ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕ್ವಾಷ್: ಫೈನಲ್‌ಗೆ ಜೋಷ್ನಾ

Last Updated 27 ಮೇ 2016, 20:17 IST
ಅಕ್ಷರ ಗಾತ್ರ

ಹಾಂಕಾಂಗ್ (ಪಿಟಿಐ): ಭಾರತದ ಜೋಷ್ನಾ ಚಿಣ್ಣಪ್ಪ ಇಲ್ಲಿ ನಡೆಯುತ್ತಿರುವ ಪಿಎಸ್‌ಎ ಎಚ್‌ಕೆಎಫ್‌ಸಿ ಅಂತರರಾಷ್ಟ್ರೀಯ ಸ್ಕ್ವಾಷ್‌ ಟೂರ್ನಿಯ ಫೈನಲ್ ಪ್ರವೇಶಿಸಿದರು.

ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಜೋಷ್ನಾ 8-11 11-9 12-10 7-11 11-9 ರಿಂದ ಹಾಲಿ ಚಾಂಪಿಯನ್ ಆ್ಯನೀ ಎಯು ಅವರನ್ನು ಮಣಿಸಿದರು.

ತೀವ್ರ ಪೈಪೋಟಿ ಎದುರಿಸಿದ ಜೋಷ್ನಾ ಮೊದಲ ಗೇಮ್‌ನಲ್ಲಿ ಎಡವಿದರು. ಹಾಂಕಾಂಗ್‌ನ ಆ್ಯನಿ 11–8ರಿಂದ ಗೆದ್ದು ಬೀಗಿದರು.
ಆದರೆ, ನಂತರದ ಗೇಮ್‌ನಲ್ಲಿ ಜೋಷ್ನಾ ತಿರುಗೇಟು ನೀಡಿದರು.

ರೋಚಕತೆಯಿಂದ ಕೂಡಿದ್ದ ಗೇಮ್‌ನ ಕೊನೆಯ ಹಂತದಲ್ಲಿ ಆತಿಥೇಯ ಆಟಗಾರ್ತಿಗಿಂತ ಎರಡು ಅಂಕ ಹೆಚ್ಚು ಗಳಿಸಿದ ಜೋಷ್ನಾ ಮೇಲುಗೈ ಸಾಧಿಸಿದರು.

ನಂತರದ ಗೇಮ್‌ ಕೂಡ ಭಾರೀ ಪೈಪೋಟಿಯಿಂದ ಕೂಡಿತ್ತು. ಟೈಬ್ರೇಕರ್‌ವರೆಗೂ ಲಂಬಿಸಿತು. ಏಟಿಗೆ ತಿರುಗೇಟು ನೀಡಿದರೂ ಜೋಷ್ನಾ ಮಣಿಯಲಿಲ್ಲ.  ಜೋಷ್ನಾ 12–10ರಿಂದ ಅ್ಯನಿ ಎದುರು ಜಯ ಸಾಧಿಸಿದರು.

ನಾಲ್ಕನೇ ಗೇಮ್‌ನಲ್ಲಿ ಆತಿಥೇಯ ದೇಶದ ಆಟಗಾರ್ತಿ ಮತ್ತೆ ತಿರುಗೇಟು ನೀಡಿದರು. ಜೋಷ್ನಾ ಅವರು 7–11ರಿಂದ ಸೋತರು. ಆದರೆ, ನಂತರದ ನಿರ್ಣಾಯಕ ಗೇಮ್ಸ್‌ನಲ್ಲಿ ಅವರು ತಪ್ಪು ಮಾಡಲಿಲ್ಲ. 11–9ರಿಂದ ಎದುರಾಳಿಯನ್ನು ಮಣಿಸಿ ಫೈನಲ್‌ಗೆ ಸಾಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT