ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಧಾರವಾಡ ವ್ಯಾಪ್ತಿಯಲ್ಲಿಯೇ ಉಳಿಸಿ’

ಹೈಕ ಹೈಕೋರ್ಟ್‌ಪೀಠಕ್ಕೆ ವಿರೋಧ: ವಕೀಲರ ಸಂಘದಿಂದ ಪ್ರತಿಭಟನೆ, ರಸ್ತೆ ತಡೆ
Last Updated 1 ಸೆಪ್ಟೆಂಬರ್ 2015, 10:19 IST
ಅಕ್ಷರ ಗಾತ್ರ

ಹೊಸಪೇಟೆ: ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳನ್ನು ಧಾರವಾಡ ಹೈಕೋರ್ಟ್‌ ಪೀಠದ ವ್ಯಾಪ್ತಿಯಲ್ಲಿ ಮುಂದುವರಿಸು ವಂತೆ ಆಗ್ರಹಿಸಿ ತಾಲ್ಲೂಕು ವಕೀಲರ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಹಾಗೂ ವಕೀಲರು ಸೋಮವಾರ ನಗರದ ರೋಟರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಕಲಾಪ ಬಹಿಷ್ಕರಿಸಿ ಪ್ರತಿಭಟನೆಗೆ ಮುಂದಾದ ವಕೀಲರು ರೋಟರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಲ್ಲದೆ ಈ ಕುರಿತಾದ ಮನವಿಯೊಂದನ್ನು ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರವಾನಿಸಿದರು.

ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳು ಈವರೆಗೆ ಧಾರವಾಡ ಹೈಕೋರ್ಟ್‌ ವ್ಯಾಪ್ತಿಯಲ್ಲಿದೆ. ಈ ಎರಡು ಜಿಲ್ಲೆಗಳು ಧಾರವಾಡಕ್ಕೆ ಹತ್ತಿರ ಇರುವುದರಿಂದ ಕಕ್ಷಿದಾರರು ಹಾಗೂ ವಕೀಲರಿಗೆ ಹೆಚ್ಚು ಅನುಕೂಲವಾಗುತ್ತಿದೆ ಎಂದು ಹೇಳಿದರು.

175 ಕಿ.ಮೀ ದೂರದ ಧಾರವಾಡಕ್ಕಿಂತ 400 ಕಿ.ಮೀ ದೂರದ ಕಲಬುರ್ಗಿಗೆ ಹೋಗುವುದು ಭೌಗೋಳಿಕವಾಗಿ ಸಮಸ್ಯೆಯಾಗಲಿದೆ. ಇಂಥ ಪರಿಸ್ಥಿತಿಯಲ್ಲಿ ಈ ಎರಡು ಜಿಲ್ಲೆಗಳನ್ನು ಕಲಬುರ್ಗಿ ವ್ಯಾಪ್ತಿಗೆ ಒಳಪಡಿಸುವುದರಿಂದ ತೀವ್ರ ಸಮಸ್ಯೆಯಾಗಲಿದ್ದು, ಸಣ್ಣಪುಟ್ಟ ಕೆಲಸ ಗಳಿಗೂ ದೂರದ ಕಲಬುರ್ಗಿಗೆ ಹೋಗುವ ಅನಿವಾರ್ಯತೆ ಎದುರಾಗ ಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.  
ಈ ಕಾರಣದಿಂದ ಎಲ್ಲ ರೀತಿ ಯಿಂದಲೂ ಅನುಕೂಲವಾಗಿರವ     ಧಾರವಾಡ ಹೈಕೋರ್ಟ್‌ ವ್ಯಾಪ್ತಿಯಲ್ಲಿಯೇ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳ ಮುಂದುವರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. 

ವಕೀಲರ ಸಂಘದ ಅಧ್ಯಕ್ಷ್ಯ ಕೆ.ವಿ. ಬಸವರಾಜ, ಕಾರ್ಯದರ್ಶಿ ರಾಮಪ್ಪ, ಉಪಾಧ್ಯಕ್ಷ ಪ್ರಲ್ಹಾದ್ ಶೆಟ್ಟಿ, ಜಂಟಿ ಕಾರ್ಯದರ್ಶಿ ಎಂ. ಸುರೇಶ್, ಮಹೇಶ್,ಪುಂಡಲೀಕ, ಚಂದ್ರಶೇಖರ ಎಲ್ಗೋಡ್ ಹಾಗೂ ವಿಜಯ ನಗರ ರಕ್ಷಣಾ ವೇದಿಕೆ ಕಟಿಗಿ ಜಂಬಯ್ಯ ನಾಯಕ, ಕರವೇ ತಾಲ್ಲೂಕು ಅಧ್ಯಕ್ಷ ಟಿ.ಹನುಮಂತಪ್ಪ, ವಾಲ್ಮೀಕಿ ಸಮಾಜ ಮುಖಂಡ ಗುಜ್ಜಲ ಶಿವರಾಮಪ್ಪ, ಬಿಜೆಪಿ ಮುಖಂಡರಾದ ಜಿ.ಭರಮಲಿಂಗನಗೌಡ ಹಾಗೂ ಶಶಿಧರಯ್ಯ ಸ್ವಾಮಿ ಸ್ಫೂರ್ತಿ ವೇದಿಕೆ ತಾಯಪ್ಪ ನಾಯಕ ಹಾಗೂ ಜಾಗೃತ ನಾಯಕ ಬಳಗದ ಗುಜ್ಜಲ ಚಂದ್ರಶೇಖರ, ಪೂಜಾರಿ ದುರಗಪ್ಪ ಇದ್ದರು.

ಹಗರಿಬೊಮ್ಮನಹಳ್ಳಿ ವರದಿ
ಧಾರವಾಡ ಹೈಕೋರ್ಟ್‌ ವ್ಯಾಪ್ತಿಗೆ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳನ್ನು ಮುಂದುವರೆಸುವಂತೆ ಒತ್ತಾಯಿಸಿ ತಾಲ್ಲೂಕು ವಕೀಲರ ಸಂಘದ ಪದಾಧಿಕಾರಿಗಳು ಕೋರ್ಟ್‌ ಕಲಾಪ ಬಹಿಷ್ಕರಿಸಿ ಸೋಮವಾರ      ತಹಶೀಲ್ದಾರ್‌ ಕಚೇರಿ ಮುಂದೆ ಧರಣಿ  ನಡೆಸಿದರು.

ತಾಲ್ಲೂಕು ವಕೀಲರ ಸಂಘದ ಮಾಜಿ ಕಾರ್ಯದರ್ಶಿ ಟಿ.ಜಿ.ಎಂ.ಕೊಟ್ರೇಶ್ ಮಾತನಾಡಿ, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಕಕ್ಷಿದಾರರು ಮತ್ತು    ವಕೀಲರಿಗೆ ಅನುಕೂಲಕರವಾಗಿರುವ ಧಾರವಾಡ ಹೈಕೋರ್ಟ್‌ ಪೀಠದ ವ್ಯಾಪ್ತಿಯನ್ನು ಬದಲಿಸಬಾರದು. ಗುಲ್ಬರ್ಗ ಪೀಠದಲ್ಲಿ ಪ್ರಕರಣಗಳ      ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ 2 ಜಿಲ್ಲೆಗಳನ್ನು ಗುಲ್ಬರ್ಗ ಪೀಠಕ್ಕೆ ಸೇರಿಸುವ ಕುರಿತಂತೆ ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ ಮಂಡಳಿ ಕೈಗೊಂಡ ತೀರ್ಮಾನ ಸೂಕ್ತವಾಗಿಲ್ಲ ಎಂದರು.

ಇದೇ ವೇಳೆ ಸಾಹಿತಿ       ಡಾ.ಎಂ.ಎಂ.ಕಲ್ಬುರ್ಗಿ ಅವರ ನಿಧನಕ್ಕೆ ನ್ಯಾಯಾ ಲಯದ ಆವರಣದಲ್ಲಿ ಮೌನಾಚರಣೆ ನಡೆಸಿ, ಸಂತಾಪ ಸೂಚಿಸಿದರು. ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿ, ಕೊಲೆಗಾರರನ್ನು ಶೀಘ್ರ ಬಂಧಿಸಬೇಕು ಎಂದು ವಕೀಲರ ಸಂಘದ ಕೊಟ್ರೇಶ್ ಶೆಟ್ಟರ್ ಆಗ್ರಹಿಸಿದರು.

ಸಂಘದ ಅಧ್ಯಕ್ಷೆ ವಿಶಾಲಾಕ್ಷಮ್ಮಬಾಪೂಜಿ, ಗ್ರೇಡ್–2 ತಹಶೀಲ್ದಾರ್ ಮಾಲತೇಶ್‌ಗೆ ಮನವಿ ಸಲ್ಲಿಸಿದರು. ಸಂಘದ ಮಾಜಿ ಅಧ್ಯಕ್ಷ ಬಿ.ವಿ.ಶಿವ ಯೋಗಿ, ಕಾಯದರ್ಶಿ ಎಚ್.ಸತ್ಯನಾರಾ ಯಣ, ಸದಸ್ಯರಾದ ಬಾವಿ ಪ್ರಕಾಶ್, ಎಸ್.ಲಿಂಗನಗೌಡ, ಪಿ.ರಮೇಶ್, ನರೇಂದ್ರಬಾಬು, ಬಸವರಾಜ, ಬನ್ನಿಕಲ್ಲು ಪ್ರಹ್ಲಾದ್, ಎನ್.ಗುರುಬಸವರಾಜ, ಎಚ್.ಎಂ.ಕೊಟ್ರಯ್ಯ ಇತರರು ಭಾಗವಹಿಸಿದ್ದರು.

* ಧಾರವಾಡ ಹೈಕೋರ್ಟ್‌ ವ್ಯಾಪ್ತಿಯಲ್ಲಿ ಬಳ್ಳಾರಿ, ಕೊಪ್ಪಳಕ್ಕೆ ಅನುಕೂಲ. ಈಗ ಏಕಾಏಕಿ ಕಲಬುರ್ಗಿ ವ್ಯಾಪ್ತಿಗೆ ಸೇರಿಸುವುದರಿಂದ ಸಮಸ್ಯೆ ಆಗಲಿದೆ

ಕೆ.ವಿ.ಬಸವರಾಜ
ವಕೀಲರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT