ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾಷೆ ಮೇಲೆ ಹಿಡಿತದಿಂದ ಉತ್ತಮ ಕೃತಿ ರಚನೆ ಸಾಧ್ಯ’

Last Updated 24 ಮೇ 2015, 20:04 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾಷೆ ಮೇಲೆ ಹಿಡಿತ ಸಾಧಿಸಿದಾಗ ಮಾತ್ರ ಉತ್ತಮ ಸಾಹಿತ್ಯ ರಚನೆ ಮಾಡಲು  ಸಾಧ್ಯ’ ಎಂದು ಇತಿಹಾಸ ತಜ್ಞ ಪ್ರೊ. ಷ. ಶೆಟ್ಟರ್‌ ಅಭಿಪ್ರಾಯಪಟ್ಟರು.

ಅಭಿನವ ಪ್ರಕಾಶನವು ಭಾನುವಾರ ನಗರದ ಬಾಲಭವನದಲ್ಲಿ ಏರ್ಪಡಿಸಿದ್ದ ಲೇಖಕಿ ಎಂ.ಕೆ. ನೇಹಾ ಅವರ ‘ದಿ ಪ್ರೊಕಾಸಿನ್ಸ್‌್’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನನ್ನ ಮೊದಲ ಕೃತಿ ಪ್ರಕಟವಾದಾಗ ನನಗೆ 32 ವರ್ಷ. ನೇಹಾ ತನ್ನ 16ನೇ ವಯಸ್ಸಿನಲ್ಲಿಯೇ ಕಾದಂಬರಿ ರಚಿಸಿದ್ದಾಳೆ. ಇದು ಅವಳಲ್ಲಿರುವ ಪ್ರತಿಭೆಗೆ ಸಾಕ್ಷಿ. ಆಕೆಯಿಂದ ಇನ್ನಷ್ಟು ಕೃತಿಗಳು ಮೂಡಿಬರಲಿ’‌ ಎಂದು ಸಲಹೆ ನೀಡಿದರು.

ಇಸ್ರೊದ ಮಾಜಿ ಅಧ್ಯಕ್ಷ ಡಾ.ಕೆ.ರಾಧಾಕೃಷ್ಣನ್‌ ಮಾತನಾಡಿ, ‘ನೇಹಾಳ ಕೃತಿ ಅತ್ಯಂತ ಸರಳವಾಗಿದೆ. ಸುಲಭವಾಗಿ ಓದುಗರನ್ನು ಸೆರೆ ಹಿಡಿಯುತ್ತದೆ. ಸಾಹಿತ್ಯರಚನೆಯನ್ನು ಗಂಭೀರವಾಗಿ ಪರಿಗಣಿಸಿ ಹೆಚ್ಚು ಹೆಚ್ಚು ಕೃತಿಗಳನ್ನು ರಚಿಸಬೇಕು’ ಎಂದು ಹೇಳಿದರು.

ಲೇಖಕಿ ನೇಹಾ ಮಾತನಾಡಿ, ‘ನಾನು ಚಿಕ್ಕವಳಿದ್ದಾಗ ಅಜ್ಜಿ ಕಥೆ ಹೇಳುತ್ತಿದ್ದರು.  ಈ ಕಾದಂಬರಿ ಬರೆಯಲು ಅದು ಸ್ಫೂರ್ತಿಯಾಯಿತು. ಮೂರು ಕಾದಂಬರಿಗಳ ಸರಣಿಯಲ್ಲಿ ಇದು ಮೊದಲನೆಯದು. ಇನ್ನೂ ಎರಡು ಕಾದಂಬರಿಗಳನ್ನು ರಚಿಸುತ್ತಿದ್ದೇನೆ. ಶೀಘ್ರ ಅದು ಪೂರ್ಣಗೊಳ್ಳಲಿದೆ’ ಎಂದಳು.

ನೇಹಾಳ ತಂದೆ ಡಾ.ಕೆ.ಮಂಜುನಾಥ್‌, ‘ಬಿಡುಗಡೆ ದಿನ ಕೃತಿಯ ಮಾರಾಟದಿಂದ ಬರುವ ಹಣವನ್ನು ನೇಪಾಳದ ಭೂಕಂಪ ಸಂತ್ರಸ್ತರ ನೆರವಿಗೆ ನೀಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT