ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳ ನಡುವೆ ಹೆಗ್ಗವಾಡಿಪುರ

ರಸ್ತೆಯಲ್ಲಿ ಹರಿಯುವ ಚರಂಡಿ ನೀರು
Last Updated 1 ಏಪ್ರಿಲ್ 2015, 10:36 IST
ಅಕ್ಷರ ಗಾತ್ರ

ಸಂತೇಮರಹಳ್ಳಿ; ಸಮೀಪದ ಹೆಗ್ಗವಾಡಿಪುರ ಗ್ರಾಮದಲ್ಲಿ ಸಮರ್ಪಕ ವಾಗಿ ಚರಂಡಿ ನಿರ್ಮಿಸದ ಕಾರಣ ರಸ್ತೆಯಲ್ಲಿಯೇ ಚರಂಡಿ ನೀರು ಹರಿಯು ವಂತಾಗಿದೆ. ರಸ್ತೆಯಲ್ಲಿ ಹರಿಯುವ ಕೊಳಚೆ ನೀರನ್ನು ತುಳಿದು ಕೊಂಡು ನಿವಾಸಿಗಳು ತಿರುಗಾಡು ವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯ ಮಧ್ಯೆದಲ್ಲಿ ಹರಿಯುವ ಈ ಕೊಳಚೆ ನೀರಿನ ಮೇಲೆ ವಾಹನಗಳು ತಿರು ಗಾಡುವುದರಿಂದ ರಸ್ತೆಯು ಹದೆಗೆಟ್ಟಿದೆ.

ಕೆಲವು ನಿವಾಸಿಗಳು ಮನೆಗಳ ಮುಂಭಾಗ ಗುಂಡಿ ತೆಗೆದು ತ್ಯಾಜ್ಯ ನೀರನ್ನು ತುಂಬಿಸುತ್ತಿದ್ದಾರೆ. ಗುಂಡಿಯಲ್ಲಿ ನಿಂತ ಕಲ್ಮಷ ನೀರಿನಲ್ಲಿ ಹುಳ, ಹುಪ್ಪಟೆಗಳು ವಾಸ ಮಾಡುತ್ತಿವೆ. ಸೊಳ್ಳೆಗಳು ಅವಾಸ ಸ್ಥಾನ ಮಾಡಿ ಕೊಂಡಿವೆ. ಇದರಿಂದ ನಿವಾಸಿಗಳು ರೋಗ ರುಜಿನಗಳ ಬೀತಿಯನ್ನು ಎದುರಿಸುವಂತಾಗಿದೆ.

ಹೊಸ ಬಡಾವಣೆ ನಿರ್ಮಾಣಗೊಂಡು 30 ಕ್ಕೂ ಹೆಚ್ಚು ವರ್ಷಗಳು ಕಳೆದಿವೆ. ಕೆಲವು ಬೀದಿಗಳಿಗೆ ಮಾತ್ರ ಚರಂಡಿ ನಿರ್ಮಿಸಲಾಗಿದೆ. ಉಳಿದ ಬೀದಿಗಳಿಗೆ ಚರಂಡಿ ನಿರ್ಮಿಸದೇ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಎಂಬಂತೇ ಅನ್ಯಾಯ ಮಾಡಿದ್ದಾರೆ ಎಂಬುದು ಇಲ್ಲಿನ ನಿವಾಸಿಗಳ ದೂರು. ಮಳೆಗಾಲ ಸಮಯದಲ್ಲಿ ಮನೆಗಳಿಂದ ತ್ಯಾಜ್ಯಾವಾದ ಕಲ್ಮಷ ನೀರಿನೊಂದಿಗೆ ಮಳೆ ನೀರು ಮಿಶ್ರಣವಾಗುತ್ತದೆ. ಈ ನೀರನ್ನೇ ತುಳಿದುಕೊಂಡು ಮನೆಯ ವಸ್ತಿಲು ದಾಟಬೇಕಾಗಿದೆ ಎಂದು ನೀವಾಸಿಗಳು ಹೇಳುತ್ತಾರೆ.

ಬಡಾವಣೆಯಲ್ಲಿ ಸೂಕ್ತ ಚರಂಡಿ ನಿರ್ಮಿಸಿ ಕೊಳಚೆ ನೀರು ಸರಾಗವಾಗಿ ಹರಿದು ಹೋಗುವಂತಹ ವ್ಯವಸ್ಥೆಯನ್ನು ಯಾರೂ ಮಾಡಿಲ್ಲ. ಬಡಾವಣೆಗೆ ಚರಂಡಿ ನಿರ್ಮಿಸಿ ಎಂದು ಗ್ರಾಮಪಂಚಾಯಿತಿ ಯವರಿಗೆ ಮನವಿ ಮಾಡಿಕೊಂಡಿದ್ದರೂ ಪ್ರಯೋಜನ ವಾಗಿಲ್ಲ ಎಂದು ಇಲ್ಲಿನ ನಿವಾಸಿಗಳು ದೂರುತ್ತಾರೆ.

ಚರಂಡಿ ನಿರ್ಮಿಸಿ ಎಂದು ಹಲವು ಭಾರಿ ಮನವಿ ಮಾಡಿಕೊಂಡಿದ್ದರೂ ಪ್ರಯೋಜನವಾಗಿಲ್ಲ. ಇನ್ನು ಮುಂದಾ ದರೂ ಬಡಾವಣೆಗೆ ಚರಂಡಿ ನಿರ್ಮಿಸಿ ಜನಸಂಚಾರಕ್ಕೆ ಅನುಕೂಲ ಮಾಡಿ ಕೊಡಬೇಕು ಎಂದು ನಿವಾಸಿ ಗಳಾದ ಮೂರ್ತಿ, ಪುಟ್ಟಸ್ವಾಮಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT