ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಶೋಧನೆಗೆ ವಯಸ್ಸು ಅಡ್ಡಿಯಲ್ಲ’

ಭಾರತದ ಯುವ ನ್ಯಾನೊ ವಿಜ್ಞಾನಿ ಪ್ರಶಸ್ತಿ ಪ್ರದಾನ
Last Updated 16 ಏಪ್ರಿಲ್ 2015, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ವ್ಯಕ್ತಿಯ ವಯಸ್ಸಿಗೂ ಸಂಶೋಧನಾ ಚಟುವಟಿಕೆಗೂ ಸಂಬಂಧವೇ ಇಲ್ಲ. ನನಗೆ ತೃಪ್ತಿ ನೀಡುವಂತಹ ಸಾಧನೆ ಮೂಡಿಬಂದಿದ್ದು ನನ್ನ 73ನೇ ವಯಸ್ಸಿನಲ್ಲಿ. ಪ್ರಯೋಗಾಲಯದೊಳಗೆ ಕೆಲಸ ಮಾಡುವಾಗ ವಯಸ್ಸು ಆಗಿದ್ದೇ ಗೊತ್ತಾಗುವುದಿಲ್ಲ’ ಎಂದು ಹಿರಿಯ ವಿಜ್ಞಾನಿ ಪ್ರೊ. ಸಿಎನ್‌ಆರ್‌ ರಾವ್‌ ಅಭಿಪ್ರಾಯಪಟ್ಟರು.

ನ್ಯಾನೊ ಟೆಕ್ನಾಲಜಿ ಫೋರಂ ಫಾರ್‌ ಇಂಡಿಯನ್‌ ಸೈಂಟಿಸ್ಟ್ಸ್‌ ವತಿಯಿಂದ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಅರಿಂದಮ್‌ ಘೋಷ್‌ ಅವರಿಗೆ ‘ಆಕ್ಸ್‌ಫರ್ಡ್‌ ಇನ್‌ಸ್ಟ್ರುಮೆಂಟ್ಸ್‌ ಭಾರತದ ಯುವ ನ್ಯಾನೊ ವಿಜ್ಞಾನಿ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ಯುರೋಪ್‌ನಲ್ಲಿ 90 ವರ್ಷ ದಾಟಿದ ಎಷ್ಟೋ ಹಿರಿಯ ವಿಜ್ಞಾನಿಗಳು ಸಂಶೋಧನಾ ಕ್ಷೇತ್ರದಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದಾರೆ’ ಎಂದು ಅವರು ತಿಳಿಸಿದರು.

‘ಭೌತಶಾಸ್ತ್ರ ಕ್ಷೇತ್ರದಲ್ಲಿ ಹೊಸ, ಹೊಸ ಸಂಶೋಧಕರು ಕಾಣುತ್ತಿರುವುದು ಸಂತಸದ ಬೆಳವಣಿಗೆ. ತಿಂಗಳಿಗೊಂದು ಏನಾದರೂ ಹೊಸ ಶೋಧದ ಸಮಾಚಾರ ಸಿಗುತ್ತಿರುವುದು ಸೋಜಿಗ ಉಂಟುಮಾಡಿದೆ’ ಎಂದು ಮೆಚ್ಚುಗೆಯಿಂದ ನುಡಿದರು. ‘ಪ್ರಶಸ್ತಿ ಜತೆಗೆ ನೀಡಿದ ಬಹುಮಾನದ ಮೊತ್ತವನ್ನು ಇನ್ನಷ್ಟು ಹೆಚ್ಚಿಸಬೇಕಿತ್ತು’ ಎಂದು ಚಟಾಕಿ ಹಾರಿಸಿದರು.

ಆಕ್ಸ್‌ಫರ್ಡ್‌ ಇನ್‌ಸ್ಟ್ರುಮೆಂಟ್ಸ್‌ನಿಂದ ನೀಡಲಾಗುತ್ತಿರುವ ಮೊದಲ ಯುವ ನ್ಯಾನೊ ವಿಜ್ಞಾನಿ ಪ್ರಶಸ್ತಿ ಇದಾಗಿದ್ದು, ₨ 2 ಲಕ್ಷ ಬಹುಮಾನ ಒಳಗೊಂಡಿದೆ. ಒಟ್ಟು 43 ಸಂಶೋಧಕರ ಹೆಸರು ಸ್ಪರ್ಧೆಯಲ್ಲಿತ್ತು. ಅಂತಿಮವಾಗಿ ಘೋಷ್‌ ಆಯ್ಕೆಯಾದರು.

ಲಂಡನ್‌ ವಿಶ್ವವಿದ್ಯಾಲಯ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಮೈಕೆಲ್‌ ಪೆಪ್ಪರ್‌, ಆಕ್ಸ್‌ಫರ್ಡ್‌ ಇನ್‌ಸ್ಟ್ರುಮೆಂಟ್ಸ್‌ನ ಪ್ರೊ. ಮೈಕೆಲ್‌ ಕದ್ಬರ್ಟ್‌ ಹಾಗೂ ಅರಿಂದಮ್‌ ಘೋಷ್‌ ಉಪನ್ಯಾಸ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT