ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಈಗ ಡಿಜಿಟಲ್ ಸಾಹಿತ್ಯ ಯುಗ’

Last Updated 21 ಜೂನ್ 2014, 20:16 IST
ಅಕ್ಷರ ಗಾತ್ರ

ಬೆಂಗಳೂರು: ‘ಇದು ಡಿಜಿಟಲ್ ಸಾಹಿ­ತ್ಯದ ಯುಗ. ಹೊಸ ತಲೆಮಾರಿನ ಹಲವು ಮಂದಿ ಡಿಜಿಟಲ್ ರೂಪದಲ್ಲಿ ತಮ್ಮ ಬರಹವನ್ನು ಆರಂಭಿಸುತ್ತಿದ್ದಾರೆ. ಇದ­ರಿಂದ ಸಾಹಿತ್ಯದ ಸ್ವರೂಪವೂ ಬದ­ಲಾಗುತ್ತಿದೆ’ ಎಂದು ಸಾಹಿತಿ ಡಾ. ಚಂದ್ರ­ಶೇಖರ ಕಂಬಾರ ಅಭಿಪ್ರಾಯ ಪಟ್ಟರು.

ಸಾರ್ವಜನಿಕ ಗ್ರಂಥಾಲಯ ಇಲಾಖೆ ಮತ್ತು ಕರ್ನಾಟಕ ಗ್ರಂಥಾಲಯಗಳ ಸಂಘವು ಶನಿವಾರ ಏರ್ಪಡಿಸಿದ್ದ ‘ಗ್ರಂಥಾ­ಲಯ­­ಗಳ ಸ್ವರೂಪ’ ವಿಚಾರ ಸಂಕಿರಣ­ವನ್ನು ಉದ್ಘಾಟಿಸಿ ಮಾತನಾಡಿದರು.

‘ಡಿಜಿಟಲ್ ಬರಹದ ಓದು ಕೊಡುವ ಅನುಭವ­ಕ್ಕಿಂತ ಪುಸ್ತಕವನ್ನು ಓದುವ ಅನು­ಭವ ಭಿನ್ನವಾದುದು. ಹೀಗಾಗಿ ಪುಸ್ತಕಗಳು ತಮ್ಮ ಮಹತ್ವವನ್ನು ಉಳಿಸಿ­ಕೊಂಡಿವೆ. ಟಿ.ವಿ, ಕಂಪ್ಯೂಟರ್ ಮತ್ತು ಮೊಬೈಲ್‌ಗಳ ಜಗತ್ತಿನಲ್ಲಿ ಬೆಳೆ­ಯು­ತ್ತಿರುವ ಈಗಿನ ಮಕ್ಕಳ ಗ್ರಹಿಕೆ ಸೀಮಿತಗೊಳ್ಳುತ್ತಿದೆ’ ಎಂದರು.

‘ರಾಷ್ಟ್ರೀಯ ಗ್ರಂಥಾಲಯಗಳ ಯೋಜನೆ’ ಕುರಿತು ಮಾತನಾಡಿದ ಕೋಲ್ಕತ್ತದ ರಾಷ್ಟ್ರೀಯ ಗ್ರಂಥಾಲಯದ ನಿರ್ದೇಶಕ ಡಾ.ಪಿ.ವೈ.ರಾಜೇಂದ್ರ ಕುಮಾರ್, ‘ಈ ಯೋಜನೆ ಅಡಿಯಲ್ಲಿ ಎಲ್ಲಾ ರಾಜ್ಯಗಳಲ್ಲಿ ಮಾದರಿ ಗ್ರಂಥಾ­ಲಯ­ಗಳನ್ನು ರೂಪಿಸ­ಲಾಗುತ್ತದೆ. ಇವು ಡಿಜಿಟಲ್ ಪುಸ್ತಕ, ಅಂತರ್ಜಾಲ ವ್ಯವಸ್ಥೆ ಮತ್ತು  ಪ್ರತಿಯೊಂದು ಸುದ್ದಿ ಪತ್ರಿಕೆ­ಗಳಿಗೂ ಪ್ರತ್ಯೇಕ ವಿಭಾಗಗಳನ್ನು ಹೊಂದಿರಲಿವೆ’ ಎಂದರು.

ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾ­­ಲಯ ವಿಜ್ಞಾನ ವಿಭಾಗದ ಪ್ರಾಧ್ಯಾ­ಪಕ ಡಾ.ಸಿ.ಆರ್.ಕರಿಸಿದ್ದಪ್ಪ ಮಾತ­­­ನಾಡಿ, ‘ದೇಶದಲ್ಲಿಯೇ ರಾಜ್ಯದ ಗ್ರಂಥಾ­­ಲಯ­­ಗಳು ಮಾದರಿ ಎನಿಸಿ­ಕೊಂಡಿವೆ’ ಎಂದರು.

ಡಾ.ಪಿ.ವೈ ರಾಜೇಂದ್ರ ಕುಮಾರ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಲ್.ಬೈರಪ್ಪ, ಕನ್ನಡ ಪುಸ್ತಕ ಪ್ರಾಧಿ­ಕಾರದ ಸದಸ್ಯ ಎಫ್.ಎಸ್. ದುರ­ಗಣ್ಣ­ವರ್, ರಾಜ್ಯ ಸರ್ಕಾರಿ ನೌಕರರ ಸಂಘದ ಗೌರವ ಅಧ್ಯಕ್ಷ ಜಿ.ಎಂ.­ಸಣ್ಣಮುದ್ದಯ್ಯ, ಸಾರ್ವ­ಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶ್ ಕುಮಾರ ಎಸ್.­ಹೊಸಮನಿ ಅವರನ್ನು ಕಾರ್ಯಕ್ರಮ­ದಲ್ಲಿ ಸನ್ಮಾನಿಸ­ಲಾಯಿತು. ಸಾಹಿತಿ ಶೂದ್ರ ಶ್ರೀನಿವಾಸ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT