ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾಮ ಕಾರಂತರ ಬಾಲವನ- ಮನೆ ಅಭಿವೃದ್ಧಿಗೆ ಕ್ರಮ: ಎ.ಸಿ

Last Updated 22 ಸೆಪ್ಟೆಂಬರ್ 2015, 5:58 IST
ಅಕ್ಷರ ಗಾತ್ರ

ಪುತ್ತೂರು: ಸಾಹಿತಿ ಡಾ.ಶಿವರಾಮ ಕಾರಂತರ ಕರ್ಮಭೂಮಿಯಾಗಿದ್ದ ಪುತ್ತೂರಿನ ಬಾಲವನದಲ್ಲಿರುವ ಕಾರಂತರ ಮನೆ ಹಾಗೂ ಬಾಲವನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಈ ಭಾಗದ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಪುತ್ತೂರಿನ ನೂತನ ಉಪವಿಭಾಗಾಧಿಕಾರಿ ಸತೀಶ್ ಕುಮಾರ್ ಡಿ.ಎನ್ ಅವರು ತಿಳಿಸಿದರು. 

ಇಲ್ಲಿ ಸೋಮವಾರ ಸುದ್ದಿಗಾರ ರೊಂದಿಗೆ ಮಾತನಾಡಿ, ಬಾಲವನ ಅಭಿವೃದ್ಧಿಗೆ ಮತ್ತು ಅಲ್ಲಿರುವ ಡಾ. ಶಿವರಾಮ ಕಾರಂತರ ಮನೆ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿ ಭಾನುವಾರ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಬಾಲವನ ಅಭಿವೃದ್ಧಿ ಸಮಿತಿಯ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿರುವುದಾಗಿ ತಿಳಿಸಿದರು.

ಜ್ಞಾನಪೀಠ ಪ್ರಶಸ್ತಿಯನ್ನು ಇಟ್ಟಿರುವ ಕಾರಂತರ ಮನೆ ಅಭಿವೃದ್ಧಿಗೆ ಕನ್ನಡ ಮತ್ತ ಸಂಸ್ಕೃತಿ ಇಲಾಖೆಯಿಂದ ಅನುದಾನ ಮಂಜೂರಾಗಿದ್ದರೂ ಮನೆ ಟರ್ಪಾಲ್ ಹೊದಿಕೆಯಲ್ಲೇ ಉಳಿದು ಕೊಂಡಿದೆ. ಅಭಿವೃದ್ಧಿ ಕಾಣದೆ ಬಿಳುವ ಹಂತಕ್ಕೆ ತಲುಪಿದೆ ಎಂದು ಸುದ್ದಿಗಾರರು ತಿಳಿಸಿದರು. ಕೆಲವೊಂದು ಕಾರಣಗ ಳಿಂದಾಗಿ ಕಾರಂತರ ಮನೆ ದುರಸ್ತಿಯಾ ಗದೆ ಉಳಿದುಕೊಂಡಿದೆ. ಸಂಬಂಧ ಪಟ್ಟವರೊಂದಿಗೆ ಸಮಾಲೋಚನೆ ಮಾಡಿ ಮನೆ ದುರಸ್ತಿ ಮತ್ತು ಬಾಲವನ ಅಭಿವೃದ್ಧಿಗೆ ಶೀಘ್ರ ಕ್ರಮ ಕೈಗೊಳ್ಳಲಾ ಗುವುದೆಂದು ಅವರು ತಿಳಿಸಿದರು.

ತುಳುನಾಡಿನ ವೀರಪುರುಷರಾದ ಕೋಟಿ ಚೆನ್ನಯರ ಹುಟ್ಟೂರು ಪಡು ಮಲೆಯನ್ನು ಪ್ರವಾಸೋದ್ಯಮ ತಾಣವ ನ್ನಾಗಿ ಮಾಡುವ ಅಭಿವೃದ್ಧಿ ಯೋಜನೆಗೆ ಈಗಾಗಲೇ ಅನುದಾನ ಬಿಡುಗಡೆ ಯಾಗಿದೆ. ಆರಂಭಿಕ ಹಂತದ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನಡೆಸಿದ್ದು, ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ ಎಂದು ಸುದ್ದಿಗಾರರು ಗಮನ ಸೆಳೆದರು. ಈ ಯೋಜನೆಯ ಬಗ್ಗೆ ಮಾಹಿತಿ ಪಡೆದುಕೊಂಡು ಮುಂದುವರಿ ಯುವುದಾಗಿ ಅವರು ತಿಳಿಸಿದರು.

ಪುತ್ತೂರು ನಗರದ ಇಕ್ಕಟ್ಟಾದ ರಸ್ತೆಗಳ ವಿಸ್ತರಣೆ, ಟ್ರಾಫಿಕ್ ಸಮಸ್ಯೆ ಪರಿಹಾರ, ಪ್ರಸ್ತುತ ಉಪ ವಿಭಾಗಾಧಿ ಕಾರಿಗಳ ಕಚೇರಿಯ ಮುಂಭಾಗವೂ ಸೇರಿದಂತೆ ಕಿಲ್ಲೆ ಮೈದಾನದಲ್ಲಿ ನಡೆಯುತ್ತಿರುವ ಸೋಮವಾರದ ಸಂತೆ ಸ್ಥಳಾಂತರ ವಿಚಾರಗಳಿಗೆ ಸಂಬಂಧಿಸಿ ಸಂಬಂಧಪಟ್ಟವರೊಂದಿಗೆ ಚರ್ಚಿಸ ಲಾಗುವುದು. ಪುತ್ತೂರಿನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ತಹಶೀಲ್ದಾರ್ ಸಣ್ಣರಂಗಯ್ಯ, ಕಂದಾಯ ನಿರೀಕ್ಷಕ ದಯಾನಂದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT