ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಜಾಜ್‌ ವಿ’ ಬೈಕ್ ಖರೀದಿಸಿದ ನಟ ಆಮೀರ್‌ ಖಾನ್‌

Last Updated 3 ಮೇ 2016, 19:30 IST
ಅಕ್ಷರ ಗಾತ್ರ

 ಮುಂಬೈ :  ದೇಶದ ಮೊಟ್ಟ ಮೊದಲ ವಿಮಾನ ವಾಹಕ ಯುದ್ಧ ನೌಕೆ ‘ಐಎನ್‌ಎಸ್‌ ವಿಕ್ರಾಂತ್‌’ದ ಲೋಹ ಬಳಸಿ ತಯಾರಿಸಿರುವ 150 ಸಿಸಿ ಮೋಟಾರ್‌ ಸೈಕಲ್‌ ‘ಬಜಾಜ್‌ ವಿ’ಯನ್ನು ಬಾಲಿವುಡ್‌ ನಟ ಆಮೀರ್‌ ಖಾನ್‌ ಖರೀದಿಸಿದ್ದಾರೆ.

ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ಕಾಳಜಿಗೆ ಖ್ಯಾತರಾಗಿರುವ ಆಮೀರ್‌ ಖಾನ್‌, ಬಜಾಜ್‌ ಆಟೊ ತಯಾರಿಸಿದ ಈ ವಿಶಿಷ್ಟ ಬೈಕ್‌ (ವಿ 15) ಖರೀದಿಸಲು ಆಸಕ್ತಿ  ತೋರಿದ್ದರು. ಈ ವಿಷಯ ಅರಿತ ಬಜಾಜ್‌ ಆಟೊದ ವ್ಯವಸ್ಥಾಪಕ ನಿರ್ದೇಶಕ ರಾಜೀವ್‌ ಬಜಾಜ್‌ ಅವರು, ಆಮೀರ್‌ ಅವರಿಗಾಗಿಯೇ ಬೈಕ್‌ನಲ್ಲಿ ವಿಶಿಷ್ಟ ಸೌಲಭ್ಯ ಕಲ್ಪಿಸಲು ಮುಂದಾಗಿದ್ದರು. ಇಂಧನ ಟ್ಯಾಂಕ್‌ ಮೇಲೆ ‘ಎ’ ಅಕ್ಷರದ  ಉಬ್ಬು ಚಿತ್ರ ಮುದ್ರಿಸಲಾಗಿದೆ.

ರಾಜೀವ್‌ ಬಜಾಜ್‌ ಅವರು ಮಂಗಳವಾರ ಇಲ್ಲಿನ ಆಮೀರ್‌ ಖಾನ್‌ ಅವರ ನಿವಾಸಕ್ಕೆ ತೆರಳಿ ಬೈಕ್‌ ಹಸ್ತಾಂತರಿಸಿದರು.
‘ದಶಕಗಳ ಕಾಲ ದೇಶದ ನೌಕಾಪಡೆಯ ಹೆಮ್ಮೆಯ ಪ್ರತೀಕವಾಗಿದ್ದ    ಯುದ್ಧ ನೌಕೆಯ ತುಣುಕು ಒಳಗೊಂಡಿರುವ ಈ ಬೈಕ್‌ನ ಮಾಲೀಕನಾಗುತ್ತಿರುವುದಕ್ಕೆ ನನಗೆ ಹೆಮ್ಮೆ ಎನಿಸುತ್ತದೆ’ ಎಂದು ಆಮೀರ್‌ ಪ್ರತಿಕ್ರಿಯಿಸಿದ್ದಾರೆ.

‘ಐಎನ್‌ಎಸ್‌ ವಿಕ್ರಾಂತ್‌’ ನೌಕೆಯು 1971ರಲ್ಲಿ ನಡೆದ ಭಾರತ – ಪಾಕಿಸ್ತಾನ ಸಮರದಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT