ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುಖ್ಯರಸ್ತೆ ಬದಿ ಹೊಸ ಮಳಿಗೆಗೆ ಪರವಾನಗಿ ನೀಡಿಲ್ಲ’

Last Updated 29 ಆಗಸ್ಟ್ 2015, 9:10 IST
ಅಕ್ಷರ ಗಾತ್ರ

ಗುಡಿಬಂಡೆ: ಪಟ್ಟಣದ ಮುಖ್ಯರಸ್ತೆ ಬದಿಯಲ್ಲಿ ಹೊಸದಾಗಿ ನಿರ್ಮಿಸಿಕೊಳ್ಳುತ್ತಿರುವ ಮಾಲೀಕರಿಗೆ ಪಟ್ಟಣ ಪಂಚಾಯಿತಿಯಿಂದ ಯಾವುದೇ ಪರವಾಗಿ ನೀಡಿಲ್ಲ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರದೀಪ್ ತಿಳಿಸಿದರು.

ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ 3ನೇ ವಾರ್ಡ್‌ ಸದಸ್ಯೆ ಲಕ್ಷ್ಮಿಕಾಂತಮ್ಮ ಕೇಳಿದ ಪ್ರಶ್ನೆಗೆ ಉತ್ತಸಿದರು.
ಪಟ್ಟಣದ ಮುಖ್ಯರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರಿದೆ. ಆದ್ದರಿಂದ ಕಟ್ಟಡದ ಪರವಾನಗಿಯನ್ನು ಆ ಇಲಾಖೆಯಿಂದ ಪಡೆಯಬೇಕು, ನೀರು ಸೇರಿದಂತೆ ಇತರೆ ಮೂಲ ಸೌಕರ್ಯ ನೀಡುವುದು ಪಟ್ಟಣ ಪಂಚಾಯಿತಿ ಕೆಲಸ ಎಂದು ತಿಳಿಸಿದರು.

ಅಧ್ಯಕ್ಷ ಅಪ್ಸರ್ ಪಾಷ ಮಾತನಾಡಿ, ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಸರ್ಕಾರ ಘೋಷಿಸಿದೆ. ಪಟ್ಟಣದ ಮುಖ್ಯರಸ್ತೆ ಅಗಲೀಕರಣದಿಂದ ಕಟ್ಟಡಗಳನ್ನು ಅನೇಕರು ಕಳೆದುಕೊಂಡಿದ್ದಾರೆ. ತೀವ್ರ ಸಂಕಷ್ಟದಲ್ಲಿರುವ ಪಟ್ಟಣದಲ್ಲಿ ಕೃಷಿ ಮತ್ತು ಕೂಲಿ ಮಾಡಿ ಜೀವನ ನಡೆಸುತ್ತಿರುವ ಜನ ಹೆಚ್ಚಿದ್ದಾರೆ. ಇಂತಹ ಸಂದರ್ಭದಲ್ಲಿ ಮನೆ ಮತ್ತು ನೀರಿನ, ಇತರೆ ಯಾವುದೇ ತೆರಿಗಳನ್ನು ಹೆಚ್ಚಿಸುವುದು ಬೇಡ ಎಂದು ತಿಳಿಸಿದರು. ಇದಕ್ಕೆ ಸರ್ವ ಸದಸ್ಯರೂ ಒಪ್ಪಿಗೆ ಸೂಚಿಸಿದರು.

ಪಟ್ಟಣದಲ್ಲಿ ಎಲ್ಲೆಲ್ಲಿ ತೀವ್ರ ನೀರಿನ ಸಮಸ್ಯೆ ಇರುತ್ತದೆಯೋ ಅಂತಹ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು ಎಂದು ಸದಸ್ಯರು ತಿಳಿಸಿದರು.

₨ 84 ಲಕ್ಷಕ್ಕೆ ಕ್ರಿಯಾ ಯೋಜನೆ ತಯಾರಿ: 14ನೇ ಹಣಕಾಸು ಯೋಜನೆಗೆ ₨ 27 ಲಕ್ಷ ಮತ್ತು 2015-16ನೇ ಸಾಲಿನ ಎಸ್ಎಫ್‌ಸಿ ಅನುದಾನ ₨ 57 ಲಕ್ಷಕ್ಕೆ ಕ್ರಿಯಾ ಯೋಜನೆ ತಯಾರಿಸುವಂತೆ ಸಭೆ ಅನುಮತಿ ನೀಡಿತು.

ಬಾಡಿಗೆ ಬಾಕಿ: ಪಟ್ಟಣದ 8 ತರಕಾರಿ ಅಂಗಡಿಗಳಿಂದ ಜುಲೈ ಅಂತ್ಯಕ್ಕೆ ₨ 2.36 ಲಕ್ಷ ಬಾಕಿ ಇದೆ. ಈ ಹಣ ಕೂಡಲೇ ವಸೂಲಿ ಮಾಡಬೇಕು. ಅವಧಿ ಮುಗಿದಿದ್ದರೆ ಖಾಲಿ ಮಾಡಿಸಬೇಕು ಎಂದು ಸೂಚಿಸಿದರು. ಪಟ್ಟಣದಲ್ಲಿರುವ ಎಲ್ಲ ಕಲ್ಯಾಣ ಮಂಟಪಗಳಿಂದ ₨ 3 ಲಕ್ಷ ಬಾಕಿ ವಸೂಲಿ ಮಾಡಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಲಾಯಿತು.

ರಾಜ ಕಾಲುವೆ ಸ್ವಚ್ಛತೆಗೆ 5 ಲಕ್ಷ: ತಾಲ್ಲೂಕಿನಲ್ಲಿ ಈಗಾಗಲೇ ಡೆಂಗಿ, ಚಿಕೂನ್ ಗುನ್ಯಾ ಪ್ರಕರಣಗಳು ಹೆಚ್ಚುತ್ತಿವೆ. ಪಟ್ಟಣದ 1,2,3,4, 6ಮತ್ತು 7 ನೇ ವಾರ್ಡ್ ಗಳಲ್ಲಿ ಹಾದುಹೋಗಿರುವ ರಾಜ ಕಾಲುವೆಯಲ್ಲಿ ತ್ಯಾಜ್ಯ ಹೆಚ್ಚಾಗಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಇದನ್ನು ಸ್ವಚ್ಛಗೊಳಿಸಲು ₨ 5 ಲಕ್ಷ ನಿಗದಿ ಪಡಿಸಿ ಕ್ರಿಯಾಯೋಜನೆ ತಯಾರಿಸಬೇಕು ಎಂದು ತಿಳಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ದ್ವಾರಕಿನಾಥ ನಾಯ್ಡು, ಸದಸ್ಯರಾದ ಎಂ.ಎನ್.ರಾಜಣ್ಣ, ಎಂ.ಎನ್. ಲಕ್ಷ್ಮಿಕಾಂತಮ್ಮ, ಎನ್.ವಿ.ಲಕ್ಷ್ಮಿ, ಎನ್. ರಮೇಶ್ ಬಾಬು, ಎನ್.ಸುಮಿತ್ರ, ರಿಯಾಜ್ ಪಾಷ, ಎಂ. ವೆಂಕಟಲಕ್ಷ್ಮಮ್ಮ, ಜಬೀನ್ ತಾಜ್, ಜಿ.ಎಸ್. ಚಂದ್ರಶೇಖರ್, ನಾಮನಿರ್ದೇಶಿತ ಸದಸ್ಯರಾದ ಆಶಾ ಜಯಪ್ಪ, ಇಸ್ಮಾಯಿಲ್ ಅಜಾದ್, ನವೀನ್, ಎಂಜಿನಿಯರ್ ತ್ಯಾಗರಾಜು, ಆರೋಗ್ಯ ನಿರೀಕ್ಷಕ ಶಿವಣ್ಣ  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT