ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿಯಿಂದ ಭಾಷೆ ಉಳಿವು

Last Updated 7 ಜುಲೈ 2014, 9:29 IST
ಅಕ್ಷರ ಗಾತ್ರ

ಉಡುಪಿ: ‘ಪ್ರಾಚೀನ ಭಾರತೀಯ ಸಂಸ್ಕೃತಿ ಒಳಗೊಂಡ ಮಹಾಭಾರತ ಗ್ರಂಥವನ್ನು ರಚಿಸಿದ ವೇದವ್ಯಾಸರು ಭಾರತದ ರಾಷ್ಟ್ರಪಿತ ಆಗಿದ್ದಾರೆ’ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಆಕಾ ಡೆಮಿ, ತುಳುಕೂಟ ಉಡುಪಿ, ಬಾಲಕಿ ಯರ ಸರ್ಕಾರಿ ಪದವಿ ಪೂರ್ವ ಕಾಲೇ ಜಿನ ತುಳು ಸಂಘ ಮತ್ತು ರಾಷ್ಟ್ರೀಯ ಸೇವಾಯೋಜನೆ ಸಂಯುಕ್ತವಾಗಿ ಉಡುಪಿಯಲ್ಲಿ ಭಾನುವಾರ ಏರ್ಪಡಿ ಸಿದ್ದ ‘ತುಳು ಮಿನದನ ಒಡಿಪು–2014’ ಕಾರ್ಯಕ್ರಮದಲ್ಲಿ ಎಸ್‌.ದೇವೇಂದ್ರ ಪೆಜತ್ತಾಯ ಅವರು ರಚಿಸಿದ ‘ತುಳು ಮಹಾಭಾರತ’ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದರು.

ಮಹತ್ಮಗಾಂಧೀಜಿ ಅವರಿಗೂ ಮೊದಲು ಭಾರತದ ಆಧ್ಯಾತ್ಮಿಕತೆ, ಸಾಂಸ್ಕೃತಿಕತೆಯ ಪ್ರಾಮುಖ್ಯತೆಯನ್ನು ಜನರಿಗೆ ತಿಳಿಯಪಡಿಸಿದ ಭಾರತದ ಸುಪುತ್ರ ವೇದವ್ಯಾಸರಾಗಿದ್ದಾರೆ. ಸಂಸ್ಕೃತಿ ಉಳಿಯದಿದ್ದರೆ ಭಾಷೆ ಉಳಿಯಲು ಸಾಧ್ಯವಿಲ್ಲ. ಎಲ್ಲಾ ಭಾಷೆಯ ಸಂಸ್ಕೃತಿ ಯನ್ನು ಪರಿಚಯಿಸುವ ಗ್ರಂಥಗಳು ರಚ ನೆಯಾಗಬೇಕು. ರಾಜ್ಯ ಭಾಷೆ ಮತ್ತು ಮಾತೃ ಭಾಷೆಯನ್ನು ಮರೆಯಬಾ ರದು. ಭಾರತ, ಕರ್ನಾಟಕ ಹಾಗು ತುಳು ಭಾಷೆ ಅನ್ಯೋನ್ಯತೆಯಿಂದ ಬೆಳೆದು ದೇಶದ ಏಕತೆಯನ್ನು ಮೆರೆಯ ಬೇಕು ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಚಿವ ವಿನಯಕುಮಾರ್‌ ಸೊರಕೆ ಮಾತ ನಾಡಿ, ತುಳು ಭಾಷೆ, ಸಂಸ್ಕೃತಿ, ಆಹಾರ ಪದ್ಧತಿಯ ಬಗ್ಗೆ ಹೊಸ ಪೀಳಿಗೆಗೆ ತಿಳಿಸಿ ಕೊಡುವ ಪ್ರಯತ್ನ ನಡೆಯಬೇಕು. ತುಳು ನಾಡಿನ ಆಹಾರ ಪದ್ಧತಿಯ ಭೋಜನ ವ್ಯವಸ್ಥೆಯನ್ನು ವಿಧಾನಸೌಧ ದಲ್ಲಿ ಮಾಡುವ ಮೂಲಕ ರಾಜ್ಯದ ಶಾಸಕರಿಗೆ ತುಳು ಭಾಷೆ ಹಾಗೂ ನಾಡಿನ ಬಗ್ಗೆ ಮನವರಿಕೆ ಮಾಡಲಾಗುವುದು ಎಂದರು.
ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿಯ ಅಧ್ಯಕ್ಷೆ ಎಂ.ಜಾನಕಿ ಬ್ರಹ್ಮಾವರ ಅಧ್ಯಕ್ಷತೆ ವಹಿಸಿದ್ದರು.

ಶಾಸಕ ಪ್ರಮೋದ್‌ ಮಧ್ವರಾಜ್‌, ಮಾಜಿ ಶಾಸಕ ಕೆ.ರಘುಪತಿ ಭಟ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಉಪೇಂದ್ರ ನಾಯಕ್‌, ನಗರಸಭಾ ಸದಸ್ಯ ಯಶ ಪಾಲ್‌ ಸುವರ್ಣ, ತುಳು ಸಾಹಿತ್ಯ ಆಕಾಡೆಮಿ ರಿಜಿಸ್ಟ್ರಾರ್‌ ಬಿ.ಚಂದ್ರಹಾಸ ರೈ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ರಾಧಾಮಣಿ, ಪ್ರೌಢಶಾಲಾ ವಿಭಾಗದ ಮುಖ್ಯಸ್ಥ ವಿಶ್ವನಾಥ ಬಾಯಿರಿ, ರಾಷ್ಟ್ರೀಯ ಸೇವಾ ಯೋಜನೆ ಸಂಯೋ ಜಕ ನಾಗರಾಜ್‌, ತುಳುಕೂಟದ ಉಪಾ ಧ್ಯಕ್ಷರಾದ ಯು.ದಾಮೋದರ್‌, ಮನೋರಮಾ ಸುಂದರ ಶೆಟ್ಟಿ ಉಪಸ್ಥಿತರಿದ್ದರು.
ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ದಯಾನಂದ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT