ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚ್ಚಿದಾನಂದನ್‌ಗೆ ಕುವೆಂಪು ರಾಷ್ಟ್ರೀಯ ಪುರಸ್ಕಾರ

Last Updated 22 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನವು ನೀಡುವ ‘ಕುವೆಂಪು ರಾಷ್ಟ್ರೀಯ ಪುರಸ್ಕಾರ’ಕ್ಕೆ ಮಲಯಾಳಂ ಭಾಷೆಯ ಹಿರಿಯ ಸಾಹಿತಿ ಪ್ರೊ.ಕೆ.ಸಚ್ಚಿದಾನಂದನ್ ಆಯ್ಕೆ­ಯಾಗಿದ್ದಾರೆ.

‘ಪ್ರಶಸ್ತಿಯು ರೂ 5 ಲಕ್ಷ  ನಗದು ಒಳ­ಗೊಂಡಿದೆ. ಕುವೆಂಪು ಅವರ ಜನ್ಮದಿನವಾದ ಡಿ. 29ರಂದು ಕುಪ್ಪಳಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗು­ವುದು’ ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಹಂ.ಪ.­­ನಾಗರಾಜಯ್ಯ ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪ್ರಶಸ್ತಿಯನ್ನು  ಈ ವರ್ಷದಿಂದಲೇ ಆರಂಭಿಸಲಾ­ಗಿದ್ದು, ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಕಂಬಾರ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಲಾಗಿತ್ತು. ಪ್ರೊ.ಬಿ.ಎ.ವಿವೇಕ ರೈ ಹಾಗೂ ಡಾ. ಪುರುಷೋತ್ತಮ ಬಿಳಿಮಲೆ ಸಮಿತಿಯ ಸದಸ್ಯರಾಗಿದ್ದರು’ ಎಂದು ಅವರು ತಿಳಿಸಿದರು. ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್‌ ಪ್ರಕಾಶ್‌, ಖಜಾಂಜಿ ಡಿ.ಎಂ.ಮನುದೇವ್‌ ದೇವಂಗಿ ಪತ್ರಿಕಾ­ಗೋಷ್ಠಿಯಲ್ಲಿ ಇದ್ದರು.

ಪರಿಚಯ: ಸಚ್ಚಿದಾನಂದನ್‌ ಅವರು ಇಂಗ್ಲಿಷ್‌ ಪ್ರಾಧ್ಯಾ­ಪಕ­ರಾಗಿದ್ದು, ಸಾಹಿತ್ಯ ಅಕಾಡೆಮಿಯ ಪತ್ರಿಕೆ ‘ಇಂಡಿಯನ್‌ ಲಿಟರೇಚರ್‌’ನ ಸಂಪಾದಕರಾಗಿದ್ದರು.

10 ವರ್ಷಗಳ ಕಾಲ ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ­ಯಾಗಿದ್ದರು. 23 ಕವನ ಸಂಕಲನಗಳು, 16 ಅನುವಾದ ಕವನ ಸಂಕಲನಗಳು, ಭಾಷೆ, ಸಾಹಿತ್ಯಕ್ಕೆ ಸಂಬಂಧಿಸಿರುವ 21 ಸಂಕಲನಗಳು ಪ್ರಕಟವಾಗಿವೆ. ಅವರ ಕುರಿತು ‘ಸಮ್ಮರ್‌ ರೈನ್‌ (ಗ್ರೀಷ್ಮ ವರ್ಷ)’ ಎಂಬ ಸಾಕ್ಷ್ಯಚಿತ್ರ ಸಿದ್ಧವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT