ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡದ ದೀಪ ಬೆಳಗಲಿ’

Last Updated 27 ಜನವರಿ 2014, 19:28 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಎದೆಗೂಡಿನಲ್ಲಿ ಕನ್ನಡವನ್ನು ತುಂಬಿಕೊಂಡು, ಪ್ರತಿ ಕನ್ನಡಿಗರ ಹೃದಯದಲ್ಲಿ ಕನ್ನಡದ ದೀಪ­ವನ್ನು ಬೆಳಗಿಸಬೇಕಾದ ಅಗತ್ಯ­ವಿದೆ’ ಎಂದು ಸಾಹಿತಿ ಪ್ರೊ.ಅ.ರಾ.ಮಿತ್ರ ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನಗರದ ಸರ್ಕಾರಿ ರಾಮ್‌ ನಾರಾ­ಯಣ್‌ ಚೆಲ್ಲಾರಾಂ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಸೋಮ­ವಾರ ಆಯೋಜಿಸಿದ್ದ ‘ಪ್ರಾಚೀನ ಕಾವ್ಯ ರಸಗ್ರಹಣ ಶಿಬಿರ’ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹೊರಗಿನವರಿಗೆ, ಹೊರದೇಶ­ದವ­ರಿಗೆ ನಮ್ಮ ಭಾಷೆಯ ಬಗೆಗೆ ಪ್ರೀತಿ­ಯಿದೆ. ಆದರೆ, ನಮ್ಮವರಿಗೆ ನಮ್ಮ ಭಾಷೆ ಬಗ್ಗೆ ಅಭಿಮಾನವಿಲ್ಲ’ ಎಂದು ವಿಷಾದಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಮಾತ­ನಾಡಿ, ‘ಒಂದು ಭಾಷೆ ಬದುಕಿ­ನೊಂದಿಗೆ ಹೆಣೆದುಕೊಂಡಿರು­ತ್ತದೆ. ಒಂದು ಭಾಷೆ ನಾಶವಾದರೆ, ಅಲ್ಲಿನ ಸಂಸ್ಕೃತಿ, ಜನ­ಜೀವನವೂ ನಾಶ­ವಾಗುತ್ತದೆ’ ಎಂದರು.

‘ಬೇರೆ ರಾಜ್ಯ­ಗಳಿಗೆ ಹೋಲಿಸಿದರೆ, ನಮ್ಮ ರಾಜ್ಯದಲ್ಲಿ ಭಾಷೆಯ ಅನು­ಷ್ಠಾನ­ದಲ್ಲಿ ಸೋತಿದ್ದೇವೆ. ಇಂದು ಶಾಲೆಗಳಲ್ಲಿ, ಆಡಳಿತದಲ್ಲಿ ಕನ್ನಡ ಭಾಷೆ­ಯನ್ನು ಬಳಸಲು ಯಾರೂ ಇಷ್ಟ­ಪಡುವುದಿಲ್ಲ. ಆದರೆ, ಭಾರತ ರತ್ನ ಪಡೆದ ವಿಜ್ಞಾನಿ ಸಿ.ಎನ್‌.ಆರ್‌.ರಾವ್‌ ಅವರು ಕನ್ನಡ ಮಾಧ್ಯಮದಲ್ಲಿಯೇ ಓದಿ ಇಂತಹ ಸಾಧನೆಯನ್ನು ಮಾಡಿ­ದ್ದಾರೆ. ಅಂತಹವರು ಎಲ್ಲರಿಗೂ ಸ್ಫೂರ್ತಿ’ ಎಂದು ಹೇಳಿದರು.

‘ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಸತ್ವಯುತ ಕನ್ನಡ ಭಾಷೆಯು ಉಳಿದುಕೊಂಡಿದೆ. ಅಲ್ಲಿನ ನುಡಿಗಟ್ಟು, ಗಾದೆಗಳು ಇಂದಿಗೂ ಅರ್ಥಪೂರ್ಣ­ವಾಗಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT