ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಹಿತ್ಯ ಸಹೃದಯರ ಮನ ಮುಟ್ಟಲಿ’

Last Updated 3 ನವೆಂಬರ್ 2014, 5:10 IST
ಅಕ್ಷರ ಗಾತ್ರ

ವಿಜಾಪುರ: -ಸಾಹಿತ್ಯ ಸಹೃದಯನ ಮನಮುಟ್ಟಿ ಗೆಲ್ಲಬೇಕು. ಸಮಕಾಲೀನ ಸಮಾಜದ ಚಿಂತನೆ ಸಾಹಿತ್ಯದಲ್ಲಿದ್ದಾಗ ಅದು ಜನಸ್ಪಂದನೆಗೆ ಪಾತ್ರವಾಗುತ್ತದೆ ಎಂದು ಕವಯತ್ರಿ ಡಾ.ಸರಸ್ವತಿ ಚಿಮ್ಮಲಗಿ ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ  ಸಾಹಿತ್ಯ ಅಕಾಡೆಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿ­ಯಿಂದ ಭಾನುವಾರ ಕಸಾಪ ಭವನದಲ್ಲಿ ನಡೆದ ಕರ್ನಾಟಕ ಸಾಹಿತ್ಯ ಅಕಾಡೆಮಿ ಸುವರ್ಣ ಸಂಭ್ರಮ ಜಿಲ್ಲಾ ಕವಿಗೋಷ್ಠಿಯಲ್ಲಿ ಮಾತನಾಡಿ ಸಾಹಿತಿ ಸತತ ಅಭ್ಯಾಸ ಮಾಡಬೇಕು. ಸಮಾಜ­ವನ್ನು ಅಂತರಂಗದ ಕಣ್ಣುಗಳಿಂದ ನೋಡಬೇಕು. ಈ ಪ್ರಕ್ರಿಯೆಯಿಂದ ಮೂಡಿಬಂದ ಕಾವ್ಯ ಸಾಹಿತ್ಯ ಶ್ರೇಷ್ಠತೆ ಪಡೆಯುತ್ತದೆ ಎಂದು ಹೇಳಿದರು.

ಸಾಹಿತಿ ಈಶ್ವರಚಂದ್ರ ಚಿಂತಾಮಣಿ ಮಾತನಾಡಿ ಕವಿ ಸಹಜ ಸ್ವಾಭಾವಿ­ಕವಾಗಿ ಕವಿತೆ ಬರೆಯಬೆಕು. ನಮ್ಮ ದೇಶಿ ನೆಲೆಯ ಆಲೋಚನೆಗಳನ್ನು ಹೀರಿಕೊಂಡು ಸೃಜನಶೀಲತೆ­ಯಲ್ಲಿ ತೊಡಗಿದಾಗ ಒಳ್ಳೆಯ ಸಾಹಿತ್ಯ ರಚನೆಗೊಳ್ಳುತ್ತದೆ. ಸಾಹಿತ್ಯ ನಮ್ಮ ಮನಸ್ಸು ಅರಳಿಸುವ ಕೆಲಸ ಮಾಡ­ಬೇಕು ಎಂದು ಹೇಳಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ­ರಾದ ಡಾ.ಎಸ್.ಕೆ.ಕೊಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿದರು.
ಕವಿಗೋಷ್ಠಿಯಲ್ಲಿ ರಂಗನಾಥ ಅಕ್ಕಲಕೋಟ, ವಿದ್ಯಾವತಿ ಅಂಕಲಗಿ, ಡಿ.ಎಸ್.ಚಳಗೇರಿ, ಶ್ರೀದೇವಿ ಉತ್ಲಾಸರ, ಡಾ.ಅಮೀ­ರುದ್ದಿನ್ ಖಾಜಿ, ಡಾ.ರೇಖಾ ಪಾಟೀಲ, ಬಾಬು­ರಾವ ಕುಲಕರ್ಣಿ, ಶೇಷರಾವ ಮಾನೆ, ಹೇಮಲತಾ ವಸ್ತ್ರದ, ಕೆ.ಸುನಂದಾ, ಆರ್.ಕೆ.ಬಡಿಗೇರ, ಶಿವಾನಂದ ಹಿರೇಮಠ, ಶೈಲಶ್ರೀ ಪಟ್ಟಣಶೆಟ್ಟಿ, ಸಂಗಮೇಶ ಬದಾಮಿ, ಡಾ.ಸುಜಾತಾ ಚಲವಾದಿ, ರಾಜೇಂದ್ರ ಬಿರಾದಾರ, ರಮೇಶ ಬಸರಗಿ ಕವಿತೆ ವಾಚಿಸಿದರು. ಡಾ.ಕಾಂತು ಇಂಡಿ, ಡಾ.ಎಂ.­ಎಸ್.­ಮದಭಾವಿ, ಕೆ.ಎಫ್.ಅಂಕಲಗಿ, ಸಿ.ಎಂ.­ದೇವರಡ್ಡಿ, ಎಸ್.ಎಸ್.ಖಾದ್ರಿ ಇನಾಮ­ದಾರ, ಅತೀಕ ತಾಜಿಮ ಉಪಸ್ಥಿತರಿದ್ದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನ ಮೇತ್ರಿ ನಿರೂಪಿಸಿದರು. ಡಾ.ವಿ.ಎಂ. ಬಾಗಯತ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT