ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುವರಿ ಆರೋಪಪಟ್ಟಿ ಸಲ್ಲಿಕೆ

Last Updated 1 ಡಿಸೆಂಬರ್ 2015, 19:41 IST
ಅಕ್ಷರ ಗಾತ್ರ

ಬೆಂಗಳೂರು: ಫಾದರ್ ಕೆ.ಜೆ.ಥಾಮಸ್ ಕೊಲೆ ಪ್ರಕರಣ ಸಂಬಂಧ ಕ್ಯಾಥೋಲಿಕ್ ಧರ್ಮ ಗುರುಗಳು ಸೇರಿದಂತೆ ಇನ್ನೂ ಏಳು ಮಂದಿ ವಿರುದ್ಧ ಪೊಲೀಸರು ನಗರದ ಎಸಿಎಂಎಂ ನ್ಯಾಯಾಲಯಕ್ಕೆ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಫಾದರ್ ಅಂತಪ್ಪ, ಕನ್ನಡ ಕ್ರೈಸ್ತರ ಹೋರಾಟ ಸಮಿತಿಯ ರೀಟಾ ರಿನಿ,  ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ರಫಾಯಲ್, ಸಂಘದ ಉಪಾಧ್ಯಕ್ಷ ಅಂಥೋಣಿ ಪ್ರಸಾದ್, ಫಾದರ್‌ಗಳಾದ ಅನ್ಬು ಜಾನ್, ಚಸರಾ ಹಾಗೂ ಎ.ಥಾಮಸ್ ವಿರುದ್ಧ ನ.26ರಂದು ಆರೋಪಪಟ್ಟಿ ಸಲ್ಲಿಕೆಯಾಗಿದೆ.

2013ರ ಮಾ.31ರಂದು ಮಲ್ಲೇಶ್ವರದ ಸೇಂಟ್ ಪೀಟರ್ಸ್‌ ಪೊಂಟಿಫಿಕಲ್ ಸೆಮಿನರಿಯ ರೆಕ್ಟರ್ (ಮುಖ್ಯಸ್ಥ) ಕೆ.ಜೆ.
ಥಾಮಸ್ ಅವರ ಕೊಲೆ ನಡೆದಿತ್ತು. ದುಷ್ಕರ್ಮಿಗಳು ಸೆಮಿನರಿಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಂದಿದ್ದರು.

ಈ ಸಂಬಂಧ ಪೊಲೀಸರು ಗುಲ್ಬರ್ಗ ನವಚೇತನ ಚರ್ಚ್‌ನ ಫಾದರ್ ಇಲಿಯಾಸ್, ಕೆಂಗೇರಿಯ ಸಂತ ಫ್ರಾನ್ಸಿಸ್‌ ಚರ್ಚ್‌ನ ಫಾದರ್‌ ವಿಲಿಯಂ ಪ್ಯಾಟ್ರಿಕ್‌ ಮತ್ತು ಅವರ ಸಹಚರ ಪೀಟರ್‌ನನ್ನು ಬಂಧಿಸಿದ್ದರು. ‘ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಫಾದರ್‌ಗಳನ್ನು ಕಡೆಗಣಿಸಿ, ಸೆಮಿನರಿಯ ಪ್ರಮುಖ ಹುದ್ದೆಗಳನ್ನು ಕೆಲವರಿಗೆ ಮಾತ್ರ ನೀಡಲಾಗಿದೆ ಎಂಬ ಕಾರಣಕ್ಕೆ ಥಾಮಸ್‌ ಅವರ ಕಾರ್ಯವೈಖರಿ ಬಗ್ಗೆ ಆರೋಪಿ ಇಲಿಯಾಸ್ ಹಾಗೂ ಇತರರಿಗೆ ಅಸಮಾಧಾನವಿತ್ತು. ಇದರಿಂದ ಕೋಪಗೊಂಡ ಆರೋಪಿಗಳು, ಥಾಮಸ್ ಅವರನ್ನು ಕೊಂದು ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ತರಲು ನಿರ್ಧರಿಸಿ ಹತ್ಯೆಗೈದಿದ್ದರು’ ಎಂದು ಪೊಲೀಸರು 10 ಸಾವಿರ ಪುಟ
ಗಳ ಮೊದಲ ಆರೋಪ ಪಟ್ಟಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT