ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನಾಹತ’ ಕಲಾಪ್ರದರ್ಶನ

ಕಲಾಪ
Last Updated 1 ಮೇ 2015, 19:30 IST
ಅಕ್ಷರ ಗಾತ್ರ

ಆರ್ಟ್‌ಮಂತ್ರಂ ಹಾಗೂ ನವರತ್ನ ಹವೇಲಿ, ಟೈಂ ಅಂಡ್ ಸ್ಪೇಸ್ ಗ್ಯಾಲರಿಯ ಸಹಯೋಗದಲ್ಲಿ ಮೇ 3ರಿಂದ 17ರವರೆಗೆ ‘ಅನಾಹತ’ ಎಂಬ ಶೀರ್ಷಿಕೆಯಡಿ ಅಂತರರಾಷ್ಟ್ರೀಯ ಮಟ್ಟದ 48 ಕಲಾವಿದರ ಕಲಾಪ್ರದರ್ಶನವನ್ನು ಆಯೋಜಿಸಲಾಗಿದೆ. ಈ ಪ್ರದರ್ಶನವನ್ನು ಬಯೊಕಾನ್‌ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ ಹಾಗೂ ಬ್ರಿಗೇಡ್ ಗ್ರೂಪ್‌ ಅಧ್ಯಕ್ಷ ಎಂ.ಆರ್. ಜಯಶಂಕರ್ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಗುತ್ತದೆ.

ಪ್ರಖ್ಯಾತ ಕಲಾವಿದರಾದ ಎಫ್.ಎನ್.ಸೌಜಾ, ಅಡಿಮೂಲಂ, ಪ್ರಭಾ ಬಿ, ಪರೇಶ್ ಮೈಟಿ, ಎಂ.ಎಫ್. ಹುಸೇನ್, ಅರ್ಪಣಾ ಕೌರ್, ಶಕ್ತಿ ಮೈರ, ಲಾಲ್ ರತ್ನಾಕರ್ ಸೇರಿದಂತೆ ಇನ್ನೂ ಅನೇಕ ಹೆಸರಾಂತ ಕಲಾವಿದರ ಕೆಲಸಗಳನ್ನು ‘ಅನಹತ’ದಲ್ಲಿ ಸಾದರಪಡಿಸಲಾಗುತ್ತಿದೆ. ಇದರ ಜೊತೆಗೆ ಕ್ಲೇರ್ ಅರ್ನಿ ಹಾಗೂ ಶಿಬು ಅರಕ್ಕಲ್ ಅವರ ಛಾಯಾಚಿತ್ರಗಳೂ ಸಹ ಪ್ರದರ್ಶನಗೊಳ್ಳಲಿವೆ.

ಬೆಂಗಳೂರಿನ ಹೆಸರಾಂತ ಕಲಾವಿದರಾದ ಎಸ್.ಜಿ.  ವಾಸುದೇವ್, ಯೂಸುಫ್ ಅರಕ್ಕಲ್, ಜೆಎಂಎಸ್ ಮಣಿ, ದೊಡ್ಡಮನಿ ಹಾಗೂ ಮಿಲಿಂದ್ ನಾಯಕ್ ಅವರ ಅದ್ಭುತ ಚಿತ್ರಕಲಾ ಪ್ರದರ್ಶನಕ್ಕೆ ಅನಹತ ಸಾಕ್ಷಿಯಾಗಲಿದೆ. ಕೇರಳ ಮೂಲದ ಕಲಾವಿದರಾದ ಜಸ್ಟಿನ್, ಬಿ.ಡಿ. ದೇಥನ್, ಸೋಮ್ಜಿ, ಮಣಿಲಾಲ್ ಹಾಗೂ ಬೈಜು ಅವರ ಕಲಾಕೃತಿಗಳನ್ನು ಸಹ ಕಲಾಸಕ್ತರು ಕಣ್ತುಂಬಿಕೊಳ್ಳಬಹುದು.

‘ಅನಾಹತ ನಾವು ಎದುರಿಸುವಂತಹ ಜೀವನದ ಆಗುಹೋಗುಗಳನ್ನು ಪ್ರತಿಬಿಂಬಿಸಲಿದೆ. ಪ್ರಪಂಚ, ದೊಡ್ಡ ಮಟ್ಟದಲ್ಲಿ ಚಿಕ್ಕದಾಗುತ್ತಿರುವಂತೆ ಹಾಗೂ ಸ್ಥಳೀಯ ಹಂತದಲ್ಲಿ ಬಹುಮುಖಿಯಾಗುತ್ತಿರುವಂತೆ ಈ ಪ್ರದರ್ಶನ, ಅಸಂಗತಗಳನ್ನು ಸಹಿಸುತ್ತದೆ ಹಾಗೂ ಅದರ ನಡುವೆ ಏಳ್ಗೆ ಕಾಣಲಿದೆ’ ಎಂದು ಪ್ರದರ್ಶನದ ಕುರಿತು ಅಭಿಪ್ರಾಯ ಹಂಚಿಕೊಳ್ಳುತ್ತಾರೆ ಆರ್ಟ್‌ಮಂತ್ರಂ ಸ್ಥಾಪಕಿ ಜಿಜಾ ಹರಿಸಿಂಗ್.

ಆಂತರಿಕ ಹಾಗೂ ಬಾಹ್ಯ ಗ್ರಹಿಕೆಗಳನ್ನು ಒಟ್ಟುಗೂಡಿಸುವಂತಹ ವರ್ಣಚಿತ್ರಗಳು ಹಾಗೂ ಛಾಯಾಚಿತ್ರಗಳನ್ನು ಇಲ್ಲಿ ಪ್ರಸ್ತುತಪಡಿಸಲಾಗುತ್ತಿದ್ದು ಕಲಾವಿದ ಶಿಬು ಅರಕ್ಕಲ್ ಅವರ ನಿಸರ್ಗಕ್ಕೆ ಸಂಬಂಧಿಸಿದ ಹಾಗೂ ಪ್ರಗತಿಯ ಚಲನೆಯಿರುವಂತಹ ಆಯ್ದ ಕಲಾಕೃತಿಗಳು ಗಮನ ಸೆಳೆಯಲಿವೆ.

ಅಮಿತ್ ಭರ್ ಅವರ ಕಲಾಕೃತಿ ಹಿಂದಿನ ಕಾಲದ ನಗರದ ನೋಟವನ್ನು ಕಟ್ಟಿಕೊಟ್ಟರೆ ಅರ್ಪಣ ಕೌರ್ ಹಾಗೂ ರಾಜೇಶ್ ಬಡೆರಿ, ಸುಪರ್ಣ  ಮೊಂಡಲ್ ಅವರ ವಿಭಿನ್ನ ಕಲಾಕೃತಿಗಳನ್ನು ಕಲಾ ಪ್ರಿಯರು ಕಾಣಬಹುದು.
ಮೇ 3ರಿಂದ ಆರಂಭವಾಗಲಿರುವ ಪ್ರದರ್ಶನ ಮೇ17ರವರೆಗೆ ನಡೆಯಲಿದ್ದು ಸಾರ್ವಜನಿಕರ ವೀಕ್ಷಣೆಗೆ ಬೆಳಗ್ಗೆ 11 ರಿಂದ ರಾತ್ರಿ 8 ಗಂಟೆಯವರೆಗೆ ಮುಕ್ತವಾಗಿದೆ. ಸ್ಥಳ: ಆರ್ಟ್‌ಮಂತ್ರಂ, ದಿ ಹವೇಲಿ, ಎಂಜಿ ರಸ್ತೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT