ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿವೇಚನೆಯಡಿ ಸ್ಪೀಕರ್ ಎಲ್‌ಒಪಿ ನೇಮಿಸಲಿ’

Last Updated 27 ಜುಲೈ 2014, 10:44 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಯಾವುದೇ ಸ್ಪಷ್ಟ ಅನ್ವಯಿಕ ನಿಯಮಗಳಿಲ್ಲದಿದ್ದರೂ’ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಲೋಕಸಭೆಯಲ್ಲಿ ವಿರೋಧ ಪಕ್ಷ ನಾಯಕರನ್ನು ನೇಮಿಸಬೇಕು ಎಂದು ಲೋಕಸಭೆಯ ಮಾಜಿ ಸಭಾಧ್ಯಕ್ಷರೂ ಆಗಿರುವ ಹಿರಿಯ ರಾಜಕೀಯ ಮುತ್ಸದ್ಧಿ ಸೋಮನಾಥ್ ಚಟರ್ಜಿ ಅವರು ಅಭಿಪ್ರಾಯ ಪಟ್ಟಿದ್ದಾರೆ.

‘ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಿಲ್ಲ ಎಂಬ ಕೊರತೆ  ಇದರಿಂದ ನೀಗಿದಂತಾಗುತ್ತದೆ’ ಎಂದು 2004–2009ರ ಅವಧಿಯಲ್ಲಿ ಸ್ಪೀಕರ್‌ ಆಗಿ ಕಾರ್ಯನಿರ್ವಹಿಸಿದ್ದ ಚಟರ್ಜಿ ಅವರು ನುಡಿದಿದ್ದಾರೆ.

ಲೋಕಸಭಾ ಸದಸ್ಯ ಬಲದ ಶೇಕಡ 10 ರಷ್ಟು ಸದಸ್ಯರನ್ನು ಹೊಂದಿರುವ ವಿರೋಧ ಪಕ್ಷಕ್ಕೆ ವಿರೋಧ ಪಕ್ಷದ ನಾಯಕತ್ವ ಸಿಗಬೇಕು ಎಂಬುದು ನಿಯಮ ಎಂದು ಅವರು ಸ್ಪಷ್ಟಪಡಿಸಿದರಾದರೂ, ಈ ವಿಷಯವನ್ನು ಸ್ಪೀಕರ್ ವಿವೇಚನೆಗೆ ಬಿಡಬೇಕು ಎಂದು ತಿಳಿಸಿದರು.

‘ಸದನ ಸುಗಮವಾಗಿ ಕಾರ್ಯನಿರ್ವಹಿಸಲು ವಿರೋಧ ಪಕ್ಷದ ನಾಯಕರನ್ನಾಗಿ ಯಾರನ್ನಾದರೂ ನೇಮಿಸಬೇಕು. ಆಯ್ಕೆಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದು (ಎಲ್‌ಒಪಿ) ವಿರೋಧ ಪಕ್ಷದ ಮಹತ್ವವನ್ನು ಗುರುತಿಸುತ್ತದೆ ಎಂಬುದು ನನ್ನ ಅನಿಸಿಕೆ. ಆದ್ದರಿಂದ ಯಾವುದೇ ಅನ್ವಯಿಕ ನಿಯಮಗಳಿಲ್ಲದಿದ್ದರೂ ಗೌರವಾನ್ವಿತ ಸ್ಪೀಕರ್ ಅವರು ತಮ್ಮ ವಿವೇಚನೆಯನ್ನು ಬಳಸಿಕೊಂಡು ಸದನದ ಒಬ್ಬರನ್ನು ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಸಬೇಕು ಎಂದೂ ನನಗೆನಿಸುತ್ತದೆ. ಯಾರು ವಿರೋಧ ಪಕ್ಷದ ನಾಯಕರು ಎಂಬುದನ್ನು ಸದನದಲ್ಲಿರುವ ವಿವಿಧ ಪಕ್ಷಗಳು ನಿರ್ಧರಿಸಬೇಕು’ ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT