ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರ ‘ನಗಾರಿ’ ನಾದ

Last Updated 20 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಗಾಂಧಿನಗರ ಎನ್ನುವುದು ಹರಿವ ತೊರೆ. ಈ ತೊರೆಯಲ್ಲಿ ಮೀಯಲು ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಹಾದಿಗೆ ಮತ್ತೊಂದು ಹೊಸ ಸೇರ್ಪಡೆ ‘ನಗಾರಿ’. ಅಂದಹಾಗೆ ‘ನಗಾರಿ’ ನಂದೀಶ್ ನಿರ್ದೇಶಿಸುತ್ತಿರುವ ಚಿತ್ರ. ಇಲ್ಲಿ ತೊಡಗಿರುವ ಬಹುಪಾಲು ಮಂದಿ ಹೊಸ ಹುಡುಗರೇ ಆಗಿದ್ದಾರೆ. ಮದ್ದೂರು, ಮಂಡ್ಯ, ಸಕಲೇಶಪುರ, ಉಡುಪಿಯಲ್ಲಿ 45 ದಿನಗಳ ಕಾಲ ಚಿತ್ರೀಕರಣ ಪೂರ್ಣಗೊಳಿಸಿದರು ಈ ಚಿತ್ರ ಮಾರ್ಚ್‌ 6ರಂದು ತೆರೆಗೆ ಬರುವ ಸಾಧ್ಯತೆ ಇದೆ.

ಇಷ್ಟು ದಿನಗಳ ಕಾಲ ತೆರೆಯ ಹಿಂದೆ ಕೆಲಸ ಮಾಡಿದ್ದ ಅಂದರೆ ಸಹಾಯಕ ನಿರ್ದೇಶಕನಾಗಿದ್ದ ವಿಕಾಸ್ ‘ನಗಾರಿ’ ಮೂಲಕ ನಟನ ಸ್ಥಾನದಲ್ಲಿ ನಿಲ್ಲುತ್ತಿದ್ದಾರೆ. ಅವರಿಗೆ ಜೋಡಿಯಾಗುತ್ತಿರುವವರು ಕಿರುತೆರೆಯ ‘ಅಕ್ಕ’ ಧಾರಾವಾಹಿಯ ನಾಯಕಿ ಅನುಪಮಾ. ಹೊಸ ಪೋಷಾಕನ್ನು ಸಮರ್ಥವಾಗಿ ತೊಟ್ಟ ಖುಷಿ ವಿಕಾಸ್ ಅವರದ್ದು. ಜತೆಗೆ ಅವರೇ ಗಿರೀಶ್, ಸಂತೋಷ್ ಸೇರಿದಂತೆ ತಮ್ಮ ಆರು ಮಂದಿ ಸ್ನೇಹಿತರ ಜತೆ ಸೇರಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಓಂಪ್ರಕಾಶ್ ರಾವ್‌, ಎ.ಆರ್. ಬಾಬು ಅವರ ಜತೆ ಸಹಾಯಕನಾಗಿ ದುಡಿದಿದ್ದ ನಂದೀಶ್ ‘ನಗಾರಿ’ ಮೂಲಕ ನಿರ್ದೇಶನದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ‘ಇಲ್ಲಿ ಕಾಮಿಡಿ, ಆಕ್ಷನ್, ಸೆಂಟಿಮೆಂಟ್ ಸೇರಿದಂತೆ ಪ್ರೇಕ್ಷಕರಿಗೆ ಇಷ್ಟವಾಗುವ ಎಲ್ಲ ಅಂಶಗಳೂ ಇರಲಿವೆ. ಮುಖ್ಯವಾಗಿ ಪ್ರೀತಿಗೆ ಒತ್ತು ಕೊಡಲಾಗಿದೆ’ ಎನ್ನುತ್ತಾರೆ ನಿರ್ದೇಶಕ ನಂದೀಶ್. ‘ನಗಾರಿ’ ಮತ್ತು ಚಿತ್ರಕ್ಕೆ ಯಾವುದೇ ಸಂಬಂಧವಿಲ್ಲದಿದ್ದರೂ ನಗಾರಿಯ ಶಬ್ದ ಹೇಗೆ ಕಿವಿಗೆ ಇಂಪು ನೀಡುತ್ತದೆಯೊ ಆ ರೀತಿ ಇಲ್ಲಿ ಪ್ರೇಮದ ಸ್ವರವಿರಲಿದೆಯಂತೆ. ಆ ಕಾರಣಕ್ಕೆ ‘ಸೌಂಡ್ ಎ ಲವ್‌’ ಎನ್ನುವ ಅಡಿ ಬರಹ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT