ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜರ್ಮನ್‌ ಭಾಷೆಯಲ್ಲಿ ಬಿ.ಇಡಿ ಕೋರ್ಸ್‌’

ಅಂತರರಾಷ್ಟ್ರೀಯ ಭಾಷಾ ಮೇಳ
Last Updated 1 ಫೆಬ್ರುವರಿ 2015, 19:43 IST
ಅಕ್ಷರ ಗಾತ್ರ

ಬೆಂಗಳೂರು: ‘ಜರ್ಮನ್ ಭಾಷೆಯಲ್ಲಿ ಬಿ.ಇಡಿ ಕೋರ್ಸ್ ಆರಂಭಿಸಲು ಚಿಂತನೆ ನಡೆಸಲಾಗುತ್ತಿದೆ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಿದೇಶಿ ಭಾಷಾ ವಿಭಾ­ಗದ ಅಧ್ಯಕ್ಷ ಡಾ.ಜೀವನ್‌ ಕುಮಾರ್ ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ವಿದೇಶಿ ಭಾಷಾ ವಿಭಾಗದ ವತಿಯಿಂದ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಭಾಷಾ ಮೇಳದಲ್ಲಿ ಅವರು ಮಾತನಾಡಿದರು.

ಕೇಂದ್ರೀಯ ವಿದ್ಯಾಲಯಗಳಲ್ಲಿ ಐಚ್ಛಿಕ­ವಾಗಿ ವಿದೇಶಿ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವಾಗ ಹೆಚ್ಚಿನ ವಿದ್ಯಾರ್ಥಿಗಳು ಜರ್ಮನ್‌ ಭಾಷೆ­ಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಜರ್ಮನ್‌ ಭಾಷೆಯಲ್ಲಿ ಬಿ.ಇಡಿ ಕೋರ್ಸ್‌ ಆರಂಭಿಸುವಂತೆ ಜರ್ಮನ್‌ ಎಂಬೆಸಿ­ಯಿಂದಲೂ ಮನವಿ ಬಂದಿದೆ ಎಂದರು.

‘ಕೋರ್ಸ್ ಆರಂಭಿಸುವ ಬಗ್ಗೆ ಜರ್ಮನ್ ಎಂಬೆಸಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಜರ್ಮನ್‌ ಭಾಷೆ ಬೋಧನೆಗೆ ಪರಿಣಿತ ಪ್ರಾಧ್ಯಾಪ­ಕರ ಕೊರತೆ ಇದೆ. ಹೀಗಾಗಿ ಪ್ರಾಧ್ಯಾ­ಪ­ಕರಿಗೆ ತರಬೇತಿ ಮತ್ತು ಪಠ್ಯ­ಕ್ರಮ ಸಿದ್ಧ­ಪಡಿಸಲು ನೆರವು ನೀಡುವ ಭರ­ವಸೆ ನೀಡಿದ್ದಾರೆ. ಈ ಬಗ್ಗೆ ಚರ್ಚಿಸಿ ಮುಂದಿನ ಶೈಕ್ಷಣಿಕ ವರ್ಷದಿಂದ ಕೋರ್ಸ್ ಆರಂಭಿಸಲಾಗುವುದು’ ಎಂದರು.

ಜರ್ಮನಿಯ ಉಪ ಕಾನ್ಸಲ್‌ ಜನ­ರಲ್‌ ಆಂಡ್ರಿಯಾ ಕ್ರೈಸ್ಟ್‌ ಮಾತನಾಡಿ, ‘ವಿಶ್ವದ ವಿವಿಧ ದೇಶ­ಗಳಲ್ಲಿ ಜರ್ಮನ್‌ ಭಾಷೆ ಮಾತ­ನಾಡುವ ಮತ್ತು ಕಲಿಯು­ವವರ ಸಂಖ್ಯೆ ಹೆಚ್ಚುತ್ತಿದೆ. ಜರ್ಮನ್‌ ಕಲಿಕೆಯಿಂದ ಹೆಚ್ಚಿನ ಉದ್ಯೋಗಾ­ವಕಾಶ ಸಿಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT