ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಸಂಸ ಒಗ್ಗೂಡಿಸಲು ದೇವನೂರ ಮುಂದಾಗಲಿ’

Last Updated 15 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಮೈಸೂರು: ಮಹಾತ್ಮ ಗಾಂಧೀಜಿ ಅವರ ಅನುಯಾ­ಯಿಯಾದ ಸಾಹಿತಿ ದೇವ­ನೂರ ಮಹಾದೇವ ಅವರು ಕಠೋರತೆ ಬಿಟ್ಟು, ಒಡೆದು ಹೋಗಿ­ರುವ ದಲಿತ ಸಂಘರ್ಷ ಸಮಿತಿಗಳನ್ನು (ಡಿಎಸ್‌ಎಸ್‌) ಒಂದುಗೂಡಿಸಲಿ ಎಂದು ಡಿಎಸ್‌ಎಸ್‌ ರಾಜ್ಯ ಸಂಚಾಲಕ ಲಕ್ಷ್ಮೀನಾರಾ­ಯಣ ನಾಗವಾರ ಒತ್ತಾಯಿಸಿದರು.

ದಲಿತ ಸಾಹಿತ್ಯ ಪರಿಷತ್ತು ನಗರ­ದಲ್ಲಿ ಆಯೋಜಿಸಿರುವ 5ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಸೋಮವಾರ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ದಲಿತ ಚೇತನ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾ­ಡಿದರು.

‘ಡಿಎಸ್‌ಎಸ್‌ ಹುಟ್ಟುವ ಮೊದಲು ನವೋದಯ ಹಾಗೂ ನವ್ಯ ಸಾಹಿತಿಗಳ ಜತೆ ಗುರುತಿಸಿಕೊಂಡಿದ್ದ ದೇವನೂರ ಅವರು, ಈಗಲೂ ನವೋದಯ, ನವ್ಯದ ಸೆಳೆತದಲ್ಲಿಯೇ ಇದ್ದಾರೆ. ಹೀಗಾಗಿ, ದಲಿತ ಸಾಹಿತಿ­ಯಾಗಿ ಗುರು­ತಿ­­­ಸಿ­ಕೊಳ್ಳಲು ಸಂಕೋಚ­ಪಡು­ತ್ತಾರೆ. ಅಲ್ಲದೆ, ಮೇಲ್ಜಾತಿ­ಯವ­ರನ್ನು ತೃಪ್ತಿಪ­ಡಿ­ಸಲು ಹೆಚ್ಚು ಹಂಬಲಿ­ಸು­ತ್ತಾರೆ. ಮೇಲ್ಜಾ­­­ತಿಗಳ ಕಾರ್ಯ­ಕ್ರಮ­ಗ­ಳಲ್ಲಿ ಹೆಚ್ಚು ಪಾಲ್ಗೊಳ್ಳುವ ಅವರು, ಮುಂದಿನ ದಲಿತ ಸಾಹಿತ್ಯ ಸಮ್ಮೇಳನ­ದಲ್ಲಿ ಭಾಗವಹಿಸಿ, ಮಾರ್ಗದರ್ಶನ ಮಾಡಲಿ’ ಎಂದು ಅವರು ಕೋರಿದರು.

ಎಪ್ಪತ್ತರ ದಶಕದಲ್ಲಿ ದಲಿತ ಚಳವಳಿಯಲ್ಲಿದ್ದ ಸಾಹಿತಿಗಳು ಈಗ ಹಿರಿಯರಾಗಿದ್ದಾರೆ. ತಮ್ಮ ಹತಾಶೆ­ಗಳನ್ನು ಸಮಾಜದ ಹತಾಶೆಗಳೆಂದು ಬಿಂಬಿಸು­ತ್ತಿದ್ದಾರೆ. ದಲಿತ ಚಳವಳಿ­ಯನ್ನು ವಿಘಟಿಸುವ ಹುನ್ನಾರ ನಡೆ ಸು­ತ್ತಿ­­ದ್ದಾರೆ. ದೇವನೂರ ಅವರ ಒಡ­ನಾಡಿಗಳಾದ ಕೆ.ಬಿ. ಸಿದ್ದಯ್ಯ, ಎಚ್‌. ಗೋವಿಂದಯ್ಯ, ಕೋಟಿಗಾನಹಳ್ಳಿ ರಾಮಯ್ಯ ಅವರು ಕುಬ್ಜ ಮನಸ್ಸಿ­ನ­ವರು. ಇವರೆಲ್ಲ ಡಿಎಸ್‌ಎಸ್‌ ಒಂದಾ­ಗು­ವು­ದನ್ನು ಇಷ್ಟಪಡು­ವುದಿಲ್ಲ. ಆದರೆ, ಇವರ ಮಾತುಗಳನ್ನು ದೇವನೂರ ಅವರು ಕೇಳದಿರಲಿ ಎಂದು ನಾಗವಾರ ಮನವಿ ಮಾಡಿದರು.

ಮಲಿನಗೊಂಡ ಮನಸ್ಸುಗಳು ಹಿರಿಯ ದಲಿತ ಸಾಹಿತಿಗಳ ಕೃತಿಗಳನ್ನು ಟೀಕಿ­ಸುತ್ತಿವೆ. ಇದರಿಂದ ಹೊಸ ಪೀಳಿ­ಗೆಯ ಲೇಖಕರನ್ನು ತಪ್ಪು ದಾರಿಗೆ ಎಳೆ­ಯ­­ಲಾ­ಗುತ್ತಿದೆ ಎಂದೂ ಅವರು ವಿಷಾದ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT