ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಾರರಿಗೊಂದು ಸಹನೆಯ ಪಾಠ

Last Updated 30 ಜನವರಿ 2015, 19:30 IST
ಅಕ್ಷರ ಗಾತ್ರ

­ತಾನೇ ಮೊದಲು ಮುನ್ನುಗ್ಗಬೇಕು ಎನ್ನುವ ತವಕ ರಸ್ತೆಯ ಮೇಲೆ ಹೊರಟ ಬೈಕ್ ಸವಾರನಿಗೆ... ಕಾರು ಚಾಲಕನಿಗೊ ಇನ್ನಿಲ್ಲದ ಅವಸರ, ತಾನೇನು ಕಡಿಮೆ ಇಲ್ಲ ಎಂದು ತೋರಿಸಿಕೊಳ್ಳುವ ಕಿಚ್ಚು ಬಸ್ಸು ಚಾಲಕನಿಗೆ... ಈ ಮೌನ ಗುದ್ದಾಟದಲ್ಲಿ ನುಗ್ಗುವರೆಷ್ಟೊ, ವಾಲುವರೆಷ್ಟೊ, ಬೀಳುವರೆಷ್ಟೊ, ಏಳುವವರೆಷ್ಟೊ... ಆದರೆ ತಾಳುವವರು ಮಾತ್ರ ಒಬ್ಬರೂ ಇಲ್ಲ.

ಇದು ಮೆಟ್ರೊ ನಗರಗಳ ಧಾವಂತದ ಜೀವನಶೈಲಿಯ ದುರಂತವೆಂದೇ ಹೇಳ ಬಹುದು. ಇಲ್ಲಿ ಯಾರಿಗೂ ಯಾವುದಕ್ಕೂ ಸಮಯವೂ ಇರುವುದಿಲ್ಲ, ಸಂಯಮವೂ ಕಾಣುವುದಿಲ್ಲ. ಒಂದು ಕ್ಷಣದ ಅವಸರ ಎಷ್ಟೊ ಜನರ ಜೀವಗಳನ್ನೇ ಬಲಿ ತೆಗೆದುಕೊಳ್ಳುವುದುಂಟು. ಆಜೀವ ಪರ್ಯಂತ ಅಂಗವೈಕಲ್ಯವನ್ನೂ ತರುವುದುಂಟು. ಆಗಿ ಹೋದ ಮೇಲೆ ಹಲುಬುವುದಕ್ಕಿಂತ ಮೊದಲೇ ಒಂದು ಕ್ಷಣ ತಾಳ್ಮೆ ವಹಿಸುವುದು ಲೇಸಲ್ಲವೇ? ಮೆಟ್ರೊ ನಗರದ ಯುವ ಸಮೂಹಕ್ಕೆ ಇದನ್ನೇ ಪಾಠ ಮಾಡಲು ಹೊರಟಿದೆ  ದೊಮ್ಮಲೂರಿನ ವಿನಾಯಕ ಕಾರ್‍ಸ್ ಅಂಡ್‌ ಬೈಕ್ಸ್ ಸಂಸ್ಥೆ.

ಶೇ 70ರಷ್ಟು ರಸ್ತೆ ಅಪಘಾತ ಪ್ರಕರಣಗಳಿಗೆ ಅವಸರವೇ ಕಾರಣವಾಗಿರುತ್ತದೆ ಎನ್ನುತ್ತವೆ ಸಮೀಕ್ಷೆಗಳು. ಒಂದೇ ಒಂದು ಕ್ಷಣ ತಡೆದು ಹೋಗುವ ಮನಸ್ಥಿತಿ ಇಲ್ಲದವರು ತಮ್ಮ ಜೀವವನ್ನೂ ಪಣಕ್ಕಿಡುತ್ತಾರಲ್ಲದೇ, ಇತರರ ಜೀವಕ್ಕೂ ಕುತ್ತು ತರುತ್ತಾರೆ. ಅಂಥವರಿಗೆ ಈ ತಾಳ್ಮೆಯ ಪಾಠ ಅತ್ಯಗತ್ಯ. ಇದನ್ನರಿತ ವಿನಾಯಕ ಕಾರ್‍ಸ್ & ಬೈಕ್ಸ್ ‘ವಿ ಡ್ರೈವ್ ಸೇಫ್’ ಎಂಬ ವಿನೂತನ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತಂದಿದೆ.

‘ಅಪಘಾತಗಳಿಗೆ ಹೆಚ್ಚಾಗಿ ಈಡಾಗುವವರು ಹಾಗೂ ಅಪಘಾತಗಳಿಗೆ ಕಾರಣವಾಗುವವರಲ್ಲಿ 18ರಿಂದ 25 ವರ್ಷದ ಒಳಗಿನ ಯುವ ಸಮೂಹವೇ ಹೆಚ್ಚು. ಆದ್ದರಿಂದ ಈ ವಯೋಮಾನದ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ’ ಎನ್ನುತ್ತಾರೆ ಕಂಪೆನಿಯ ಸಿಇಒ ಸುರೇಶ್ ಬಾಫ್ನಾ.

‘ವಾಹನಗಳನ್ನು ಮಾರಾಟ ಮಾಡುವುದು ಮಾತ್ರ ನಮ್ಮ ಕೆಲಸವಲ್ಲ, ಜೊತೆಗೆ ಸುರಕ್ಷಿತ ಸಂಚಾರವನ್ನು ಖಾತ್ರಿಪಡಿಸುವುದೂ ಸಹ ನಮ್ಮ ಜವಾಬ್ದಾರಿ ಎಂದು ನಾವು ನಂಬಿದ್ದೇವೆ. ವಾಹನ ಮಾರಾಟದ ಜೊತೆ ಜೊತೆಗೇ ಯುವ ಕೆಲಸ ಗಾರ ರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಸುರಕ್ಷಿತ ವಾಹನ ಚಾಲನೆಯ ಬಗ್ಗೆ ಪಾಠ ಮಾಡುವ ಮೂಲಕ ಸಾಮಾಜಿಕ ಬದ್ಧತೆಗೂ ನಾವು ಹೆಗಲು ಕೊಟ್ಟಿದ್ದೇವೆ’ ಎನ್ನುತ್ತಾರೆ ಅವರು.

‘ರಸ್ತೆ ಸುರಕ್ಷೆಯ ಮಾತು ಬಂದಾಗ ಬೆಂಗಳೂರಿ ಗ ರದು ತುಂಬಾ ನಿರ್ಲಕ್ಷ್ಯ ವರ್ತನೆ ಎಂದು ಹೇಳ ಬಹುದು. ಸಂಚಾರ ಮತ್ತು ಸಾರಿಗೆ ಇಲಾಖೆಗಳ ಅಂಕಿ–ಅಂಶಗಳನ್ನು ನೋಡಿದರೆ ಈ ಸಂಗತಿ ಮನದಟ್ಟಾಗುತ್ತದೆ. ಪ್ರತಿವರ್ಷ ರಸ್ತೆ ಅಪ ಘಾತ ಗಳಲ್ಲಿ ನೂರಾರು ಜನ ಜೀವ ಕಳೆದುಕೊಂಡು, ಸಾವಿರಾರು ಜನ ಗಾಯಗೊಳ್ಳುತ್ತಾರೆ, ಕೆಲವರು ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗುವುದೂ ಇದೆ. ಅದರಲ್ಲೂ 18ರಿಂದ 25 ವರ್ಷದ ಒಳಗಿನ ಯುವಕರು ಅಪಘಾತಕ್ಕೆ ಈಡಾಡಗುವುದು ಹೆಚ್ಚು. ಅಂಥವರಿಗೆ ಸಹನೆಯ ಪಾಠದ ಅಗತ್ಯವಿದೆ’ ಎನ್ನುವುದು ಸುರೇಶ್ ಅಭಿಪ್ರಾಯ.

ವಿ ಡ್ರೈವ್ ಸೇಫ್ ಒಂದು ಆಂದೋಲನ
‘ವಿ ಡ್ರೈವ್ ಸೇಫ್’ ಎನ್ನುವುದು ಒಂದು ದಿನದ ಕಾರ್ಯಕ್ರಮ ಮಾತ್ರವಲ್ಲ, ಇದನ್ನು ನಿರಂತರವಾಗಿ  ಒಂದು ಆಂದೋಲನದ ರೂಪದಲ್ಲಿ ನಡೆಸುವ ಆಲೋಚನೆ ಇದೆ.  ರಸ್ತೆ ಸುರಕ್ಷತೆ, ಸುರಕ್ಷಿತ ಚಾಲನೆ ಬಗ್ಗೆ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವವರಿಗೆ ನೆರವು ನೀಡಲೂ ಸಹ ಸಂಸ್ಥೆ ಆಸಕ್ತಿ ಹೊಂದಿದೆ.

ಈ ಜಾಗೃತಿ ಕಾರ್ಯಕ್ರಮಕ್ಕಾಗಿ ಈಗಾಲೇ ನಗರದ ಕೆಲವು ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ರಸ್ತೆ ಸುರಕ್ಷತೆ ಮತ್ತು ಪಾದಚಾರಿಗಳ ಸುರಕ್ಷತೆ ಕಾಪಾಡುವುದು, ಸಂಚಾರ ಕಾನೂನುಗಳನ್ನು ಪಾಲಿಸುವುದು ಸೇರಿದಂತೆ ಕೆಲವು ಸಂಗತಿಗಳ ಬಗ್ಗೆ ಅವರಿಗೆ ಮಾಹಿತಿ ನೀಡಲಾಗುವುದು.

ಸ್ವಲ್ಪ ತಾಳ್ಮೆ ಇರಲಿ...

ನಿಮ್ಮ ಸಮಯಕ್ಕಿಂತ ಕೇವಲ ಹತ್ತು ನಿಮಿಷ ಮುಂಚಿ ತ ವಾಗಿ ಮನೆ ಬಿಡಿ, ಸ್ವಲ್ಪ ತಾಳ್ಮೆಯಿಂದ ಸಾವಧಾನವಾಗಿ ವಾಹನ ಚಲಾಯಿಸಿ, ರಸ್ತೆ ನಿಯಮಗಳನ್ನು ತಪ್ಪದೇ ಪಾಲಿಸಿ. ಇದರಿಂದ ನಿಮ್ಮ ಅಮೂಲ್ಯ ಜೀವವನ್ನು ನೀವು ಕಾಯ್ದುಕೊಳ್ಳಬಹುದು. ಜೊತೆಗೆ ನಿಮ್ಮ ಎದುರಿಗಿನವರಿಗೂ ಸುರಕ್ಷಿತ ದಾರಿ ಮಾಡಿಕೊಡಬಹುದು.

2013ರಲ್ಲಿ ಒಟ್ಟು 5,230  ಅಪಘಾತಗಳು ಸಂಭವಿಸಿವೆ. 771 ಜನರು ಸಾವನ್ನಪ್ಪಿದ್ದು, 58,101 ಜನ ಗಾಯಗೊಂಡಿದ್ದಾರೆ. ಅಪಘಾತಕ್ಕೆ ಸಂಬಂಧಿಸಿದಂತೆ ಸುಮಾರು 44,145 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. 2014ರಲ್ಲಿ ವಿವಿಧ ರೀತಿಯ ಅಪಘಾತಗಳಲ್ಲಿ 729ಜನ ಸಾವನ್ನಪ್ಪಿದ್ದು, 4098 ಜನ ಗಾಯಗೊಂಡಿದ್ದರು. ಒಂದು ಕ್ಷಣದ ತಾಳ್ಮೆ ಈ ಎಲ್ಲಾ ಅವಾಂತರಗಳನ್ನು ತಪ್ಪಿಸಬಹುದು. –ಸುರೇಶ ಬಾಫ್ನಾ, ಸಿಇಒ, ವಿನಾಯಕ ಕಾರ್‍ಸ್ ಅಂಡ್‌ ಬೈಕ್ಸ್.  (ಮಾಹಿತಿಗೆ: 990 204 6723,  www.vinayakcars.com)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT