ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡಿಸ್ಕ್‌ ಕ್ಲೀನ್‌ ಅಪ್‌’ ಎಂಬ ನಕಲಿ ತಂತ್ರಾಂಶಗಳು

ತಂತ್ರೋಪನಿಷತ್ತು
Last Updated 27 ಮೇ 2015, 19:30 IST
ಅಕ್ಷರ ಗಾತ್ರ

ಮಾಲ್‌ವೇರ್‌ ಅಥವಾ ವೈರಸ್‌ ಸಮಸ್ಯೆ, ಹಾರ್ಡ್‌ ಡ್ರೈವ್‌ನಲ್ಲಿ ಸ್ಥಳ ಕಡಿಮೆ ಇರುವುದು,  ಹಿನ್ನೆಲೆಯಲ್ಲಿ ಸಾಕಷ್ಟು ಪ್ರೋಗ್ರಾಂಗಳು ರನ್‌ ಆಗುತ್ತಿರುವುದು ರ‍್ಯಾಮ್‌ ಕಡಿಮೆ ಇರುವುದು ಮುಂತಾದ ಕಾರಣಗಳಿಗೆ ಒಮ್ಮೊಮ್ಮೆ ಕಂಪ್ಯೂಟರ್‌ ನಿಧಾನವಾಗುವುದುಂಟು. ಇಂಥ ಸಂದರ್ಭಗಳಲ್ಲಿ ಕಂಪ್ಯೂಟರ್‌ನ ವೇಗ ವರ್ಧಿಸಲು ಅಥವಾ ಅದರಲ್ಲಿನ ಜಂಕ್‌ ಫೈಲ್‌ಗಳನ್ನು ಡಿಲೀಟ್‌ ಮಾಡಲು ಅನೇಕರು ಕ್ಲೀನ್‌ಅಪ್‌ ಸಾಫ್ಟ್‌ವೇರ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳುತ್ತಾರೆ.

ಉಚಿತ ಎಂದ ಕೂಡಲೇ ಅಥವಾ ಇದನ್ನು ಪ್ರಯತ್ನಿಸ ಬಹುದು ಎಂದು ಯಾರಾದರೂ ಹೇಳಿದ ಕೂಡಲೇ ಹಿಂದೆ ಮುಂದೆ ಯೋಚಿಸದೆ ಸಿಕ್ಕ ಸಿಕ್ಕ ತಂತ್ರಾಂಶಗಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳುವವರ ಸಂಖ್ಯೆ ದೊಡ್ಡದಿದೆ. ಸುಮ್ಮನೆ ಗೂಗಲ್‌ ನಲ್ಲಿ ಡಿಸ್ಕ್‌ ಕ್ಲೀನ್‌ ಅಪ್‌ ಸಾಫ್ಟ್‌ವೇರ್‌ ಎಂದು ಸರ್ಚ್‌ ಮಾಡಿದರೆ ಸಾವಿರಾರು ತಂತ್ರಾಂಶಗಳ ಕೊಂಡಿಗಳು ತೆರೆದುಕೊಳ್ಳುತ್ತವೆ. ಆದರೆ, ಇದರಲ್ಲಿ ಶೇ 90ರಷ್ಟು ನಕಲಿ. ಅಡ್ವಾನ್ಸ್ಡ್‌ ಕ್ಲೀನರ್‌, ಆ್ಯಂಟಿ ಮಾಲ್‌ವೇರ್‌ ಡಾಕ್ಟರ್‌, ಆಲ್ಫಾ ಕ್ಲೀನರ್‌, ಆ್ಯಂಟಿ ಸ್ಪೈ ಸ್ಟಾರ್ಮ್‌, ಸೆಕ್ಯೂರ್‌ ಫೈಟರ್‌, ಸೆಕ್ಯುರಿಟಿ ಸೊಲ್ಯೂಷನ್‌ ಹೀಗೆ ಸಾವಿರಾರು ನಕಲಿ (http://goo.gl/lahYx) ಸೆಕ್ಯುರಿಟಿ ಸಾಫ್ಟ್‌ವೇರ್‌ಗಳಿವೆ.

ಇಂತಹ ನಕಲಿ ಸಾಫ್ಟ್‌ವೇರ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡ ನಂತರ ಅದನ್ನು ರನ್‌ ಮಾಡಿದರೆ ಅದು ನಿಮ್ಮ ಕಂಪ್ಯೂಟರ್‌ನಲ್ಲಿ 26571 ಸಮಸ್ಯೆಗಳು ( issues) ಇವೆ ಎಂದೋ, 31765 ಸಮಸ್ಯೆಗಳನ್ನು ಪತ್ತೆ ಹಚ್ಚಲಾಗಿದೆ ಎಂದೋ ತೋರಿಸುತ್ತದೆ. ಅಸಲಿಗೆ ಪ್ರತಿಯೊಂದು ಬ್ರೌಸರ್‌ ಕುಕಿ ಮತ್ತು ಹಿಸ್ಟರಿ ಎಂಟ್ರಿಯು ಇಲ್ಲಿ ಒಂದು ಸಮಸ್ಯೆಯಾಗಿ ಲೆಕ್ಕ ಹಾಕಲಾಗು ತ್ತದೆ.

ಪ್ರತಿಯೊಂದು ಟೆಂಪರರಿ ಫೈಲ್‌ಗಳು, ಫ್ರ್ಯಾಗ್ಮೆಂಟೆಡ್‌ ‌ ಫೈಲ್‌, ಇನ್‌ವ್ಯಾಲಿಡ್‌ ರೆಜಿಸ್ಟ್ರಿಗಳನ್ನೂ ಸಿಂಗಲ್‌ ಇಶ್ಯೂ ಆಗಿ ಕೌಂಟ್ ಮಾಡಲಾಗುತ್ತದೆ. ಉದಾಹರಣೆಗೆ ವಿಂಡೋಸ್‌ ಡಿಸ್ಕ್‌ ಡಿಫ್ರ್ಯಾಗ್ಮೆಂಟ್‌ನಲ್ಲಿ  ಶೇ 2ರಷ್ಟು ಫ್ರ್ಯಾಗ್ಮೆಂಟೇಷನ್‌  ಎಂದು ತೋರಿಸಿ ದರೆ ‘ಮೈ ಕ್ಲೀನ್‌ ಪಿಸಿ’ಯಂತಹ ನಕಲಿ ಸಾಫ್ಟ್‌ವೇರ್‌ನಲ್ಲಿ ಇದು ಶೇ 22ರಷ್ಟು  ಎಂದು ತೋರಿಸುತ್ತದೆ.  ಇದನ್ನು ನೋಡಿ ಹೆದರುವ ಗ್ರಾಹಕರು ಟ್ರಯಲ್‌ ವರ್ಷನ್‌ ಅವಧಿ ಮುಗಿಯುತ್ತಿದ್ದಂತೆ ನಕಲಿ ಸಾಫ್ಟ್‌ವೇರ್‌ಗಳನ್ನೇ ಹಣ ನೀಡಿ ಖರೀದಿಸುತ್ತಾರೆ.

ಯಾವುದೇ ಸಾಫ್ಟ್‌ವೇರ್ ಇನ್‌ಸ್ಟಾಲ್‌ ಮಾಡದೆಯೇ ಕಂಪ್ಯೂಟರ್‌ ವೇಗ ವರ್ಧನೆ ಮಾಡಬಹುದು. ವಿಂಡೋಸ್‌ ಆಪರೇಟಿಂಗ್ ಸಿಸ್ಟಂನಲ್ಲಿ ಬಿಲ್ಟ್‌ ಇನ್‌ ಪಿಸಿ ಕ್ಲೀನಿಂಗ್‌ ಟೂಲ್ಸ್‌ ಡಿಸ್ಕ್‌ ಕ್ಲೀನ್‌ ಅಪ್‌ ಇದೆ. ಕ್ಲೀನಿಂಗ್‌ ಸಾಫ್ಟ್‌ವೇರ್‌ ಮಾಡುವ ಕೆಲಸವನ್ನೇ ಈ ಟೂಲ್‌ ಬಳಸಿ ಮಾಡಬಹುದು. ಅಂದರೆ ಜಂಕ್‌ ಫೈಲ್‌, ಬ್ರೌಸಿಂಗ್‌ ಹಿಸ್ಟರಿಯನ್ನು ಕ್ಲಿಯರ್‌ ಮಾಡಬಹುದು. ಅಷ್ಟೇ ಯಾಕೆ ಯಾವುದೇ ಹೆಚ್ಚುವರಿ ಸಾಫ್ಟ್‌ವೇರ್‌ ಇನ್‌ಸ್ಟಾಲ್‌ ಮಾಡಿಕೊಳ್ಳದೆ ಡಿಫ್ರ್ಯಾಗ್ಮೆಂಟ್‌ ಕೂಡ ಮಾಡಬಹುದು. ಟೆಂಪ್ರವರಿ ಫೈಲ್‌ಗಳು ಅಥವಾ ಬ್ರೌಸಿಂಗ್‌ ಹಿಸ್ಟರಿಯಿಂದ ಕಂಪ್ಯೂಟರ್‌ ವೇಗ ಕಡಿಮೆ ಯಾಗುವುದಿಲ್ಲ. ಕಂಪ್ಯೂಟರ್‌ನ ಫೈಲ್‌ ಸಿಸ್ಟಂ ಫ್ರ್ಯಾಗ್ಮೆಂಟ್‌ ಆದರೆ ವೇಗ ಕಡಿಮೆಯಾಗುತ್ತದೆ. ಇದನ್ನು ಡಿಸ್ಕ್‌ ಡಿಫ್ರ್ಯಾಗ್ಮೆಂಟ್‌  ಟೂಲ್‌ ಬಳಸಿ ಸರಿ ಮಾಡಬಹುದು.

ಕಂಪ್ಯೂಟರ್‌ಗೆ ಹೊಸ ತಂತ್ರಾಂಶ ಇನ್‌ಸ್ಟಾಲ್‌ ಮಾಡಿಕೊಳ್ಳು ವಾಗ ಬೇರೆ ಬೇರೆ ಟೂಲ್‌ಬಾರ್‌ಗಳನ್ನು ಇನ್‌ಸ್ಟಾಲ್‌ ಮಾಡಿ ಕೊಳ್ಳುವಂತೆ ಪಾಪ್‌–ಅಪ್‌ ಸಂದೇಶಗಳು ಬರುತ್ತವೆ. ಏನೆಂದು ನೋಡದೆ ಎಲ್ಲದಕ್ಕೂ ಓಕೆ ಎಂದು ಕ್ಲಿಕ್‌ ಮಾಡುತ್ತಾ ಹೋದರೆ, ಬೇಕಿರುವ, ಬೇಡದಿರುವ ಎಲ್ಲ ಫೈಲ್‌ಗಳು ಸೇರಿಕೊಂಡುಬಿಡು ತ್ತವೆ. ಆನ್‌ಲೈನ್‌ ಮೂಲಕ ಸಾಫ್ಟ್‌ವೇರ್‌ಗಳನ್ನು ಡೌನ್‌ಲೋಡ್‌  ಮಾಡಿಕೊಳ್ಳುವಾಗ ಹೆಚ್ಚೇ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಅನಗತ್ಯ ಸಾಫ್ಟ್‌ವೇರ್‌ಗಳು ಇನ್‌ಸ್ಟಾಲ್‌ ಆಗಿ ಕಂಪ್ಯೂಟರ್‌ ಸ್ಲೋ ಆಗಬಹುದು. ಈ ರೀತಿಯ ಮೆಲಿಷಸ್‌ ಪಾಪ್‌ ಅಪ್‌ಗಳ ಇನ್‌ ಸ್ಟಾಲ್‌ ಆಗಿ ಕಂಪ್ಯೂಟರ್‌ನಲ್ಲಿ ಸಾಕಷ್ಟು ಬದಲಾವಣೆ ತರಬಹುದು ಅಥವಾ ನಕಲಿ ವೆಬ್‌ಸೈಟ್‌ಗಳು ಕಂಪ್ಯೂಟರನ್ನೇ ಹೈಜಾಕ್‌ ಮಾಡಬಹುದು.

ಅನಗತ್ಯ ಟೂಲ್‌ಬಾರ್‌ಗಳನ್ನು ತೆಗೆದುಹಾಕಲು ಹೊಸ ಸಾಫ್ಟ್‌ವೇರ್‌ ಖರೀದಿಸಬೇಕೆಂದೇನಿಲ್ಲ.‌ವಿಂಡೋಸ್‌ ನಲ್ಲಾದರೆ ಸೆಕ್ಯುರಿಟಿ ಸ್ಕ್ಯಾನರ್‌ ಎಂಬ ತಂತ್ರಾಂಶವಿದೆ.ನಮಗೆ ಗೊತ್ತಿಲ್ಲದೆಯೇ ಕಂಪ್ಯೂಟರ್‌ನಲ್ಲಿ ಇನ್‌ಸ್ಟಾಲ್ ಆಗಿರುವ ನಕಲಿ ಸಾಫ್ಟ್‌ವೇರ್‌ಗಳನ್ನು ತೆಗೆದುಹಾಕಲು ಉಚಿತ ರಿಮೂವಲ್‌ (bit.ly/19RSCsO) ಟೂಲ್‌ ಕೂಡ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT