ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಗೀತ ಎಂದರೆ ಅನುದಿನದ ಸ್ಮರಣೆ’

Last Updated 29 ನವೆಂಬರ್ 2013, 19:36 IST
ಅಕ್ಷರ ಗಾತ್ರ

ಬೆಂಗಳೂರು: ‘ಸಂಗೀತವೆಂಬುದು ಕೇವಲ ರಾಗ ತಾಳಗಳ ಲೆಕ್ಕಾಚಾರವಲ್ಲ. ಬದಲಿಗೆ ಅದು ಅನುದಿನದ ಸ್ಮರಣೆ. ಶ್ರದ್ಧೆ, ಭಕ್ತಿ ಹಾಗೂ ಸತತ ಪರಿಶ್ರಮ ಈ ಮೂರು ಅಂಶಗಳು  ಮೈಗೂಡಿ ದಾಗ ಮಾತ್ರ ಸಂಗೀತ ಸಾಧನೆ ಮಾಡಲು ಸಾಧ್ಯ’ ಎಂದು ಸಂಗೀತ ಸಾಮ್ರಾಟ್ ಚಿತ್ರವೀಣಾ ಎನ್.ರವಿಕಿರಣ್ ತಿಳಿಸಿದರು.

ಗಾನಕಲಾಭೂಷಣ ವೀಣೆ ರಾಜಾರಾವ್ ಸ್ಮಾರಕ ಪ್ರತಿಷ್ಠಾನವು ಎನ್ಎಂಕೆಆರ್‌ವಿ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ‘ವೀಣೆ ರಾಜಾರಾವ್ ರಾಷ್ಟ್ರೀಯ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು.

‘ಸಂಗೀತದ ವಿದ್ಯಾರ್ಥಿಗಳು ನಾದೋಪಾಸ ಕರ ಸಾಧನೆಯನ್ನು  ಸತತವಾಗಿ ಆಲಿಸಬೇಕು. ಹಾಡುವುದಕ್ಕೂ ಮೊದಲು ಉತ್ತಮ ಕೇಳುಗ ರಾಗಬೇಕು’ ಎಂದು ಸಲಹೆ ನೀಡಿದರು.

‘ಪ್ರಶಸ್ತಿ ಪಡೆಯುವುದು ಎಂದರೆ ಜನರ ಆಶೀರ್ವಾದ ಪಡೆಯುವುದಷ್ಟೇ ಅಲ್ಲ ಹೊಸ ಜವಾಬ್ದಾರಿಯನ್ನು ಹೆಗೆಲೇರಿಸಿಕೊಂಡಂತೆ. ನನ್ನ ಎಲ್ಲ ಸಾಧನೆಗೂ ತಂದೆ ಚಿತ್ರವೀಣೆ ನರಸಿಂಹನ್ ಅವರೇ ಪ್ರೇರಣೆ’ ಎಂದು ಹೇಳಿದರು.

ಸಂಗೀತ ವಿಮರ್ಶಕ ಪ್ರೊ.ಮೈಸೂರು ವಿ. ಸುಬ್ರಹ್ಮಣ್ಯ, ‘ರವಿಕಿರಣ ತನ್ನ ಎರಡನೇ ವಯಸ್ಸಿ ನಲ್ಲಿಯೇ ರಾಗಗಳನ್ನು ಗುರುತಿಸುವ ಸಂಗೀತ ಕಚೇರಿ ಮಾಡಿದ್ದ. ಅದರಲ್ಲಿ ನಾನು ಭಾಗವಹಿ ಸಿದ್ದೆ. ಆರಂಭದಲ್ಲಿ ಇಷ್ಟು ಸಣ್ಣ ಮಗು ರಾಗ ಗಳನ್ನು ಗುರುತಿಸಲು ಸಾಧ್ಯವೇ ಎಂಬ ಅನು ಮಾನವಿತ್ತು. ಕಚೇರಿ ಮುಗಿಯುವ ಹೊತ್ತಿಗೆ ಬರೋಬ್ಬರಿ 72 ರಾಗಗಳನ್ನು ಸುಲಲಿತವಾಗಿ ತೊದಲು ಮಾತಿನಿಂದ ಗುರುತಿಸಿದ್ದ' ಎಂದು ನೆನಪಿಸಿಕೊಂಡರು.

‘ಸಾಮಾನ್ಯವಾಗಿ ಬಾಲಪ್ರತಿಭೆ ಬಾಲ್ಯದಲ್ಲಿ ಅರಳಿ, ಯೌವ್ವನದಲ್ಲಿ ಚಿವುಟಿ ಹೋಗುವುದೇ ಹೆಚ್ಚು. ಆದರೆ,  ರವಿಕಿರಣ ಬಾಲಕನಾಗಿದ್ದಾಗಿ ತೋರ್ಪಡಿಸಿದ್ದ ಪ್ರತಿಭೆಯನ್ನು ಮುಂದುವರಿಸಿ ಕೊಂಡು ಅನನ್ಯ ಸಾಧನೆ ಮಾಡಿದ್ದೇನೆ. ಪ್ರತಿ ಬಾರಿಯೂ ಕೇಳುಗರಿಗೆ ಹೊಸತನವನ್ನು ನೀಡುವ ನಿಜವಾದ ನಾದೋಪಾ ಸಕನಾಗಿದ್ದಾನೆ' ಎಂದು ಶ್ಲಾಘಿಸಿದರು.

ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಪುತ್ರಿ ಡಾ.ರಾಧಾ ವಿಶ್ವನಾಥನ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ನಂತರ ಎನ್. ರವಿಕಿರಣ್  ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ವೀಣೆ ರಾಜಾರಾವ್ ಸ್ಮಾರಕ ಪ್ರತಿಷ್ಠಾನದ  ಜಾಹ್ನವಿ, ಡಾ.ಆರ್. ಪೂರ್ಣಿಮಾ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT