ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರದಲ್ಲೇ ರಾಹುಲ್‌ ಪಾದಯಾತ್ರೆ

Last Updated 27 ಏಪ್ರಿಲ್ 2015, 10:33 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರದ ಭೂಸ್ವಾಧೀನ ತಿದ್ದುಪಡಿ ಮಸೂದೆ ವಿರೋಧಿಸಿ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಶೀಘ್ರದಲ್ಲೇ ರೈತರ ಪಾದಯಾತ್ರೆ ನಡೆಸಲಿದ್ದಾರೆ. ಇತ್ತೀಚೆಗಷ್ಟೇ ರಾಹುಲ್‌  ದೆಹಲಿಯಲ್ಲಿ ರೈತರ ಸಮಾವೇಶ ನಡೆಸಿ ಗಮನ ಸೆಳೆದಿದ್ದರು.

ರೈತರ ಆತ್ಮಹತ್ಯೆ ಪ್ರಕರಣಗಳಿಂದ ಹೆಚ್ಚಾಗಿ ಸುದ್ದಿಯಲ್ಲಿರುವ   ಮಹಾರಾಷ್ಟ್ರದ ವಿದರ್ಭ  ಅಥವಾ ತೆಲಂಗಾಣದ ಮೆದಕ್‌ ಜಿಲ್ಲೆಯಿಂದ  ಪಾದಯಾತ್ರೆ ಕೈಗೊಳ್ಳಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪಾದಯಾತ್ರೆಯ ಭಾಗವಾಗಿ  ಉತ್ತರಪ್ರದೇಶ, ಆಂಧ್ರಪ್ರದೇಶ, ರಾಜಸ್ತಾನ್‌, ಮಧ್ಯಪ್ರದೇಶ, ಪಂಜಾಬ್‌ ಹಾಗೂ ತೆಲಂಗಾಣಕ್ಕೆ ಭೇಟಿ ನೀಡಲಿರುವ ರಾಹುಲ್‌, ಸಂಕಷ್ಟಕ್ಕೆ ಸಿಲುಕಿರುವ ರೈತರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

ಪಾದಯಾತ್ರೆಗೆ ಸಂಬಂಧಿಸಿದ ರಾಹುಲ್‌ ಅವರ ಕಾರ್ಯಕ್ರಮಗಳ ಪಟ್ಟಿಯನ್ನು ಇನ್ನೇನು ಅಂತಿಮಗೊಳಿಸಬೇಕಿದೆ ಎಂದು ಎಐಸಿಸಿಯ ಮಾಧ್ಯಮ ವಿಭಾಗದ ಮೇಲ್ವಿಚಾರಕ ರಣ್‌ದೀಪ್‌ ಸರ್ಜಿವಾಲಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT