ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭ್ರಷ್ಟಾಚಾರ ನಿರ್ಮೂಲನೆಗೆ ಕಠಿಣ ಕ್ರಮ’

Last Updated 19 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಕೈತಾಲ್, ಹರಿಯಾಣ (ಪಿಟಿಐ): ‘ಕ್ಯಾನ್ಸರ್‌ಗಿಂತಲೂ ಅಪಾಯಕಾರಿ­ಯಾದ ಭ್ರಷ್ಟಾಚಾರ ‘ವ್ಯಾಧಿ’ಯನ್ನು ನಿರ್ಮೂಲನೆ ಮಾಡಲು ಕಠಿಣ ಕ್ರಮ­ಗಳನ್ನು ತೆಗೆದುಕೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದರು.

ಹರಿಯಾಣದಲ್ಲಿ ಹೆದ್ದಾರಿ ನಿರ್ಮಾಣ ಯೋಜನೆ­ಯೊಂದನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಭ್ರಷ್ಟಾಚಾ­ರವು ಅಪಾಯಕಾರಿ­ಯಾ­ಗಿದ್ದು, ಕ್ಯಾನ್ಸರ್‌ಗಿಂತಲೂ ಅಪಾಯ­ಕಾ­ರಿ­ಯಾಗಿ ಹರಡುತ್ತಿದೆ. ಅದು ದೇಶವನ್ನು ನಾಶಪಡಿಸುತ್ತಿದೆ. ಅದನ್ನು ನಿರ್ಮೂಲನೆ ಮಾಡಲು ಕಠಿಣ ಕ್ರಮಗಳ ಅಗತ್ಯವಿದೆ’ ಎಂದು ಹೇಳಿದರು.

‘ಇದರ (ಭ್ರಷ್ಟಾಚಾರ) ವಿರುದ್ಧ ನಾವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳ­ಬೇಕೇ? ನೀವೇ ಹೇಳಿ. ನಿಮ್ಮ ಆಶೀರ್ವಾ­ದ­ದೊಂದಿಗೆ ನಾನು ಈ ವ್ಯಾಧಿಯಿಂದ ದೇಶವನ್ನು ಮುಕ್ತಗೊಳಿ­ಸು­ತ್ತೇನೆ’ ಎಂದು ಹೇಳಿದರು.

‘ಭ್ರಷ್ಟತೆ ದೇಶವನ್ನು ಹಾಳುಗೆಡವಿದೆ. ಅದರ ವಿರುದ್ಧ ನಾವು ರಾಷ್ಟ್ರೀಯ ಜಾಗೃತಿ ಮೂಡಿಸಬೇಕಿದೆ. ಜನರು ಅದರ ಒಟ್ಟಿಗೆ ಹೆಚ್ಚು ಕಾಲ ಜೀವಿಸಲು ಬಯಸುವುದಿಲ್ಲ ಎಂದು ತಿಳಿದಿದೆ’ ಎಂದು ಅವರು ಹೇಳಿದರು.

‘ದೂರಾಲೋಚನೆ ಅಗತ್ಯ’: ಅಭಿವೃ­ದ್ಧಿಯ ಕುರಿತು ಪ್ರಸ್ತಾಪಿಸಿದ ಮೋದಿ ಅವರು, ‘ಸಮಯ ಬದಲಾಗುತ್ತಿರು­ವು­ದರಿಂದ 20ನೇ ಶತಮಾನದ ಮೂಲ­ಸೌಕರ್ಯಗಳು 21ನೇ ಶತಮಾನದಲ್ಲಿ ಪ್ರಯೋಜನಾಕಾರಿಯಾಗಲಾರವು. ನಾವು ಇನ್ನೂ ಮುಂದಕ್ಕೆ ಯೋಚಿಸ­ಬೇಕಿದೆ’ ಎಂದರು.

‘ನಿದ್ದೆ ಮಾಡಲು ಮೋದಿ ಬಿಡರು’
ಲಖನೌ: ‘ಪ್ರಧಾನಿ ನರೇಂದ್ರ ಮೋದಿ ಅವರು ತಾವೂ ನಿದ್ದೆ ಮಾಡುವುದಿಲ್ಲ. ಬೇರೆಯವರಿಗೂ ನಿದ್ದೆ ಮಾಡಲು ಬಿಡುವುದಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಕಾರ್ಯಕರ್ತರಿಗೆ ಸ್ನೇಹದ ಮಾತುಗಳಲ್ಲೇ ಎಚ್ಚರಿಕೆ ನೀಡಿದರು.

ನೆರೆದಿದ್ದ ನೂರಾರು ಕಾರ್ಯಕ­ರ್ತ­ರನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದ ಅವರು, ಮೋದಿ ಅವರು ಕೆಲಸ ಮಾಡುವ ರೀತಿಯೇ ಹಾಗೆ ಎಂಬುದು ನಿಮಗೆ ಇಷ್ಟರಲ್ಲೇ ಅರ್ಥವಾಗುತ್ತದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರವನ್ನು ರಚಿಸುವುದು ಪಕ್ಷದ ಮೊದಲ ಆದ್ಯತೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT