ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈಮಗ್ಗ ರಕ್ಷಣೆ ಕಾನೂನು ಜಾಗೃತಿಗೆ ನಿರಶನ’

Last Updated 30 ಜನವರಿ 2014, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: ಕೈಮಗ್ಗ ನೇಕಾರಿಕೆ ಉಳಿಸಲು ಸರ್ವೋ­ದಯ ದಿನದಂದು ಹೆಗ್ಗೋಡು ಸಮೀಪದ ಹೊನ್ನೆ­ಸರದ ಚರಕದ ಶ್ರಮಜೀವಿ ಆಶ್ರಮದಲ್ಲಿ ರಂಗ­ಕರ್ಮಿ ಹಾಗೂ ಚರಕ ಸಂಸ್ಥೆಯ ಮುಖ್ಯಸ್ಥ ಪ್ರಸನ್ನ ಅನಿ­ರ್ದಿ­ಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದರು.

ಪ್ರಸನ್ನ ಜತೆ ಚರಕ ಸಂಸ್ಥೆಯ ಕಾರ್ಮಿ­ಕರು ಹಾಗೂ ನೇಕಾರರ ಪರ ಕೆಲಸ ಮಾಡುತ್ತಿರುವ ದೊಡ್ಡ­­­ಬಳ್ಳಾ­ಪುರದ ನರಸಿಂಹಮೂರ್ತಿ, ಬೆಂಗಳೂ­ರಿನ ಸುನೀತಾ ಉಪವಾಸ ಸತ್ಯಾಗ್ರಹ ಕುಳಿತಿದ್ದಾರೆ.

ಪ್ರಸನ್ನ ಮಾತನಾಡಿ, ‘ಉಪವಾಸ ಕೈ ಬಿಡಿ ಎಂದು ಸರ್ಕಾರದ ಹಲವು ಅಧಿ­ಕಾರಿ­ಗಳು, ರಾಜಕಾರಣಿಗಳು, ಸಾಹಿತಿ­ಗಳು, ಕಲಾವಿದರು ತಮ್ಮ ಜತೆ ಮಾತ­ನಾ­ಡುತ್ತಿದ್ದಾರೆ. ಎಲ್ಲರಿಗೂ ಸಮಸ್ಯೆ ಬಗೆ­ಹ­ರಿಸುವ ಬಗ್ಗೆ ಪ್ರಾಮಾಣಿಕ­ವಾದ ಆಸಕ್ತಿ ಇದೆ. ಆದರೆ, ಯಾರಿಗೂ ಕೈಮಗ್ಗ ನೇಕಾರರ ಸಮಸ್ಯೆ ಅರ್ಥವಾ­ಗುತ್ತಿಲ್ಲ’ ಎಂದು ಆಕ್ಷೇಪಿಸಿದರು.

ಕೈಮಗ್ಗ ಕ್ಷೇತ್ರಕ್ಕೆ ಕಾನೂನಿನ ಬೆಂಬಲ ಇದೆ ಎಂಬುದೇ ಇವರಿಗೆ ತಿಳಿದಿಲ್ಲ. ‘ಕೈಮಗ್ಗ ಮೀಸಲಾತಿ ಅಧಿನಿಯಮ–1985’ ಪ್ರಕಾರ ವಿದ್ಯುತ್‌ ಮಗ್ಗ ಬಳಕೆ ಮಾಡು­ವುದು ಕಾನೂನುಬಾಹಿರ. ಆದರೆ, ಸರ್ಕಾರವೇ ಈ ಕಾನೂನನ್ನು ಮುರಿ­ದಿದೆ’ ಎಂದು ದೂರಿದರು.

ಸತ್ಯಾಗ್ರಹಕ್ಕೆ ಸಾಹಿತಿ ನಾ.ಡಿಸೋಜ ಗುರುವಾರ ಬೆಳಿಗ್ಗೆ ಚಾಲನೆ ನೀಡಿದರು. ವಿಮ­ರ್ಶಕ ಡಿ.ಎಸ್‌.ನಾಗ­ಭೂಷಣ್, ಚರಕ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಗೌರಮ್ಮ ಈ ಸಂದರ್ಭಕ್ಕೆ ಸಾಕ್ಷಿಯಾಗಿದ್ದರು.

ಮೈಸೂರು ವರದಿ: ನೇಕಾರರ ಹೋರಾ­ಟ­ವನ್ನು ಬೆಂಬಲಿಸಿ ಮೈಸೂರಿ­ನಲ್ಲಿ  ದೇಸಿ ಬಳಗ ಮೈಸೂರು ಸಂಘ­ಟನೆಯ ಕಾರ್ಯಕರ್ತರು ಮಾನಸ­ಗಂಗೋ­ತ್ರಿಯ ಮಹಾತ್ಮ ಗಾಂಧಿ ಪ್ರತಿಮೆಯ ಎದುರು ಗುರುವಾರ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT