ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇಶ ಭಕ್ತಿ ಬೆಳೆಸುವುದೇ ಸ್ಕೌಟ್ಸ್ ಗುರಿ’

ಪದವಿ ಕಾಲೇಜಿನಲ್ಲಿ ಸ್ಕೌಟ್ಸ್‌ ರೋವರ್ಸ್‌ ಘಟಕ ಆರಂಭ
Last Updated 13 ಫೆಬ್ರುವರಿ 2016, 7:17 IST
ಅಕ್ಷರ ಗಾತ್ರ

ಯಾದಗಿರಿ: ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸಿ, ಸಮಾಜದಲ್ಲಿ ಉತ್ತಮ ನಾಗ ರಿಕರಾಗಿ ಬಾಳಲು ಪ್ರೇರಣೆ ನೀಡುವುದು ಮತ್ತು ದೇಶಭಕ್ತಿ ಬೆಳೆಸುವುದು ಸ್ಕೌಟ್ಸ್ ಮತ್ತು ಗೈಡ್‌ನ ಗುರಿಯಾಗಿದೆ ಎಂದು ಸ್ಕೌಟ್ಸ್‌ ಮತ್ತು ಗೈಡ್‌ ಸಂಸ್ಥೆಯ ಜಿಲ್ಲಾ ಘಟಕದ ಕಾರ್ಯದರ್ಶಿ ಸಿ.ಎಂ. ಪಟ್ಟೇದಾರ ಹೇಳಿದರು.

ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಸ್ಕೌಟ್ಸ್ ಮತ್ತು ಗೈಡ್‌ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಾಲಾ ಕಾಲೇಜುಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಮುಖ್ಯ ವಾಗಿ ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು. ಶಿಸ್ತು ಶಿಕ್ಷಣದ ತಳಹದಿ ಎನ್ನುವಂತೆ, ಶಿಸ್ತಿನಿಂದ ವರ್ತಿಸುವ ವಿದ್ಯಾರ್ಥಿಗಳು ಭವಿಷ್ಯದ ಜೀವನದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಅತಿಥಿಗಾಳಾಗಿ ಆಗಮಿಸಿದ್ದ ಜಿಲ್ಲಾ ಗೈಡ್ಸ್ ಆಯುಕ್ತೆ ನಾಗರತ್ನ ಅನಪೂರ ಮಾತನಾಡಿ, ಯಾದಗಿರಿ ಜಿಲ್ಲೆಯಾದ ಮೇಲೆ ಇಲ್ಲಿನ ಶಾಲಾ ಕಾಲೇಜುಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್‌ ಘಟಕಗಳು ಕಾರ್ಯ ಪ್ರವೃತ್ತವಾಗಿವೆ. ಈಗ ಕಾಲೇಜು ಹಂತದಲ್ಲಿ ರೋವರ್ಸ್‌ ಸ್ಕೌಟ್ಸ್ ಘಟಕ ಆರಂಭವಾಗುತ್ತಿರುವುದು ಉತ್ತಮ ಬೆಳವಣಿಗೆ. ವಿದ್ಯಾರ್ಥಿಗಳು ಈ ಘಟಕವನ್ನು ಸೇರಿಕೊಂಡು, ಅದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಜಿಲ್ಲಾ ಗೈಡ್ಸ್ ಸಂಘಟನಾ ಆಯುಕ್ತೆ ನಾಗರತ್ನ ಪಾಟೀಲ್ ಮಾತನಾಡಿ, ನಮ್ಮ ದೇಶದಲ್ಲಿ ಮಾತ್ರವಲ್ಲ ಪ್ರಪಂಚದ 216 ದೇಶಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, ಕೋಟ್ಯಂತರ ವಿದ್ಯಾರ್ಥಿಗಳು ಇದರಲ್ಲಿ ತೊಡಗಿಸಿಕೊಂಡು ದೇಶಭಕ್ತಿಯನ್ನು ಮೆರೆಯುತ್ತಿದ್ದಾರೆ ಎಂದು ತಿಳಿಸಿದರು. ಜಿಲ್ಲಾ ಸ್ಕೌಟ್ಸ್ ತರಬೇತುದಾರ ರಾಜೇಂದ್ರ ಟಿ.ಕೆ. ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್‌ ಉದಯಿಸಿದ ಕಾರಣ ಮತ್ತು ಅದು ಬೆಳೆದು ಬಂದ ದಾರಿಯನ್ನು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಸುಭಾಷಚಂದ್ರ ಕೌಲಗಿ, ಸದ್ಯ ರೋವರ್ಸ್‌ ಘಟಕವನ್ನು ಪ್ರಾರಂಭಿಸಲಾಗಿದ್ದು, ಅದಕ್ಕೆ  ಕ್ರಿಯಾ ಶೀಲ ಅಧ್ಯಾಪಕರನ್ನು ಲೀಡರ್ ಆಗಿ ನೇಮಿಸಲಾಗಿದೆ. ಘಟಕಕ್ಕೆ ಸೇರಿಕೊಳ್ಳುವ ವಿದ್ಯಾರ್ಥಿಗಳು ಶಿಸ್ತಿನ ಸಿಪಾಯಿಗಳಾಗಿ ವರ್ತಿಸಬೇಕು. ಮುಂಬರುವ ದಿನಗಳಲ್ಲಿ ರೇಂಜರ್ಸ್‌ ಘಟಕವನ್ನು ಪ್ರಾರಂಭಿಸಿ, ವಿದ್ಯಾರ್ಥಿ ನಿಯರಿಗೆ ಅನುಕೂಲ ವಾಗು ವಂತೆ ಮಾಡಲಾಗುವುದು ಎಂದರು.

ಅಶೋಕ ವಾಟ್ಕರ್, ಡಾ. ಮೋನಯ್ಯ ಕಲಾಲ, ಭಾಗ್ಯಲಕ್ಷ್ಮಿ, ಚನ್ನಬಸ್ಸಪ್ಪ ಓಡಕರ್, ಯಲ್ಲಪ್ಪ, ಸಂತೋಷಿ, ತಬಸ್ಸಮ್, ವಿದ್ಯಾರ್ಥಿಗಳು ಇದ್ದರು. ರೋವರ್ಸ್‌ ಸ್ಕೌಟ್ ಲೀಡರ್ ರಾಘವೇಂದ್ರ ಬಂಡಿಮನಿ ಸ್ವಾಗತಿಸಿ, ರೋವರ್ಸ್‌ ಸ್ಕೌಟ್ ತರಬೇತಿಯಲ್ಲಿ ತಮಗಾದ ರೋಚಕ ಅನುಭವಗಳನ್ನು ಹಂಚಿಕೊಂಡರು.  ಚೆನ್ನೈನ ಹಿಮಾಕ್ಷರ ಸಂಸ್ಥೆಯಿಂದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಪ್ರಶಸ್ತಿ ವಿಜೇತ ರಾಘವೇಂದ್ರ ಬಂಡಿಮನಿ ಅವರನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು.

***
ವಿದ್ಯಾರ್ಥಿಗಳು ಸ್ವಯಂ ಸ್ಫೂರ್ತಿಯಿಂದ ಸ್ಕೌಟ್ಸ್‌ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ದೇಶ ಸೇವೆಗೆ ಮುಂದಾಗಬೇಕು.
-ರಾಜೇಂದ್ರ ಟಿ.ಕೆ.,
ಜಿಲ್ಲಾ ಸ್ಕೌಟ್ಸ್ ತರಬೇತುದಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT