ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒಕ್ಕೂಟ ವ್ಯವಸ್ಥೆಗೆ ಪೂರಕವಾಗಿ ಕೆಲಸ’

Last Updated 28 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದ ಒಕ್ಕೂಟ ವ್ಯವಸ್ಥೆಯನ್ನು ಬಲಗೊಳಿ­ಸುವ ನಿಟ್ಟಿನಲ್ಲಿ ರಾಜ್ಯಗಳ ಸಮಸ್ಯೆ­ಗಳನ್ನು ಸಂವೇದನೆ­ಯಿಂದ ಮತ್ತು ಆದ್ಯತೆ ಮೇರೆಗೆ ಪರಿಶೀಲಿ­ಸುವಂತೆ ನೂತನ ಪ್ರಧಾನಿ ನರೇಂದ್ರ ಮೋದಿ ತಮ್ಮ ಕಚೇರಿ ಅಧಿಕಾರಿಗಳಿಗೆ ಸೂಚಿಸಿ­ದ್ದಾರೆ. ಪ್ರಧಾನಿ ಕಚೇರಿಗೆ ಬರುವ ಸಮಸ್ಯೆಗಳ ನ್ನು ತುರ್ತಾಗಿ ಇತ್ಯರ್ಥ­ಗೊಳಿಸಲು ಲಭ್ಯವಿರುವ ಎಲ್ಲ ಅತ್ಯಾ­ಧುನಿಕ ತಂತ್ರ­ಜ್ಞಾನ ಮತ್ತು ವ್ಯವಸ್ಥೆ­ಯನ್ನು ಬಳಸಿ­ಕೊಳ್ಳು­ವಂತೆಯೂ ಅವರು ಅಧಿಕಾರಿ­ಗಳಿಗೆ ಕಿವಿಮಾತು ಹೇಳಿದರು.

ಪ್ರಧಾನಿಯಾಗಿ ಅಧಿಕಾರ ಸ್ವೀಕ­ರಿಸಿದ ನಂತರ ಮೊದಲ ಬಾರಿಗೆ ಪ್ರಧಾನಿ ಕಚೇರಿ (ಪಿಎಂಒ) ಅಧಿಕಾರಿ­ಗಳೊಂದಿಗೆ ಬುಧವಾರ ಅಧಿಕೃತವಾಗಿ ಸಭೆ ನಡೆಸಿದ ಅವರು, ಜನರ ಸಮಸ್ಯೆಗಳನ್ನು ವಿಳಂಬ ಮಾಡದೇ ತ್ವರಿತಗತಿಯಲ್ಲಿ ಪರಿಹರಿಸು­ವಂತೆ ಸೂಚಿಸಿದರು.

ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಪ್ರಗತಿ ಸಾಧ್ಯ. ರಾಜ್ಯಗಳು ಸದೃಢ­ವಾದಾಗ ಮಾತ್ರ ಒಕ್ಕೂಟ ವ್ಯವಸ್ಥೆ ಬಲಾಢ್ಯ­ಗೊಳ್ಳುತ್ತದೆ ಎಂದು ಮೋದಿ ಅಭಿಪ್ರಾಯಪಟ್ಟರು.

ಯಾವುದೇ ಹೊಸ ಆಲೋಚನೆ­ಗಳಿದ್ದಲ್ಲಿ ಸಂಕೋಚವಿಲ್ಲದೇ ಮುಕ್ತ­ವಾಗಿ ತಮ್ಮೊಂದಿಗೆ ಹಂಚಿಕೊಳ್ಳ­ಬಹುದು ಎಂದರು. ತಂಡವಾಗಿ ಕೆಲಸ ಮಾಡಿ-­ದಾಗ ಮಾತ್ರ ದೇಶಕ್ಕೆ ಒಳ್ಳೆಯ ಆಡಳಿತ ನೀಡಬಹುದು. ಜನರ ನಿರೀಕ್ಷೆಗೆ ಸ್ಪಂದಿಸಬಹುದು ಎಂದು ಪ್ರಧಾನಿ ತಮ್ಮ ಸಿಬ್ಬಂದಿಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT