ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಪರಿಮಳದ ‘ಕಸ್ತೂರಿ’

Last Updated 12 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಕಸ್ತೂರಿ ವಾಹಿನಿ ಈಗ ಹೊಸ ರೂಪದಲ್ಲಿ ಬರುತ್ತಿದೆ. ಮನರಂಜನಾ ಸಂಸ್ಥೆಯಾದ ‘ವೈಟ್ ಹಾರ್ಸ್ ನೆಟ್‌ವರ್ಕ್’ ಕಸ್ತೂರಿ ಚಾನೆಲ್‌ನ ಜವಾಬ್ದಾರಿ ವಹಿಸಿಕೊಂಡಿದೆ. ಹೊಸ ರಿಯಾಲಿಟಿ ಷೋ, ಟಾಕ್‌ಷೋಗಳು, ಹರಟೆ ಕಾರ್ಯಕ್ರಮ, ನಗೆ ಟಾನಿಕ್‌ಗಳು ಹಾಗೂ ಧಾರಾವಾಹಿಗಳನ್ನು ವೀಕ್ಷಕರಿಗಾಗಿ ಹೊರತರುತ್ತಿದೆ. ಈ ಕುರಿತು ವಿವರವಾಗಿ ತಿಳಿಸಲು ಪತ್ರಕರ್ತರನ್ನು ಆಹ್ವಾನಿಸಲಾಗಿತ್ತು.

‘ವೈಟ್‌ಹಾರ್ಸ್’ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಕೈಲಾಸಂ, ವ್ಯವಹಾರ ಮುಖ್ಯಸ್ಥ ಜಿ.ವಿ.ಕೃಷ್ಣಮೂರ್ತಿ ಹಾಗೂ ಮುಖ್ಯ ಸಂಘಟಕ ಶಿವಕುಮಾರ್ ಹೊಸ ಕಾರ್ಯಕ್ರಮಗಳ ಮಾಹಿತಿ ಹಂಚಿಕೊಂಡರು.

ನಟಿ ಮಾಳವಿಕಾ ಅವಿನಾಶ್ ನಡೆಸಿಕೊಡುವ ‘ಆರದಿರಲಿ ಬೆಳಕು’, ಸುಷ್ಮಾ ರಾವ್ ಅವರ ‘ಸಖತ್ ಅತ್ತೆ ಸೂಪರ್ ಸೊಸೆ’, ಅನುಶ್ರೀ ನಡೆಸಿಕೊಡುವ ‘ಪದಕ್ಕೊಂದು ಸವಾಲ್’, ಮುರಳಿ ಅವರ ‘ಮಾತಂತ್ರೆ ಮಾತು’ ಜತೆಗೆ ‘ಮಾರ್ಗಶುಚಿ’, ‘ಸ್ಟಾರ್ ಲೈವ್’, ‘ನನ್ನ ಲೈಫ್‌ನಲ್ಲಿ ಒಂದು ದಿನ’, ‘ಕ್ರೈಂ ಅಲರ್ಟ್’ ಪ್ರಸಾರವಾಗಲಿವೆ. ‘ಗುಗ್ಗು ನನ್ ಮಕ್ಳು’ ಎಂಬ ಕಾಮಿಡಿ ಧಾರಾವಾಹಿ ರಾತ್ರಿ ವೀಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಲಿದೆ.

ಪ್ರಾದೇಶಿಕ ಚಾನೆಲ್‌ಗಳ ವೀಕ್ಷಣೆಯಲ್ಲಿ ಕನ್ನಡಿಗರ ಆಸಕ್ತಿ ಕುರಿತಾದ ಸಮಗ್ರ ಅಧ್ಯಯನ ನಡೆಸಿದ ಬಳಿಕ, ಪ್ರೈಂ ಟೈಮ್ ವೀಕ್ಷಕರ ಸಂಖ್ಯೆ ಆಧರಿಸಿ ಧಾರಾವಾಹಿ ಹಾಗೂ ಷೋ ರೂಪಿಸಲಾಗಿದೆ ಎಂದರು ಪಿ.ಕೈಲಾಸಂ.

ಕಾರ್ಯಕ್ರಮಗಳ ನಿರೂಪಕರಾದ ಮಾಳವಿಕಾ, ಮುರಳಿ, ಸುಷ್ಮಾ ರಾವ್, ದಿಶಾ, ವಿಶ್ವ, ನಾಗಭೂಷಣ್, ಪವನ್, ಅವಿನಾಶ ಸೇರಿದಂತೆ ಹಲವರು ಅನಿಸಿಕೆ ಹಂಚಿಕೊಂಡರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT