ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಯಾರಿಕಾ ವಲಯವಾಗಿ ಭಾರತ’

Last Updated 26 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಪಿಟಿಐ): ಭಾರತ­ವನ್ನು ಪ್ರಮುಖ ಜಾಗತಿಕ ತಯಾರಿಕಾ ಕೇಂದ್ರ­ವನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ  ವಾಣಿಜ್ಯ ವಹಿವಾಟಿಗೆ ಪೂರಕವಾದ ಮುಕ್ತ ಹಾಗೂ ಉದ್ಯಮ­ಸ್ನೇಹಿ ನೀತಿ ಅಳವಡಿಸಿಕೊಳ್ಳ­ಲಾಗು­ವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

’ಎಲ್ಲ ಹೂಡಿಕೆದಾರರು, ಉದ್ಯಮಿ­ಗಳನ್ನು ಭಾರತಕ್ಕೆ ಆಹ್ವಾನಿಸುತ್ತೇವೆ. ‘ಭಾರತ­ದಲ್ಲಿ ತಯಾರಿಸಿ’ ಎಂಬ  ಧ್ಯೇಯಕ್ಕೆ  ನಾವು ಬದ್ಧ. ಇದಕ್ಕಾಗಿ ವಿಶ್ವ­ದರ್ಜೆಯ ಮೂಲಸೌಕರ್ಯ ಕಲ್ಪಿಸು­ತ್ತೇವೆ. ಗ್ರಾಮಗಳನ್ನು ಆರ್ಥಿಕ ಬದಲಾ­ವ­ಣೆಯ  ವೇದಿಕೆಗಳನ್ನಾಗಿ ಪರಿವರ್ತಿಸು­ತ್ತೇವೆ’ ಎಂದು ಮೋದಿ ಭರವಸೆ ನೀಡಿದ್ದಾರೆ.

ವಾಲ್ ಸ್ಟ್ರೀಟ್‌ ಪತ್ರಿಕೆಯ ಸಂಪಾದ­ಕೀಯ ಪುಟಕ್ಕೆ ಬರೆದ ಅಗ್ರ ಲೇಖನದಲ್ಲಿ ತಮ್ಮ ಕನಸ್ಸು ಬಿಚ್ಚಿಟ್ಟಿರುವ ಮೋದಿ, ಭಾರತ­ದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಎಂದು ಹರ್ಷ ವ್ಯಕ್ತ­ಪಡಿಸಿದ್ದಾರೆ.

‘ಅಂತರರಾಷ್ಟ್ರೀಯ ಸಹ­ಭಾಗಿತ್ವ­ದಲ್ಲಿ ನಮ್ಮ ಕನಸನ್ನು ನನಸಾಗಿ­ಸು­ತ್ತೇವೆ. ಮುಂದಿನ ಬಾರಿ ಭಾರತಕ್ಕೆ ಬರುವ ಮುಂಚೆಯೇ ಈ ಬದಲಾ­ವಣೆಯನ್ನು ಖಂಡಿತ ನೀವು ಗಮನಿ­ಸುತ್ತೀರಿ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT