ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾವೆಲ್ಲರೂ ಇಲ್ಲಿ ಕ್ಷೇಮ’

ಧಾರವಾಡದ 27 ಮಂದಿ
Last Updated 25 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಧಾರವಾಡ: ಸಗಟು ಔಷಧ ಮಾರಾಟ ಕಂಪೆನಿಯೊಂದರ ಪ್ರಾಯೋಜಕತ್ವದಲ್ಲಿ ನೇಪಾಳ ಪ್ರವಾಸ ಕೈಗೊಂಡ ಜಿಲ್ಲೆಯ 27 ಮಂದಿ ಸುರಕ್ಷಿತವಾಗಿರುವ ಕುರಿತು ಆಯೋಜಕ ಶಶಿಧರ ಕಡ್ಲೂರ ಅವರ ಸೋದರ ವಸಂತ ಕಡ್ಲೂರ ಅವರು ತಿಳಿಸಿದರು.

ನೇಪಾಳದ ಲಾಮ್ಜಿಂಗ್‌ನಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ ಪ್ರಬಲ ಭೂಕಂಪ  ಪ್ರದೇಶದಿಂದ ದೂರ ಇದ್ದ ಈ ಪ್ರವಾಸಿಗರು ಯಾವುದೇ ತೊಂದರೆಗೂ ಒಳಗಾಗದೆ ಸುರಕ್ಷಿತವಾಗಿರುವ ಕುರಿತು ಧಾರವಾಡದಲ್ಲಿರುವ ತಮ್ಮ ಕುಟುಂಬದ ಸದಸ್ಯರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

‘ಜಿಲ್ಲೆಯ ಔಷಧ ವ್ಯಾಪಾರಿಗಳು, ವೈದ್ಯರು ಅವರ ಕುಟುಂಬದ ಸದಸ್ಯರನ್ನು ಒಳಗೊಂಡ 27 ಸದಸ್ಯರ ತಂಡ ಇದೇ 20ರಂದು ಧಾರವಾಡದಿಂದ ದೆಹಲಿಗೆ ಹೋಗಿ, ಅಲ್ಲಿಂದ 22ರಂದು ನೇಪಾಳ ತಲುಪಿದರು.

ಶುಕ್ರವಾರ ಇವರೆಲ್ಲರೂ ಕಠ್ಮಂಮಂಡುವಿನಲ್ಲಿದ್ದರು. ಆದರೆ ರಾತ್ರಿ 11ಕ್ಕೆ ಅಲ್ಲಿಂದ ಹೊರಟು ಪೋಖ್ರಾ ತಲುಪಿದರು. ಭೂಕಂಪ ಸುದ್ದಿ ತಿಳಿಯುತ್ತಿದ್ದಂತೆಯೇ ಅವರಿಗೆ ಕರೆ ಮಾಡಿದೆವು. ಅವರೆಲ್ಲರೂ ಸುರಕ್ಷಿತವಾಗಿದ್ದಾರೆ’ ಎಂದು ವಸಂತ ತಿಳಿಸಿದರು.

ಇದರಲ್ಲಿ ಶಶಿಧರ ಕಡ್ಲೂರ, ಅವರ ಪತ್ನಿ ಸುಕನ್ಯಾ, ತಾಯಿ ಈರಮ್ಮ ಮಕ್ಕಳಾದ ಸುಷ್ಮಾ ಹಾಗೂ ಶಿವ ಇದ್ದಾರೆ. ಉಳಿದಂತೆ ಇತರ ಸದಸ್ಯರ ಹೆಸರು ತಿಳಿದುಬಂದಿಲ್ಲ’ ಎಂದು ತಿಳಿಸಿದರು. ನೇಪಾಳದಲ್ಲಿರುವ ಶಶಿಧರ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT