ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇಶವು ನಿಮಗೆ ಭುಜಕ್ಕೆ ಭುಜಕೊಟ್ಟು ನಿಲ್ಲುತ್ತೆ’

ಸಿಯಾಚಿನ್‌ನಲ್ಲಿರುವ ಯೋಧರಿಗೆ ಪ್ರಧಾನಿ ಭರವಸೆ
Last Updated 23 ಅಕ್ಟೋಬರ್ 2014, 10:07 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಎಲ್ಲಾ ಭಾರತೀಯರು ನಿಮಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತಾರೆ ಎಂಬ ಸಂದೇಶವನ್ನು ತಲುಪಿಸಲು ಸಿಯಾಚಿನ್‌ಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿ ದೇಶದ ಗಡಿ ಕಾಯುತ್ತಿರುವ ಭದ್ರತಾ ಸಿಬ್ಬಂದಿಯೊಂದಿಗೆ ಗುರುವಾರ ಸ್ವಲ್ಪ ಸಮಯವನ್ನು ಕಳೆದರು.

‘ಇದೇ ಮೊದಲ ಬಾರಿಗೆ ಒಬ್ಬ ಪ್ರಧಾನಿಗೆ ಬೆಳಕಿನ ಹಬ್ಬದಂದು ನಮ್ಮ ಸೈನಿಕರೊಂದಿಗೆ ಕಾಲ ಕಳೆಯುವ ಅದ್ಭುತ ಅವಕಾಶ ಲಭಿಸಿದೆ. ಸಿಯಾಚಿನ್‌ ಹಿಮಪರ್ವತದಿಂದ ವೀರ ಯೋಧರೊಂದಿಗೆ ಎಲ್ಲಾ ಭಾರತೀಯರಿಗೂ ದೀಪಾವಳಿ ಹಬ್ಬದ ಶುಭಾಷಯಗಳು’ ಎಂದು ಮೋದಿ ಅವರು ಟ್ವೀಟ್‌ ಮಾಡಿದ್ದಾರೆ.

ಅಲ್ಲದೇ, ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರಿಗೂ ಅಲ್ಲಿಂದಲೇ ಶುಭಾಷಯ ತಿಳಿಸಿದ್ದಾರೆ.

‘ಸಿಯಾಚಿನ್‌ನಿಂದ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರಿಗೆ ದೀಪಾವಳಿಯ ಹಾರ್ದಿಕ ಶುಭಾಷಯಗಳು. ಪ್ರಣಬ್‌ ದಾ (ಬಂಗಾಳಿ ಭಾಷೆಯಲ್ಲಿ ದಾ ಎಂದರೆ ಸಹೋದರ) ಅವರಿಗೆ ದೊರೆತ ಕೆಲವು ವಿಶಿಷ್ಠ ಶುಭಾಷಯಗಳಲ್ಲಿ ಇದೂ ಒಂದಾಗಲಿದೆ’ ಎಂದು ಪ್ರಧಾನಿ ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT