ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತುಳು ಸುಂದರ ಭಾಷೆ’

Last Updated 17 ಫೆಬ್ರುವರಿ 2015, 6:28 IST
ಅಕ್ಷರ ಗಾತ್ರ

ಉಡುಪಿ: ಕಲ್ಯಾಣಪುರ ಮಿಲಾಗ್ರಿಸ್‌ ಕಾಲೇಜಿನಲ್ಲಿ ಇತ್ತೀಚೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಕಾಲೇಜಿನ ಕನ್ನಡ ವಿಭಾಗದ ಸಹಯೋ­ಗದಲ್ಲಿ ನಡೆದ ತುಳು ಯುವ ಪ್ರತಿಭಾ ಸಮ್ಮೇಳನವನ್ನು ಅಕಾಡೆಮಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ಉದ್ಘಾಟಿ­ಸಿದರು.

ಜಾತಿ ಧರ್ಮ ಭೇದವಿಲ್ಲದೆ ಎಲ್ಲರೂ ಬಳಸುವ ಸುಂದರ ಭಾಷೆ ತುಳು. ಅದನ್ನು ಎಲ್ಲರೂ ಕಲಿಯಬೇಕು ಮತ್ತು ಬೆಳೆಸಬೇಕು ಎಂದರು.
ಮಂಗಳೂರು ಸಂತ ಅಲೋಶಿ­ಯಸ್‌ ಸಂಧ್ಯಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಹಾಲಿಂಗ ಭಟ್‌ ಮಾತನಾಡಿ, ತುಳು ಸಂಸ್ಕೃತಿ, ಆಚಾರ ವಿಚಾರಗಳು ಬಹಳ ವಿಶಿಷ್ಟವಾದದ್ದು. ಅದನ್ನು ಇತರರಿಗೂ ತಿಳಿಸುವ ಕೆಲಸ ಯುವ­ಪೀಳಿಗೆಯಿಂದ ಆಗಬೇಕು ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ. ನೇರಿ ಕರ್ನೇಲಿಯೊ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಇಂದಿನ ಯುವ ಸಮುದಾಯ ತುಳು ಭಾಷೆ, ಸಂಸ್ಕೃತಿ­ಯನ್ನು ಉಳಿಸಿ ಬೆಳೆಸುವತ್ತಾ ಕಾರ್ಯ ಪ್ರವೃತ್ತವಾಗಬೇಕು ಎಂದರು.

ಪ್ರೊ. ನಾರಾಯಣ ಎಂ. ಹೆಗಡೆ ಸ್ವಾಗತಿಸಿ­ದರು, ಉಪನ್ಯಾಸಕಿ ಎಂ.ಡಿ. ಹರಿಣಾಕ್ಷಿ ಕಾರ್ಯಕ್ರಮ ನಿರೂಪಿಸಿ­ದರು, ಉಪನ್ಯಾ­ಸಕ ರವಿನಂದನ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT