ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಧ್ಯಾತ್ಮಿಕ ರಾಜಧಾನಿ’ಯಾಗಿ ಬುದ್ಧಗಯಾ ಅಭಿವೃದ್ಧಿ: ಮೋದಿ

Last Updated 5 ಸೆಪ್ಟೆಂಬರ್ 2015, 10:48 IST
ಅಕ್ಷರ ಗಾತ್ರ

ಬುದ್ಧಗಯಾ (ಪಿಟಿಐ): ಬುದ್ಧಗಯಾವನ್ನು ‘ಜ್ಞಾನೋದಯ ಉಂಟುಮಾಡುವ ಸ್ಥಳ’ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರ್ಕಾರ ‘ಆಧ್ಯಾತ್ಮಿಕ ರಾಜಧಾನಿ’ಯಾಗಿ ಈ ಸ್ಥಳವನ್ನು ಅಭಿವೃದ್ಧಿಪಡಿಸಲಿದೆ ಎಂದು ಹೇಳಿದರು.

ಮಹಾಬೋಧಿ ಮಂದಿರಕ್ಕೆ ಶನಿವಾರ ಭೇಟಿ  ನೀಡಿದ ಅವರು, ಬುದ್ಧಗಯಾ ಭಾರತ ಮತ್ತು ಬೌದ್ಧ ಜಗತ್ತಿನ ನಡುವೆ ನಾಗರಿಕತೆಯ ಬೆಸುಗೆಯಾಗಲಿದೆ. ಈ  ಸ್ಥಳವನ್ನು ಆಧ್ಯಾತ್ಮಿಕ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಭಾರತ ಎಲ್ಲ ಸಹಕಾರ ನೀಡಲಿದೆ ಎಂದರು.

‘ಬುದ್ಧ, ಹಿಂದೂಧರ್ಮದ ಸುಧಾರಕ ಮಾತ್ರವಲ್ಲ, ಇಡೀ ವಿಶ್ವದ ಪರಿವರ್ತಕ. ಇಡೀ ಪ್ರಪಂಚಕ್ಕೆ ಹೊಸ ದೃಷ್ಟಿಕೋನವನ್ನು ನೀಡಿದ ವ್ಯಕ್ತಿ ಅವರು. ಕೃಷ್ಣ ಜನ್ಮಾಷ್ಠಮಿ ದಿನದಂದೇ ಬುದ್ಧಗಯಾದಲ್ಲಿರಲು ಸಂತಸ ಎನಿಸುತ್ತಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT