ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಸ್ಕೃತಿ ಇಲಾಖೆಯಲ್ಲಿ ಶೀಘ್ರವೇ ಇ–ಆಡಳಿತ’

Last Updated 12 ನವೆಂಬರ್ 2014, 19:42 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡ ಮತ್ತು ಇಲಾಖೆ­ಯಲ್ಲಿ ಶೀಘ್ರದಲ್ಲಿಯೇ ಇ – ಆಡಳಿತ ಜಾರಿಗೆ ತರಲಾಗು­ವುದು’ ಎಂದು  ಸಚಿವೆ ಉಮಾಶ್ರೀ ಹೇಳಿದರು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಬುಧ­ವಾರ ಆಯೋಜಿಸಿದ್ದ 2013–14,  2014 –15ನೇ ಸಾಲುಗಳ ‘ಕರ್ನಾ­­ಟಕ ಕಲಾಶ್ರೀ’ ಪ್ರಶಸ್ತಿ ಪ್ರದಾನ ಸಮಾ­ರಂಭದಲ್ಲಿ ಅವರು ಮಾತನಾಡಿದರು.

‘ಇಲಾಖೆಯನ್ನು ಬಲಪಡಿಸುವುದ­ರೊಂದಿಗೆ ಉತ್ತಮ ಸ್ವರೂಪ ನೀಡಲು ನಿರ್ಧರಿಸಲಾಗಿದೆ. ಜತೆಗೆ, ಇಲಾಖೆಯ ಹಣವನ್ನು ದುರುಪಯೋಗ ಮಾಡಿಕೊ­ಳ್ಳುವ ಶಕ್ತಿಗಳನ್ನು ದೂರವಿಟ್ಟು, ಪಾರದ­ರ್ಶಕತೆ ಕಾಯ್ದುಕೊಳ್ಳುವುದ­ಕ್ಕಾಗಿ ಕೆಲವೇ ದಿನಗಳಲ್ಲಿ ಇ – ಆಡಳಿತ ವ್ಯವಸ್ಥೆ ಜಾರಿಗೆ ತರಲಾಗುವುದು’ ಎಂದು ಹೇಳಿದರು.

‘ರಾಜ್ಯದಲ್ಲಿರುವ ಸಂಘ ಸಂಸ್ಥೆಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಎಲ್ಲ ಜಿಲ್ಲೆಗಳ ಸಾಂಸ್ಕೃತಿಕ ಸಂಘಗಳಿಂದ ಅನು­ದಾನಕ್ಕೆ ಅರ್ಜಿ ಆಹ್ವಾನಿಸಲಾ­ಗಿತ್ತು. ಈ ವರ್ಷ ಶೇ 30ರಷ್ಟು ಜಾಸ್ತಿ ಅರ್ಜಿಗಳು ಬಂದಿವೆ.ಅವುಗಳ ಪರಿಶೀಲನೆಗಾಗಿ ಸಮಿತಿ­ಯೊಂದನ್ನು ನೇಮಕ ಮಾಡಿ, ಆಯ್ಕೆಯಾದ ಸಂಸ್ಥೆ­ಗಳ ಬ್ಯಾಂಕ್‌ ಖಾತೆಗಳಿಗೆ ಆರ್‌ಟಿಜಿಎಸ್‌ (ಬ್ಯಾಂಕ್‌ ಶಾಖೆಗೆ ತಕ್ಷಣವೇ ಹಣ ವರ್ಗಾವಣೆ ಮಾಡು­ವಂತಹ ವ್ಯವಸ್ಥೆ) ಮೂಲಕ ನೇರ ಧನ ಸಹಾಯ ಸಂದಾಯ ಮಾಡಲಾ­ಗುವುದು’ ಎಂದರು.

ತಬಲಾ ವಾದಕ ಪಂಡಿತ್ ರಘು­ನಾಥ್‌ ನಾಕೋಡ್‌, ಗಮಕಿ ಸಿ.ವಿ. ಶ್ರೀಮತಿ ಸೇರಿದಂತೆ 19 ಕಲಾವಿದರಿಗೆ 2013 – 14ನೇ ಸಾಲಿನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ವೀಣಾ ವಾದಕ ಡಿ.ಬಾಲಕೃಷ್ಣ, ನೃತ್ಯ ನಿರ್ದೇಶಕಿ ಪ್ರೊ.ವಿಜಯಾ ಮಾರ್ತಾಂಡ, ಗಾಯಕಿ ಮಂಜುಳಾ ಗುರುರಾಜ್‌ ಸೇರಿದಂತೆ 18 ಕಲಾವಿ­ದರಿಗೆ 2014 – 15ನೇ ಸಾಲಿನ ಪ್ರಶಸ್ತಿಯನ್ನು ನೀಡಿ ಗೌರವಿಸ­ಲಾಯಿತು. ಕಾರ್ಯಕ್ರಮದಲ್ಲಿ ಗಾಯಕಿ ಇಂದೂ ವಿಶ್ವನಾಥ್ ಅವರಿಗೆ ರಾಜ್ಯೋತ್ಸವ ಪ್ರಶ­ಸ್ತಿ­ಯನ್ನು ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT