ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಜೆಪಿ ಮತ್ತು ಪ್ರಧಾನಿ ನಮ್ಮನ್ನು ಕೊಲ್ಲಬಹುದು’

ಎಎಪಿ ಶಾಸಕರಿಗೆ ಕೇಜ್ರಿವಾಲ್‌ರಿಂದ ವಿಡಿಯೊ ಸಂದೇಶದ ಎಚ್ಚರಿಕೆ
Last Updated 27 ಜುಲೈ 2016, 13:39 IST
ಅಕ್ಷರ ಗಾತ್ರ

ನವದೆಹಲಿ (ಏಜೆನ್ಸೀಸ್‌): ‘ಬಿಜೆಪಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಮುಂದಿನ ದಿನಗಳಲ್ಲಿ ನಮ್ಮನ್ನು ಕೊಲ್ಲಬಹುದು. ಹೀಗಾಗಿ ಬಲಿದಾನಕ್ಕೆ ಸಿದ್ಧವಾಗಿ, ಇಲ್ಲವೆ ಮನೆಯಲ್ಲೇ ಇರಿ...’

ದೆಹಲಿ ಮುಖ್ಯಮಂತ್ರಿ ಹಾಗೂ ಆಮ್‌ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರು ತಮ್ಮ ಪಕ್ಷದ ಶಾಸಕರಿಗೆ ಈ ರೀತಿಯ ಎಚ್ಚರಿಕೆ ಸಂದೇಶ ಕಳಿಸಿದ್ದಾರೆ.

ಕೇಜ್ರಿವಾಲ್‌ ಅವರ ಸಂದೇಶದ ವಿಡಿಯೊವನ್ನು ಎಎಪಿ ಯೂಟ್ಯೂಬ್‌ ಚಾನೆಲ್‌ಗೆ ಬುಧವಾರ ಅಪ್‌ಲೋಡ್‌ ಮಾಡಲಾಗಿದೆ.

‘ನಮ್ಮ ಮೇಲೆ ಒತ್ತಡ ಹೆಚ್ಚಿದೆ. ಸಿಬಿಐ, ಭ್ರಷ್ಟಾಚಾರ ನಿಗ್ರಹ ದಳ, ಆದಾಯ ತೆರಿಗೆ ಇಲಾಖೆ ಮತ್ತು ದೆಹಲಿ ಪೊಲೀಸರಿಂದ ನಮ್ಮ ಮೇಲೆ ದಾಳಿ ಹಾಗೂ ವಿಚಾರಣೆ ಹೆಸರಿನಲ್ಲಿ ಒತ್ತಡ ಹೆಚ್ಚಾಗಿದೆ. ಇಷ್ಟೆಲ್ಲಾ ಇಲಾಖೆಗಳು ನಮ್ಮ ಬೆನ್ನತ್ತಿವೆ ಎಂದರೆ ಅದರ ಹಿಂದೆ ಯಾರದ್ದೋ ಕೈವಾಡ ಇರಲೇಬೇಕು. ಆ ಪ್ರಭಾವಿ ವ್ಯಕ್ತಿ ಯಾರು? ಅಮಿತ್‌ ಷಾ ಅವರೇ? ಮೋದಿಯವರೇ? ಪ್ರಧಾನಮಂತ್ರಿ ಕಚೇರಿಯೇ? ಮೋದಿ ಅವರ ನಿರ್ದೇಶನದ ಮೇರೆಗೆ ಅಮಿತ್‌ ಷಾ ಇದನ್ನೆಲ್ಲಾ ಮಾಡಿಸುತ್ತಿದ್ದಾರೆ’ ಎಂದು ಕೇಜ್ರಿವಾಲ್‌ ಆರೋಪಿಸಿದ್ದಾರೆ.

‘ಮೋದಿ ನಮ್ಮ ಮೇಲೆ ಕೋಪಗೊಂಡಿದ್ದಾರೆ. ನಮ್ಮ ಪಕ್ಷದ ಏಳ್ಗೆಯಿಂದ ಅವರು ನಿರಾಶೆಗೊಂಡಿದ್ದಾರೆ ಎಂಬುದು ಬಿಜೆಪಿಯೊಳಗಿನ ಕೆಲವರಿಂದ ನನಗೆ ಗೊತ್ತಾಗಿದೆ. ಹತಾಶ ಮನಸ್ಸನ್ನು ಹೊಂದಿರುವ ಮೋದಿ ಅಂಥವರ ಕೈಯಲ್ಲಿ ದೇಶದ ಆಡಳಿತ ಇರುವುದು ಸುರಕ್ಷಿತವೇ? ಇದೆಲ್ಲವನ್ನೂ ನೆನಪಿಸಿಕೊಂಡರೆ ನನಗೆ ನಿದ್ರೆ ಬರುವುದಿಲ್ಲ’ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

‘ಇವರು ಏನನ್ನು ಮಾಡಲೂ ಹೇಸುವುದಿಲ್ಲ. ಮುಂದಿನ ದಿನಗಳಲ್ಲಿ ಏನಾಗುತ್ತದೆಯೋ ಹೇಳಲು ಬರುವುದಿಲ್ಲ. ಅವರು ನನ್ನನ್ನು ಕೊಲ್ಲಬಹುದು. ನಿಮ್ಮನ್ನು ಕೊಲ್ಲಬಹುದು. ಈ ಬಗ್ಗೆ ನಿಮ್ಮ ಕುಟುಂಬ ಸದಸ್ಯರೊಂದಿಗೆ ಮಾತನಾಡಿ’ ಎಂದು ಹೇಳಿದ್ದಾರೆ.

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT