತ್‌, ನೀರು, ಉದ್ಯೋಗ, ಮಹಿಳೆ ಮತ್ತು ಮಕ್ಕಳ ರಕ್ಷಣೆ, ನೆಲ ಜಲ, ಭಾಷೆ ಇಂತಹ ವಿಷಯಗಳ ಕಡೆ ಹೆಚ್ಚು ಗಮನ ಹರಿಸಿದಾಗ ಸಮೃದ್ಧ, ನಿರ್ಮಲ, ಮಾದರಿ ಕರ್ನಾಟಕದ ಕನಸು ನನಸಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT