ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಯ್ಯಾರ, ರಾಜವಾಡೆ ಹೋರಾಟದ ಬದುಕು-’

Last Updated 8 ನವೆಂಬರ್ 2014, 10:24 IST
ಅಕ್ಷರ ಗಾತ್ರ

ಮುಡಿಪು: ಕಯ್ಯಾರ ಕಿಂಞಣ್ಣ ರೈ ಅವರ ಕಾವ್ಯ, ಸಾಹಿತ್ಯ, ಅಧ್ಯಾಪನ ವೃತ್ತಿ ಹೀಗೆ ಯಾವುದೇ ಕ್ಷೇತ್ರವನ್ನು ನೋಡಿದರೂ ಅವರು ನಮಗೆ ಸಮಾ-­ಜ­ಮುಖಿಯಾಗಿ ಕಾಣುತ್ತಾರೆ.

ಅದೇ ರೀತಿ ಸರಸ್ವತಿ ಬಾಯಿ ರಾಜವಾಡೆ ಅವರ ಸಾಹಿತ್ಯದಲ್ಲೂ ನಾವು ಗಮನಿಸ­ಬಹುದು. ಆಯಾ ಕಾಲಕ್ಕನುಗುಣ­ವಾಗಿ ಈ ಇಬ್ಬರು ಮಹಾ ಚೇತನಗಳ ಬದುಕು, ಸಾಹಿತ್ಯ, ಹೋರಾಟಗಳು, ಅವರು ಪ್ರಸ್ತುತ ಪಡಿಸುವ ಮನೋ­ಭಾವನೆ ಅವರ ಬರವಣಿಗೆಯಲ್ಲಿ ಬಿಂಬಿತವಾಗುತ್ತದೆ ಎಂದು ಖ್ಯಾತ ಚಿಂತಕ, ವಿಮರ್ಶಕ ಪ್ರೊ.ಎಸ್.ಜಿ.­ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಅವರು ಶುಕ್ರವಾರ ಮಂಗಳೂರು ವಿಶ್ವವಿದ್ಯಾನಿಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಆಶ್ರಯದಲ್ಲಿ ‘ಶತಮಾನ ಕಂಡ ಸಾಹಿತಿಗಳು’ ಎಂಬ ವಿಷಯ­ದಲ್ಲಿ ಎರಡು ದಿನಗಳ ಕಾಲ ನಡೆದ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿ­ಯಾಗಿ ಭಾಗವಹಿಸಿ ಮಾತನಾಡಿದರು. ತ್ರಿಕಾಲ ಪ್ರಜ್ಞೆ ಇದ್ದು ಕಟ್ಟುವ ಕಲಾಕೃತಿ ಅದು ಪರಿಪೂರ್ಣವಾಗಿ­ರುತ್ತದೆ.

ಶತಮಾನ ಕಂಡ ಕವಿಗಳಾದ ಕಯ್ಯಾರ ಹಾಗೂ ರಾಜವಾಡೆ ಇವರಿಬ್ಬರ ಸಾಹಿತ್ಯದಲ್ಲೂ ಇಂತಹ ತ್ರಿಕಾಲ ಪ್ರಜ್ಞೆಯನ್ನು ಗಮನಿಸಬ­ಹುದು ಎಂದು ಹೇಳಿದರು. ಕರ್ನಾಟಕ ಏಕೀಕರಣದ ವೇಳೆ ಕಯ್ಯಾರರು ಎತ್ತಿದ ಧ್ವನಿ ಇಂದಿಗೂ ನಿಂತಿಲ್ಲ. ಅವರ ಧ್ವನಿ ಅಖಂಡ ಕರ್ನಾ­ಟಕದ ಕುರಿತ ಧ್ವನಿ. ಅವರಿಗೆ ಪಂಪ ಪ್ರಶಸ್ತಿ ಮೊನ್ನೆ ತಾನೇ ಬಂತು. ಆದರೆ ಅವರಿಗಿಂತ ಮುಂಚೆ ಆ ಪ್ರಶಸ್ತಿ ಪಡೆದ ಕಿರಿಯರು ತಾವೇನು ಸಾಧನೆ ಮಾಡಿ­ದ್ದೇವೆ ಎಂಬ ಬಗ್ಗೆ ಒಮ್ಮೆ ಅವಲೋಕನ ಮಾಡಿ ನೋಡಬೇಕು ಎಂದರು. ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ಅವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಂಗ­ಳೂರು ಕನ್ನಡ ಅಧ್ಯಯನ ವಿಭಾಗದ ಅಧ್ಯಕ್ಷರಾದ ಸಬಿಹಾ ಭೂಮಿಗೌಡ ಅವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT