ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡ ಸಾಹಿತ್ಯ, ಸಂಗೀತದ ಸಂಬಂಧ ಗಾಢ’

Last Updated 22 ಸೆಪ್ಟೆಂಬರ್ 2014, 19:47 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡ ಸಾಹಿತ್ಯ ಮತ್ತು ಸಂಗೀತದ ಸಂಬಂಧವು ಶತಮಾನಗಳಷ್ಟು  ಹಳೆಯದು ಮತ್ತು ಇಂದಿಗೂ ಗಾಢವಾಗಿದೆ’ ಎಂದು ವಿದ್ವಾಂಸ ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ ಹೇಳಿದರು.

ಮಹಾರಾಣಿ ಮಹಿಳಾ ಕಲಾ, ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ಮತ್ತು ಸಂಗೀತ ವಿಭಾಗವು ಕಾಲೇಜು ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ‘ಕನ್ನಡ ಸಾಹಿತ್ಯ ಮತ್ತು ಸಂಗೀತದ ನಡುವಣ ಸಂಬಂಧ– ಹೊಸ ದೃಷ್ಟಿಕೋನ’ ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಸಾಹಿತ್ಯ ಮತ್ತು ಸಂಗೀತವು ಎರಡೂ ಮೇಳೈಸಿರುವುದರಿಂದಲೇ ಇಂದು ಎರಡೂ ಔನ್ನತ್ಯವನ್ನು ಮುಟ್ಟಿವೆ. ಸಾಹಿತ್ಯ ಮತ್ತು ಸಂಗೀತ ಎರಡೂ ಒಂದಕ್ಕೊಂದು ಬೆಸೆದುಕೊಂಡಿವೆ’ ಎಂದರು.   ನಾದ ಮಾಧುರ್ಯದ ಸುಂದರ ರಚನೆ ಕೆಲವು ವರ್ಷಗಳ ಹಿಂದೆಯೇ ಮರೆಯಾಗಿವೆ. ಮೊದಲಿನ ಸಿನಿಮಾದ ಸಂಗೀತವನ್ನು ಕೇಳಿದರೆ ಮಾಧುರ್ಯ ಆವರಿಸುತ್ತಿತ್ತು. ಆದರೆ, ಈಗ ಆರ್ಭಟಿಸುವ ಸಂಗೀತ ಮನಸ್ಸಿಗೆ ಮುದ ನೀಡುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT