ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಲಿನಗೊಳ್ಳುತ್ತಿರುವ ಓಝೋನ್‌ ಪದರ’

ಉಡುಪಿ: ವಿಶ್ವ ಪರಿಸರ ದಿನಾಚರಣೆಯಲ್ಲಿ ಡಾ.ಅನಂತ ಪದ್ಮನಾಭ ಭಟ್‌ ಕಳವಳ
Last Updated 10 ಜೂನ್ 2015, 6:04 IST
ಅಕ್ಷರ ಗಾತ್ರ

ಉಡುಪಿ: ‘ಭೂಮಿಯ ಓಝೋನ್‌ ಪದರವೂ ಸೂರ್ಯನಿಂದ ಬರುವ ಕಾಸ್ಮಿಕ್‌ ಕಿರಣಗಳನ್ನು ಶೋಧಿಸಿ, ವಾತಾ ವರಣವನ್ನು ಶುದ್ಧವಾಗಿರಿಸಿದೆ. ಆದರೆ ಹೆಚ್ಚಿನ ಪ್ರಮಾಣದ ಕಾರ್ಬನ್‌ ಡೈಆಕ್ಸೈಡ್‌ ಅನ್ನು ವಾತಾವರಣಕ್ಕೆ ಬಿಟ್ಟು ಮಲಿನ ಗೊಳಿಸುತ್ತಿದ್ದೇವೆ’ ಎಂದು ಉಡುಪಿ ಪೂರ್ಣಪ್ರಜ್ಞಾ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅನಂತ ಪದ್ಮನಾಭ ಭಟ್‌ ಹೇಳಿದರು.

ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾ ಥೇಶ್ವರ ಆಯುರ್ವೇದ ಕಾಲೇಜಿನಲ್ಲಿ ಶುಕ್ರವಾರ ನಡೆದ ವಿಶ್ವ ಪರಿಸರ ದಿನಾ ಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದಿನ ಪೀಳಿಗೆಯೂ ಪರಿಸರ, ಪ್ರಕೃತಿಯನ್ನು ಆಸ್ವಾದಿಸದೆ ಮೊಬೈಲ್‌, ಇಂಟರ್‌ನೆಟ್ ಎಂಬ ಜಗತ್ತಿನಲ್ಲಿ ಮುಳುಗಿ ಹೋಗಿದೆ. ಯಾಂತ್ರಿಕೃತ ಜೀವನದಿಂ ದಾಗಿ ನಾವು ಪ್ರಕೃತಿಯಿಂದ ದೂರ ಸಾಗುತ್ತಿದ್ದೇವೆ. ಈ ರೀತಿಯ ಜೀವನ ಶೈಲಿ ಮುಂದುವರೆದರೆ 70 ವರ್ಷಗಳ ನಂತರ ಕುಡಿಯಲು ಶುದ್ಧ ನೀರು ಮತ್ತು ಉಸಿರಾ ಡಲು ಶುದ್ಧ ಗಾಳಿ ಸಿಗದೇ, ಭೂಮಿಯಲ್ಲಿ ಜೀವಿಗಳು ಬದುಕುವುದೇ ಕಷ್ಟವಾಗು ತ್ತದೆ ಎಂದು ಅಭಿಪ್ರಾಯಪಟ್ಟರು.

ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀಕಾಂತ್‌ ಅಧ್ಯಕ್ಷತೆ ವಹಿಸಿದ್ದರು. ದ್ರವ್ಯಗುಣ ವಿಭಾಗದ ಡಾ. ಚೈತ್ರ ಹೆಬ್ಬಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ನಾತಕೋತ್ತರ ವಿಭಾಗದ ಡೀನ್‌ ಡಾ. ವಿ.ಎನ್‌.ಕೆ. ಉಷಾ ಸ್ವಾಗತಿಸಿದರು, ದ್ರವ್ಯಗುಣ ವಿಭಾಗದ ಡಾ. ಎಸ್‌. ರವಿಕೃಷ್ಣ ಕಾರ್ಯಕ್ರಮ ನಿರೂಪಿಸಿದರು, ದ್ರವ್ಯಗುಣ ವಿಭಾಗದ ಮುಖ್ಯಸ್ಥ ಡಾ. ಟಿ. ಶ್ರೀಧರ ಬಾಯರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT