ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಾಲ್ಮೀಕಿ ಯಾರು?’ ಕೃತಿ ಮಾರಾಟ: ಸಪ್ನ ಬುಕ್‌ ಹೌಸ್‌ಗೆ ದಾಳಿ

Last Updated 6 ನವೆಂಬರ್ 2014, 19:49 IST
ಅಕ್ಷರ ಗಾತ್ರ

ಬೆಂಗಳೂರು: ಲೇಖಕ ಡಾ.ಕೆ.ಎಸ್.­ನಾರಾಯಣಾಚಾರ್ಯ ಅವರು ರಚಿಸಿ­ರುವ ‘ವಾಲ್ಮೀಕಿ ಯಾರು?’ ಕೃತಿ­ಯನ್ನು ರಾಜ್ಯ ಸರ್ಕಾರ ಮುಟ್ಟು­ಗೋಲು ಹಾಕಿದ್ದರೂ ಮಾರಾಟ ಮಾಡುತ್ತಿದ್ದ ಗಾಂಧಿ­ನಗರದ ಸಪ್ನ ಬುಕ್‌ ಹೌಸ್‌ ಮಳಿಗೆ ಮೇಲೆ ಉಪ್ಪಾರ­ಪೇಟೆ ಪೊಲೀಸರು ಗುರುವಾರ ರಾತ್ರಿ ದಾಳಿ ನಡೆಸಿ 45 ಪುಸ್ತಕಗಳನ್ನು ಜಪ್ತಿ ಮಾಡಿದ್ದಾರೆ.

ಈ ಸಂಬಂಧ ತುಮಕೂರಿನ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾ­ಪಕ ಡಾ.ಸುರೇಶ್ ಎಂಬುವರು ಸಂಜೆ ದೂರು ನೀಡಿದ್ದರು. ಆ ದೂರಿನ ಆಧಾರದಲ್ಲಿ ಉಪ್ಪಾರ­ಪೇಟೆ ಠಾಣೆಯ ಇನ್‌ಸ್ಪೆಕ್ಟರ್ ಪ್ರಕಾಶ್‌ ನೇತೃತ್ವದ ತಂಡ ಸಂಜೆ 6.40ರ ಸುಮಾರಿಗೆ ದಾಳಿ ನಡೆಸಿತು.

ವಾಲ್ಮೀಕಿ ಬೇಡ ಅಲ್ಲ ಬ್ರಾಹ್ಮಣ. ಆದರೆ, ಬೇಡರ ಜಾತಿಯಲ್ಲಿ ಬೆಳೆದಿದ್ದ. ಅವನು ಬ್ರಾಹ್ಮಣ ಜಾತಿ­ಯವನಾಗಿದ್ದುದರಿಂದ ರಾಮಾಯ­­ಣ­ದಂತಹ ಕೃತಿ ರಚಿಸಲು ಸಾಧ್ಯ­ವಾಗಿತ್ತು ಎಂದು ಲೇಖಕರು ಆ ಕೃತಿಯಲ್ಲಿ ಬರೆದಿದ್ದಾರೆ.

ಕೃತಿಯಿಂದ ತಮ್ಮ ಭಾವನೆಗಳಿಗೆ  ಧಕ್ಕೆಯಾಗಿದೆ ದೂರಿ ಎಂದು ವಾಲ್ಮೀಕಿ ಸಮುದಾಯ­ದವರು ಪ್ರತಿಭಟನೆ ನಡೆಸಿ­ದ್ದರಿಂದ ಸರ್ಕಾರ ಆ ಕೃತಿ­ಯನ್ನು ಮುಟ್ಟುಗೋಲು ಹಾಕಿತ್ತು.

‘ಆ ಕೃತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿರುವ ಬಗ್ಗೆ ಮಾಹಿತಿ ಇರಲಿಲ್ಲ’   ಎಂದು ಮಳಿಗೆಯ ಮಾಲೀಕರು ಹೇಳಿದ್ದಾರೆ.  ಕೃತಿಯ ಲೇಖಕರನ್ನು ಸಂಪರ್ಕಿಸಿ ಅವರನ್ನೂ  ವಿಚಾರಣೆ ನಡೆಸಲಾಗು­ವುದು   ಎಂದು ಪೊಲೀಸರು ಹೇಳಿದ್ದಾರೆ. ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT