ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಗ್ರಾಮದೇವತೆ ಜಾತ್ರೆ

ಜಂಗಮುರಾಳದಲ್ಲಿ ಮೂರು ವರ್ಷಗಳಿಗೊಮ್ಮೆ ನಡೆಯುವ ಉತ್ಸವ
Last Updated 7 ಮೇ 2015, 8:35 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ತಾಲ್ಲೂಕಿನ ಜಂಗ ಮುರಾಳ ಗ್ರಾಮದಲ್ಲಿ ಮಂಗಳವಾರ, ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಗ್ರಾಮದೇವತೆ ಜಾತ್ರೆಯನ್ನು ಸಾವಿರಾರು ಸದ್ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಬೆಳಿಗ್ಗೆ ಶ್ರೀದೇವಿಯನ್ನು ಗಂಗಸ್ಥಳಕ್ಕೆ ತೆಗೆದುಕೊಂಡು ಹೋಗಿ ಬರಲಾಯಿತು. ನಂತರ ಸಕಲ ವಾದ್ಯ ವೈಭವದೊಂದಿಗೆ ಶ್ರೀದೇವಿಯನ್ನು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ, ವಿಶೇಷ ಪೂಜೆ ನಡೆಸಲಾಯಿತು. ನಾಡಿನಲ್ಲಿ ಮಳೆ, ಬೆಳೆ ಎಲ್ಲ ಸರಿಯಾಗಿ ಆಗಲಿ ಎಂದು ದೇವರ (ಹೇಳಿಕೆ) ಹರಕೆ ನುಡಿಯಲಾಯಿತು.

ಗ್ರಾಮದ ಗಣ್ಯರಾದ ಶಿವಯೋಗಿ ಹಿರೇಮಠ, ಈರಯ್ಯ ಹಿರೇಮಠ, ಹನುಮಂತ್ರಾಯ ಮೇಟಿ, ಮಾರುತಿ ಪವಾರ, ಅರುಣ ಪಾಟೀಲ, ಅಮರಪ್ಪ ಚಿನ್ನಾಪೂರ, ಬಸಪ್ಪ ಬಡಿಗೇರ, ದೇವೇಂದ್ರ ಚಿನ್ನಾಪೂರ, ಬಸವರಾಜ ಚಿನ್ನಾಪೂರ, ಶಿವಪ್ಪ ರಕ್ಕಸಗಿ, ಈರಪ್ಪ ಮಡಿಕೇಶ್ವಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT