ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಗತ್ತಿನ ಸಕಲ ವಸ್ತುಗಳು ಕವಿತೆಯ ನೆಲೆ’

Last Updated 2 ಏಪ್ರಿಲ್ 2015, 10:57 IST
ಅಕ್ಷರ ಗಾತ್ರ

ಶಿವಮೊಗ್ಗ: ಆಧುನಿಕತೆಯ ಜಂಜಾಟಗಳ ನಡುವೆ ಏಕಾಂತವನ್ನು ಕಂಡುಕೊಳ್ಳುವ ಅಗತ್ಯವಿದ್ದು, ಇಂದಿನ ಕವಿ ಮನೋಧರ್ಮಕ್ಕೆ ಸವಾಲಾಗಿದೆ ಎಂದು ಭದ್ರಾವತಿ ಆಕಾಶವಾಣಿ ಕೇಂದ್ರದ ನಿರ್ದೇಶಕ ಮತ್ತು ವಿಮರ್ಶಕ ಜಿ.ಕೆ. ರವೀಂದ್ರಕುಮಾರ್ ಹೇಳಿದರು.

ನಗರದ ಸಮೀಪ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ಡಾ.ಎಚ್. ತಿಪ್ಪೇರುದ್ರಸ್ವಾಮಿ  ಸಭಾಂಗಣದಲ್ಲಿ ಬುಧವಾರ ಕನ್ನಡ ಭಾರತಿ ವಿಭಾಗದ ಸಾಹಿತ್ಯ ಸಂಘ ಏರ್ಪಡಿಸಿದ್ದ ವಸಂತ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕವಿತೆಗೆ ಪರಂಪರೆಯ ಜವಾಬ್ದಾರಿ ಯಿದೆ.

ಜಗತ್ತಿನ ಸಕಲ ವಸ್ತುಗಳು ಕವಿತೆಯ ನೆಲೆಗಳಾಗಿವೆ. ಕವಿತೆಯು ಒಂದು ರೀತಿಯ ಹದ ನಿರೀಕ್ಷಿಸುತ್ತದೆ. ಪ್ರತಿ ಕವಿಯು ತನ್ನದೇ ಆದ ಒಂದು ಹದವನ್ನು ಹುಡುಕಿಕೊಳ್ಳಬೇಕಿದೆ ಎಂದರು. ಇಂದು ನೂರಾರು ಆಕರ್ಷಣೆಗಳ ನಡುವೆ ಬದುಕುತ್ತಿದ್ದೇವೆ. ಸೃಜನಶೀ ಲತೆಯ ಒಡನಾಟಗಳೊಂದಿಗೆ ಸಾಹಿತ್ಯ ಕೃಷಿ ಸಾಗುತ್ತಿದೆ. ಇಂತಹ  ಸಂದರ್ಭದಲ್ಲಿ ಸಾಹಿತ್ಯ ಒಂದು ಕಾಲದ ಅಂತಃಸಾಕ್ಷಿ ಎಂದು
ಅಭಿಪ್ರಾಯಪಟ್ಟರು.

ಎ.ಸಿ. ಗೀತಾ, ರೂಪೇಶ್ ಜೆ.ಎಸ್, ಶ್ವೇತಾ ಎಂ.ಎನ್, ಹರ್ಷಿತಾ ಕೆ., ಆಶಾ ಎ. ಚೇತನ್ ಕುಮಾರ್ ಜೈನ್ ಎಂ.ಎಸ್., ಪೂಜಾ ಪ್ರಸಾದ್, ರಾಘವೇಂದ್ರ ಆರ್., ಅವಿನಾಶ ಬಿ.ಜಿ. ಹೇಮಾವತಿ ಎನ್.ಎ., ಶಶಿಧರ ಡಿ.ಎಸ್., ಗಾಯತ್ರಿ ಕೆ.ಎಂ., ಕವಿತಮ್ಮ ಆರ್., ಸಾವಿತ್ರಿ ಕೆ.ಎಂ., ಬಸವನಗೌಡ ಟಿ.ಎಸ್.,ಚಿತ್ರ ಬಿ.ಎಸ್.,ಕಾವ್ಯ ಎಂ.ಎಸ್., ಶಿವರಾಜ್, ರವಿ ಕುಮಾರ್ ಕೆ.ಎಂ. ರವಿಕಿರಣ, ಸುಮಲತಾ ಕೆ.ಎಚ್. ಮಂಜುನಾಥ್, ಶೋಭಾ ಸಿ.ಎಂ.,

ಗೋಪಾಲಕೃಷ್ಣ ಹುಲಿಮನೆ, ಪಿ. ಪುಷ್ಪ , ಪವಿತ್ರ ಜಿ., ಸುನೀತ ಜಿ.ಪಿ., ಭವಾನಿ ಎಂ.ಎಚ್., ಎಚ್.ಎಂ.ರಾಧಾ, ಗಾಯತ್ರಿ ಡಿ.ಎಂ., ತಹಸೀನ್ ಬಾನು ಕವಿಗಳು ಕವನಗಳನ್ನು ವಾಚಿಸಿದರು. ಕನ್ನಡಭಾರತಿ ವಿಭಾಗದ ನಿರ್ದೇಶಕ ಡಾ.ಪ್ರಶಾಂತ ನಾಯಕ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT