ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಮ್ಸಂಗ್‌ನಿಂದ ಗ್ಯಾಲಕ್ಸಿ ಎಸ್‌6

ಸ್ಮಾರ್ಟ್‌ಫೋನ್‌ ಲೋಕದಲ್ಲಿ ಹೆಚ್ಚಿದ ಸ್ಪರ್ಧೆ
Last Updated 2 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬಾರ್ಸಿಲೋನಾ(ಪಿಟಿಐ): ಕೊರಿಯಾ ಮೂಲದ ಎಲೆಕ್ಟ್ರಾನಿಕ್ಸ್‌ ಕಂಪೆನಿ ‘ಸ್ಯಾಮ್ಸಂಗ್‌’ ಕಂಪೆನಿ, ವಿಶ್ವದಾದ್ಯಂತದ ಸ್ಮಾರ್ಟ್‌ಫೋನ್‌ ಪ್ರಿಯರಲ್ಲಿ ಬಹಳ ನಿರೀಕ್ಷೆ ಹುಟ್ಟುಹಾಕಿದ್ದ ಗ್ಯಾಲಕ್ಸಿ ಎಸ್‌6 ಮತ್ತು ಗ್ಯಾಲಕ್ಸಿ ಎಸ್‌6 ಎಡ್ಜ್‌ ಸ್ಮಾರ್ಟ್‌ಫೋನ್‌ಗಳನ್ನು ಸೋಮವಾರ ಇಲ್ಲಿ ಬಿಡುಗಡೆ ಮಾಡಿದೆ.

ಆ್ಯಪಲ್‌ ಕಂಪೆನಿಯ ಐಫೋನ್‌6ಗೆ ಪೈಪೋಟಿ ನೀಡಲೆಂದೇ ಈ ಸ್ಮಾರ್ಟ್‌­ಫೋನ್‌­ಗಳನ್ನು ಸ್ಯಾಮ್ಸಂಗ್‌ ಪರಿಚ­ಯಿಸಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. 6ನೇ ಆವೃತ್ತಿಯ ಈ ಗ್ಯಾಲಕ್ಸಿ ಎಸ್‌6 ಮತ್ತು ಗ್ಯಾಲಕ್ಸಿ ಎಸ್‌6 ಎಡ್ಜ್‌  ಸ್ಮಾರ್ಟ್‌ಫೋನ್‌ಗಳು ಭಾರತ ಸೇರಿ­ದಂತೆ ಒಟ್ಟು 20 ದೇಶಗಳ ಮಾರು­ಕಟ್ಟೆಗಳಲ್ಲಿ ಏಪ್ರಿಲ್‌ 10ರಿಂದ ಲಭ್ಯ­ವಾಗ­ಲಿವೆ ಎಂದು ಕಂಪೆನಿ ತಿಳಿಸಿದೆ.

ಜನರು ಉತ್ತಮ ಗುಣಮಟ್ಟ ಮತ್ತು ವಿನ್ಯಾಸದ ಫೋನ್‌ಗಳನ್ನು ಬಯಸು­ತ್ತಾರೆ. ಈ ಅಂಶಗಳನ್ನು  ಗಮನದಲ್ಲಿ­ಟ್ಟುಕೊಂಡು ಹೊಸ ಸ್ಮಾರ್ಟ್‌ಫೋನ್‌­ಗಳನ್ನು ತಯಾರಿಸಲಾಗಿದೆ ಎಂದು ಸಿಇಒ ಜೆ.ಕೆ.ಶಿನ್‌ ಹೇಳಿದ್ದಾರೆ. ಈ ಸ್ಮಾರ್ಟ್‌ಫೋನ್‌ಗಳು 5.1 ಇಂಚು ವ್ಯಾಸದ ಕ್ವಾಡ್ ಎಚ್‌ಡಿ ಸೂಪರ್‌ ಎಎಂಒ ಎಲ್‌ಇಡಿ ಸ್ಕ್ರೀನ್‌ ಹೊಂದಿವೆ. 62 ಬಿಟ್‌ ಸಾಮರ್ಥ್ಯದ 14 ನ್ಯಾನೋ ಮೀಟರ್‌ ಪ್ರೊಸೆಸರ್‌, ಆಧುನಿಕ ಮೆಮೊರಿ ತಂತ್ರಜ್ಞಾನ ಒಳಗೊಂಡಿದ್ದು, ಉಳಿದೆಲ್ಲ ಸ್ಮಾರ್ಟ್‌­ಫೋನ್‌­ಗಳಿಗಿಂತ ಹೆಚ್ಚಿನ ವೇಗದಲ್ಲಿ ಕಾರ್ಯನಿರ್ವಹಿಸಬಲ್ಲವು ಎಂದು ಕಂಪೆನಿ ಹೇಳಿಕೊಂಡಿದೆ.

5 ಮೆಗಾಪಿಕ್ಸೆಲ್‌ ಮುಂಬದಿ ಕ್ಯಾಮೆರಾ ಮತ್ತು 16 ಮೆಗಾ ಪಿಕ್ಸೆಲ್‌ ಹಿಂಬದಿ ಕ್ಯಾಮೆರಾವನ್ನು ಈ ಹೊಸ ಸ್ಮಾರ್ಟ್‌ಫೋನ್‌ಗಳಿಗೆ ಅಳವಡಿಸ­ಲಾಗಿದ್ದು, ಅವು ಕತ್ತಲೆಯಲ್ಲಿಯೂ ಉತ್ತಮ ಗುಣಮಟ್ಟದ ಚಿತ್ರಗಳನ್ನು ತೆಗೆಯಲು ಸಮರ್ಥವಾಗಿವೆ ಎಂದು ಕಂಪೆನಿ ಹೇಳಿದೆ.
32ಜಿ.ಬಿ, 64 ಮತ್ತು 128 ಜಿಬಿ ಸ್ಟೊರೇಜ್‌ (ಸ್ಮರಣಕೋಶ) ಸಾಮರ್ಥ್ಯ ಈ ಫೋನ್‌ಗಳಿಗಿದೆ. ಆದರೆ ಎರಡೂ ಹೊಸ ಸ್ಮಾರ್ಟ್‌ಫೋನ್‌ಗಳ ಬೆಲೆ ಎಷ್ಟು ಎಂಬುದನ್ನು ಕಂಪೆನಿ ತಿಳಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT